ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯರಿಂದ ಅಕ್ರಮವಾಗಿ ಸಾಗರೋತ್ತರ ಖಾತೆಗೆ ಹಣ ವರ್ಗಾವಣೆ ಮೊತ್ತ ಬಹಿರಂಗ

By ವಿಕಾಸ್ ನಂಜಪ್ಪ
|
Google Oneindia Kannada News

ಲಂಡನ್, ಅಕ್ಟೋಬರ್ 05: ಆರ್ಥಿಕವಾಗಿ ದಿವಾಳಿಯಾಗಿರುವ ಮಲ್ಯ ಅವರು ಯುಬಿ ಸಮೂಹದ ಮುಖ್ಯಸ್ಥನ ಸ್ಥಾನ ತೊರೆದ ಬಳಿಕ ಸಿಕ್ಕ ಮೊತ್ತವನ್ನು ಗುಟ್ಟಾಗಿ ಸಾಗರೋತ್ತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ನಿಜ. ಈ ಮುಂಚೆ ತಿಳಿಸಿದಂತೆ 422 ಕೋಟಿ ರು ಅಲ್ಲ, ಒಟ್ಟು 500 ಕೋಟಿ ರು ರವಾನಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಲಂಡನ್ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.

ಬಂಧನದ ಕೆಲ ಹೊತ್ತಿಗೆ ಉದ್ಯಮಿ ವಿಜಯ್ ಮಲ್ಯಗೆ ಜಾಮೀನುಬಂಧನದ ಕೆಲ ಹೊತ್ತಿಗೆ ಉದ್ಯಮಿ ವಿಜಯ್ ಮಲ್ಯಗೆ ಜಾಮೀನು

ಮಲ್ಯ ಅವರನ್ನು ಮಂಗಳವಾರ ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದುಕೊಂಡಿದ್ದರು. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಲ್ಲಿರುವ ಹಸ್ತಾಂತರ ಅರ್ಜಿಯ ವಿಚಾರಣೆ ಡಿಸೆಂಬರ್ ನಲ್ಲಿ ನಡೆಯಲಿದೆ.

Mallya laundered Rs 500 crore says ED

ಲಂಡನ್ನಿನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ಗೆ ಭಾರತದ ಜಾರಿ ನಿರ್ದೇಶನಾಲಯ ನೀಡಿರುವ ಮಾಹಿತಿಯಂತೆ ಯುಕೆ ಅಲ್ಲದೆ, ಯುಎಸ್, ಫ್ರಾನ್ಸ್, ಐರ್ಲೆಂಡ್ ಹಾಗೂ ಸ್ವಿಟ್ಜರ್ಲೆಂಡ್ ನಲ್ಲಿರುವ ತಮ್ಮ ಬ್ಯಾಂಕ್ ಖಾತೆಗಳಿಗೂ ಅಕ್ರಮವಾಗಿ ಹಣ ರವಾನೆ ಮಾಡಿಕೊಂಡಿದ್ದಾರೆ.

ಶೆಲ್ ಕಂಪನಿಗಳಲ್ಲಿ ಬೇನಾಮಿ ಹೆಸರಿನಲ್ಲಿ ನಿರ್ದೇಶಕರನ್ನು ಸ್ಥಾಪಿಸಿ ಅಕ್ರಮವಾಗಿ ಹಣ ರವಾನಿಸಿದ್ದಾರೆ.ಕಿಂಗ್ ಫಿಶರ್ ಸಂಸ್ಥೆ ದಿವಾಳಿ ಎದ್ದಿದ್ದರೂ ಐಡಿಬಿಐನಿಂದ ಮಲ್ಯ ಅವರು 900 ಕೋಟಿ ರು ಸಾಲ ಪಡೆದಿದ್ದರು. ಆದರೆ, ಸಾಲ ಹಿಂತಿರುಗಿಸಿರಲಿಲ್ಲ. ದಿವಾಳಿಯಾಗಿದ್ದರೂ ಇಷ್ಟು ಮೊತ್ತದ ಸಾಲ ನೀಡಿದ್ದು ಏಕೆ ಎಂಬ ಪ್ರಶ್ನೆ ಮೂಡಿತ್ತು.

2009ರಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ನೀಡಲಾದ 900 ಕೋಟಿ ರು ಸಾಲದಲ್ಲಿ 150 ಕೋಟಿ ರು ಮೊದಲ ಕಂತಿನಲ್ಲಿ ಹಾಗೂ 750 ಕೋಟಿ ರು ಎರಡನೇ ಕಂತಿನಲ್ಲಿ ನೀಡಲಾಗಿದೆ. ಈ ಪೈಕಿ 81 ಕೋಟಿ ರು ಗಳನ್ನು ವಿಮಾನ ಪ್ರಾಧಿಕಾರಕ್ಕೆ ಕಿಂಗ್ ಫಿಷರ್ ಸಂಸ್ಥೆ ಕಟ್ಟಿದೆ. 10 ಕೋಟಿ ಎಂದು ತೈಲ ಕಂಪನಿ ಹಾಗೂ 17 ಕೋಟಿ ರು ಕೇಟರಿಂಗ್ ಬಳಸಲಾಗಿದೆ.

English summary
Rs 500 crore of the Rs 900 crore loan taken from the IDBI bank by former liquor baron Vijay Mallya had been laundered the Enforcement Directorate has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X