• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓವಲ್ ನಲ್ಲಿ 'Enough is Engough' ಎಂದ ಉದ್ಯಮಿ ಮಲ್ಯ

By Mahesh
|
   ಓವಲ್ ನಲ್ಲಿ ಪ್ರತ್ಯಕ್ಷವಾದ ಉದ್ಯಮಿ ವಿಜಯ ಮಲ್ಯ | Oneindia Kannada

   ಲಂಡನ್, ಸೆಪ್ಟೆಂಬರ್ 08: ಸಾವಿರಾರು ಕೋಟಿ ಸಾಲ ಮಾಡಿ ಭಾರತದಿಂದ ಲಂಡನ್ನಿಗೆ ಪರಾರಿಯಾಗಿರುವ ಉದ್ಯಮಿ ಮಲ್ಯ ಅವರನ್ನು ಭಾರತಕ್ಕೆ ಕರೆ ತರುವ ಪ್ರಯತ್ನಗಳು ಜಾರಿಯಲ್ಲಿದೆ. ನಿಮ್ಮ 'ಘರ್ ವಾಪ್ಸಿ' ಯಾವಾಗ ಎಂದು ಮಾಧ್ಯಮದವರು ಕೇಳಿದರೆ, ಗರಂ ಆದ ಮಲ್ಯ 'Enough is Engough' ಎಂದು ಮುಂದೆ ಸಾಗಿದ ಘಟನೆ ನಡೆದಿದೆ.

   ನಾನು ಭಾರತಕ್ಕೆ ಹಿಂತಿರುಗಬೇಕಾದ ಬಗ್ಗೆ ನ್ಯಾಯಾಧೀಶರು ನಿರ್ಧಾರ ಕೈಗೊಳ್ಳುತ್ತಾರೆ. ನಾನು ಇಲ್ಲಿ ನಿಮಗೆ ಸಂದರ್ಶನ ನೀಡುವುದಿಲ್ಲ ಎಂದಿದ್ದಾರೆ.

   ಇಂಗ್ಲೆಂಡ್​ ಮತ್ತು ಭಾರತ ನಡುವಿನ ಓವಲ್ ನಲ್ಲಿ ನಡೆದಿರುವ ಐದನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದ ಮೊದಲ ದಿನದ ಆಟ ವೀಕ್ಷಣೆಗೆ ಮಲ್ಯ ಬಂದಿದ್ದರು. ದಕ್ಷಿಣ ಲಂಡನ್​ನ ಕೆನ್ನಿಂಗ್ಟನ್​ನ ಓವಲ್ ಮೈದಾನ ಹೊರಗಡೆ ಕಂಡ ಉದ್ಯಮಿ ವಿಜಯ್​ ಮಲ್ಯ ಅವರನ್ನು ಮಾತನಾಡಿಸಲು ಪತ್ರಕರ್ತರು ಯತ್ನಿಸಿದರು.

   ಈ ಸಂದರ್ಭದಲ್ಲಿ ಮಾತನಾಡಲು ನಿರಾಕರಿಸಿದರೂ ಪತ್ರಕರ್ತ ಅಲ್ಲೇ ನಿಂತಿರುವುದನ್ನು ಕಂಡು ಗರಂ ಆದ ಮಲ್ಯ, ಎನಾಫ್ ಇಸ್ ಎನಾಫ್ ನೀನು ಅಲ್ಲಿ ನಿಂತರೆ ನಾನು ಇಲ್ಲೇ ನಿಂತಿರುತ್ತೇನೆ. ಎಷ್ಟು ಸಮಯ ಹೀಗೆ ನಿಲ್ಲಬಲ್ಲೆ, ನಾನು ಯಾವುದ್ಡೆ ಮಾಧ್ಯಮಗಳಿಗೆ ಸಂದರ್ಶನ ನೀಡುವುದಿಲ್ಲ ಎಂದರು. ನಾನು ಭಾರತಕ್ಕೆ ಹಿಂತಿರುಗುವುದನ್ನು ನ್ಯಾಯಾಧೀಶರು ನಿರ್ಧಾರ ಮಾಡುತ್ತಾರೆ ಎಂದ ಉತ್ತರಿಸಿ ಅಲ್ಲಿಂದ ನಡೆದರು.

   ಹಲವು ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿರುವ ಮಲ್ಯ ಅವರನ್ನು ವಿಚಾರಣೆ ಕರೆತರಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಆದರೆ, ಇಲ್ಲಿನ ಜೈಲಿನ ಪರಿಸ್ಥಿತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Fugitive offender Vijay Mallya said, "Enough is enough. You stand there, I stand here. How long would you like to stand? I am not giving any media interviews at a cricket game. You appreciate that." Mallya at Oval, England
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more