ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೂಫಾನ್ ಅಬ್ಬರದಿಂದ ಭೂ ಕುಸಿತ: ಕನಿಷ್ಠ 35 ಸಾವು

|
Google Oneindia Kannada News

ಹನೊಯ್, ಅಕ್ಟೋಬರ್ 30: ಭಾರಿ ಪ್ರಬಲ ತೂಫನಿನ ಆರ್ಭಟಕ್ಕೆ ವಿಯೆಟ್ನಾ ದೇಶ ತತ್ತರಿಸಿಹೋಗಿದೆ. 20 ವರ್ಷಗಳಲ್ಲಿಯೇ ಅತ್ಯಂತ ಮಾರಕ ಸ್ವರೂಪದ್ದಾಗಿರುವ ತೂಫಾನಿನಿಂದಾಗಿ ಗುರುವಾರ ದೇಶದ ಅನೇಕ ಭಾಗಗಳಲ್ಲಿ ಭೂಕುಸಿತ, ಮರಗಳ ಉರುಳುವಿಕೆ ಮುಂತಾದ ಅನಾಹುತಗಳಿಂದ ಕನಿಷ್ಠ 35 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.

ಅನೇಕ ಕಡೆ ನೂರಾರು ದೋಣಿಗಳು ಮುಳುಗಿ ಹೋಗಿವೆ. ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕಮಿಷ್ಠ 1.7 ಮಿಲಿಯನ್ ಜನರು ಕತ್ತಲಲ್ಲಿ ಮುಳುಗುವಂತಾಗಿದೆ. ದೇಶದ ಮಧ್ಯ ಭಾಗದಲ್ಲಿನ ಮೂರು ಗ್ರಾಮಗಳಲ್ಲಿ ಭಾರಿ ಅನಾಹುತವಾಗಿದೆ. ಭೂಕುಸಿತಗಳಿಂದ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಅಪಾರ ಪ್ರಮಾಣದಲ್ಲಿ ಕುಸಿದಿರುವ ಮಣ್ಣು ಮತ್ತು ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ಊಹಿಸಲಾಗಿದೆ.

 Vietnam: Typhoon, Landslide Kills At Least 35, Many Missing

ಸೇನಾ ಪಡೆಗಳು ಅವಶೇಷಗಳನ್ನು ಬುಲ್ಡೋಜರ್‌ಗಳ ಸಹಾಯದಿಂದ ತೆರವುಗೊಳಿಸುವ ಮೂಲಕ ಜನರನ್ನು ರಕ್ಷಿಸುವ ಕಾರ್ಯಗಳಲ್ಲಿ ನಿರತವಾಗಿವೆ. ಭೂಕುಸಿತದ ಒಂದು ಸ್ಥಳಕ್ಕೆ ಭೇಟಿ ನೀಡಿರುವ ಉಪ ಪ್ರಧಾನಿ ಟ್ರಿನ್ಹ್ ಡಿನ್ಹ್ ಡುಂಗ್, ರಕ್ಷಣಾ ಕಾರ್ಯಾಚರಣೆಯ ಪ್ರಯತ್ನಗಳಿಗೆ ನೆರವಾಗಲು ಕೂಡಲೇ ಮತ್ತಷ್ಟು ಸೇನಾ ಪಡೆಗಳನ್ನು ರವಾನಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತೂಫಾನ್ 'ಮೊಲಾವೆ' ಹೊಡೆತಕ್ಕೆ ಸಿಕ್ಕಿ ಬುಧವಾರ ಕೆಲವು ಮೀನುಗಾರರ ದೋಣಿಗಳು ಮುಳುಗಿಹೋಗಿದ್ದು 12 ಮೀನುಗಾರರು ಬಲಿಯಾಗಿದ್ದಾರೆ. ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಿದೆ. 14 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ದೇಶದ ಅನೇಕ ಕಡೆ ಅಪಾರ ಹಾನಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಉಂಟಾಗಿರುವ ಹಾನಿಗಳ ಪ್ರಮಾಣ ಮತ್ತು ಸಾವು ನೋವಿಗಳನ್ನು ಅಂದಾಜಿಸಲು ಈಗಲೇ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೇಗವಾಗಿ ಬೀಸುತ್ತಿರುವ ಗಾಳಿಯ ನಡುವೆ ಮಳೆ ಸುರಿಯುತ್ತಿದ್ದು, ಜನರು ಕಂಗಾಲಾಗಿದ್ದಾರೆ. 1.3 ಮಿಲಿಯನ್ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರ ಸಿದ್ಧತೆ ನಡೆಸಿದೆ.

English summary
A powerful Typhoon hits Vietnam has killed at least 35 people and more than 50 missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X