ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವರಿಗೆ ಕೊರೊನಾ ಸೋಂಕು ತಗುಲಲು ಕಾರಣವಾದ ವ್ಯಕ್ತಿಗೆ 5 ವರ್ಷ ಜೈಲು

|
Google Oneindia Kannada News

ವಿಯೆಟ್ನಾಂ, ಸೆಪ್ಟೆಂಬರ್ 08: ಹಲವು ಮಂದಿಗೆ ಕೊರೊನಾ ಸೋಂಕು ಹರಡಲು ಕಾರಣವಾದ ವ್ಯಕ್ತಿಗೆ 5ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಳೆದ ವರ್ಷಕ್ಕಿಂತಲೂ ಭೀಕರವಾಗಿ ಈಗ ಕೊರೊನಾ ಸಾಂಕ್ರಾಮಿಕ ವಿಯೆಟ್ನಾಂನಲ್ಲಿ ಜನರನ್ನು ಬಲಿಪಡೆಯುತ್ತಿದ್ದು, ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ವಿಯೆಟ್ನಾಂನಲ್ಲಿ ಕ್ವಾರಂಟೈನ್ ಉಲ್ಲಂಘನೆ ಮಾಡಿದ ಅನೇಕ ಮಂಡಿಗೆ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.

ಕೊರೊನಾ ಮೂರನೇ ಅಲೆ; ಆರೋಗ್ಯ ಸಚಿವಾಲಯ ಎಚ್ಚರಿಕೆಕೊರೊನಾ ಮೂರನೇ ಅಲೆ; ಆರೋಗ್ಯ ಸಚಿವಾಲಯ ಎಚ್ಚರಿಕೆ

ಹಲವರಿಗೆ ಕೊರೊನಾ ಸೋಂಕು ತಗುಲಲು ಕಾರಣನಾದ ವ್ಯಕ್ತಿಗೆ ವಿಯೆಟ್ನಾಂ ನ್ಯಾಯಾಲಯ 5 ವರ್ಷ ಸೆರೆವಾಸ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಲೆ ವಾನ್ ಎಂಬಾತ ಈ ಹಿಂದೆ ಕೊರೊನಾಗೆ ತುತ್ತಾಗಿದ್ದ.

Vietnam Jails Man For 5 Years For Spreading Covid-19

ಆ ಸಂದರ್ಭದಲ್ಲಿ ಕ್ವಾರಂಟೈನ್ ನಲ್ಲಿ ಇರುವುದು ಬಿಟ್ಟು ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ. ಅವನ ಸ್ವಚ್ಛಂದ ತಿರುಗಾಟದಿಂದಾಗಿ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು. ಆ ಸೋಂಕಿತರಲ್ಲಿ ಓರ್ವ ಮೃತಪಟ್ಟಿದ್ದ.

ಏಪ್ರಿಲ್ ಅಂತ್ಯದ ವೇಳೆ ಬಹುಪಾಲು ಸೋಂಕುಗಳು ಮತ್ತು ಸಾವುಗಳು ವರದಿಯಾಗಿವೆ. ವಿಯೆಟ್ನಾಂನ ರಾಜಧಾನಿ ಹನೋಯಿ ಮತ್ತು ವಾಣಿಜ್ಯ ಕೇಂದ್ರ ಹೋ ಚಿ ಮಿನ್ಹ್ ನಗರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಟ್ಟುನಿಟ್ಟಾದ ಲಾಕ್‌ಡೌನ್‌ ಹೇರಲಾಗಿದೆ.

ಇತರರಿಗೆ ಕೊರೊನಾ ವೈರಸ್ ಹರಡಿದ್ದಕ್ಕಾಗಿ ವಿಯೆಟ್ನಾಂನಲ್ಲಿ ಹಲವು ಜನರಿಗೆ ಶಿಕ್ಷೆ ವಿಧಿಸಲಾಗಿದೆ. ಹೈ ಡುವಾಂಗ್‌ನಲ್ಲಿ 32 ವರ್ಷದ ವ್ಯಕ್ತಿಗೆ ಜುಲೈನಲ್ಲಿ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಯೆಟ್ನಾಂ ಏರ್‌ಲೈನ್ಸ್ ವಿಮಾನ ಸೇವಕರೊಬ್ಬರನ್ನು ಮಾರ್ಚ್‌ನಲ್ಲಿ 2 ವರ್ಷ ಅಮಾನತುಗೊಳಿಸಿ ಜೈಲು ಶಿಕ್ಷೆ ವಿಧಿಸಲಾಗಿತ್ತು.

28ರ ಹರೆಯದ ಲೆ ವಾನ್ ದಕ್ಷಿಣ ಪ್ರಾಂತ್ಯದಲ್ಲಿ 21 ದಿನಗಳ ಹೋಮ್ ಕ್ಯಾರೆಂಟೈನ್ಆಗುವುದು ಬಿಟ್ಟು ಹೊರಗಡೆ ತಿರುಗಾಡುವ ಮೂಲಕ ಅನೇಕರಿಗೆ ವೈರಸ್ ಅಂಟಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕೊರೊನಾ ಹಾಟ್‌ಸ್ಪಾಟ್ ಆಗಿರುವ ಹೋ ಚಿ ಮಿನ್ಹ್ ನಗರಕ್ಕಿಂತಲೂ ಕಾ ಮೌನಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಜುಲೈ 7ರಂದು ಪರೀಕ್ಷೆ ಮಾಡಿಸಿದಾಗ ಲೆ ವಾನ್ ಗೆ ಕೊರೊನಾ ದೃಢಪಟ್ಟಿತ್ತು. ಆತನ ಹೋಮ್ ಮೆಡಿಕಲ್ ಕ್ಯಾರೆಂಟೈನ್ ರೆಗ್ಯುಲೇಶನ್‌ನ ಉಲ್ಲಂಘನೆಯಿಂದ ಸುಮಾರು 8 ಜನರಿಗೆ ಸೋಂಕು ತಗುಲಿತ್ತು.

ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಇತರ ಜನರಿಗೆ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡಲು ಕಾರಣನಾದ ಲೆ ವಾನ್ ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ವಿಯೆಟ್ನಾಂ ನ್ಯಾಯಾಲಯ ಆದೇಶಿಸಿತು.

ಕಳೆದ ವರ್ಷಕ್ಕಿಂತಲೂ ಈಗ ಕೊರೊನಾ ಸಾಂಕ್ರಾಮಿಕ ರೋಗವು ವಿಯೆಟ್ನಾಂನಲ್ಲಿ ಹೆಚ್ಚು ಜನರನ್ನು ಬಲಿಪಡೆಯುತ್ತಿದೆ. ಹೀಗಾಗಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಇದುವರೆಗೆ ಸುಮಾರು 5.40 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 13 ಸಾವಿರಕ್ಕೂ ಹೆಚ್ಚು ಜನರು ವೈರಸ್ ಗೆ ಬಲಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ತುರ್ತು ವಿಚಾರಣೆ ನಡೆಸಿದ ವಿಯೆಟ್ನಾಂ ಕೋರ್ಟ್ ಲೆ ವ್ಯಾನ್ ಟ್ರೈ ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜುಲೈ ನಲ್ಲಿ 32 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ಸೋಂಕು ಹರಡಿದ್ದಾರೆ ಎಂದು ಅವರಿಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಮಾರ್ಚ್ ತಿಂಗಳಿನಲ್ಲಿ ಕೊರೊನಾ ಸೋಂಕು ಹರಡಿದ್ದಕ್ಕಾಗಿ ವಿಯೆಟ್ನಾಂ ಏರ್ ಲೈನ್ಸ್ ನ ಫ್ಲೈಟ್ ಅಟೆಂಡೆಂಟ್ ಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಭಾರತದಲ್ಲಿ ಕೊರೊನಾ ಸೋಂಕಿನ ಹೊಸ ಲಕ್ಷಣಗಳು: ಜ್ವರ, ಕೆಮ್ಮು, ಗಂಟಲು ನೋವು, ಶೀತ, ಉಸಿರಾಟದಲ್ಲಿ ಏರುಪೇರು ಕೊರೊನಾ ಸೋಂಕಿನ ಕೆಲವು ಸಾಮಾನ್ಯ ಲಕ್ಷಣಗಳಾಗಿದ್ದವು. ಈ ಲಕ್ಷಣಗಳ ಆಧಾರದ ಮೇಲೆ ಕೊರೊನಾ ಸೋಂಕಿನ ಶೀಘ್ರ ಪತ್ತೆ ಕಾರ್ಯ ಸಾಧ್ಯವಾಗಿತ್ತು. ಇದೀಗ ಇನ್ನೂ ಕೆಲವು ಹೊಸ ಲಕ್ಷಣಗಳನ್ನು ಮಹಾರಾಷ್ಟ್ರ ಕೊರೊನಾ ಸೋಂಕು ನಿಯಂತ್ರಣ ಕಾರ್ಯಪಡೆ ಪತ್ತೆ ಮಾಡಿದೆ.

'ಕೆಲವು ಕೊರೊನಾ ರೋಗಿಗಳಲ್ಲಿ ಹೊಸ ಲಕ್ಷಣಗಳು ಕಂಡುಬರುತ್ತಿವೆ. ಬಾಯಿ ಒಣಗುವಿಕೆ, ತಲೆನೋವು, ಶ್ರವಣ ತೊಂದರೆ, ಚರ್ಮದ ಸಮಸ್ಯೆಯಂಥ ಹೊಸ ಲಕ್ಷಣಗಳು ಕಂಡುಬರಬಹುದು. ಈ ಬಗ್ಗೆ ವೈದ್ಯರು ಗಮನ ಹರಿಸಬೇಕು' ಎಂದು ಕೊರೊನಾ ಕಾರ್ಯಪಡೆ ಸದಸ್ಯ ಡಾ. ರಾಹುಲ್ ಪಂಡಿತ್ ತಿಳಿಸಿದ್ದಾರೆ.

ಸೋಂಕಿನಿಂದ ಉಂಟಾಗುವ ಉರಿಯೂತ ಅಥವಾ ಹೆಪ್ಪುಗಟ್ಟುವಿಕೆ ವಾಸನಾ ಗ್ರಹಿಕೆಯ ಮೇಲೆ ಪರಿಣಾಮ ಬೀರಿದಂತೆಯೇ ಶ್ರವಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಆರ್‌ಎನ್‌ ಕೂಪರ್ ಆಸ್ಪತ್ರೆಯ ಇಎನ್‌ಡಿ ಮುಖ್ಯಸ್ಥ ಡಾ. ಸಮೀರ್ ಭಾರ್ಗವ ಕೂಡ ಹೇಳಿದ್ದಾರೆ. ಈ ಲಕ್ಷಣಗಳುಳ್ಳ ಕೆಲವು ಪ್ರಕರಣಗಳು ಈಚೆಗೆ ಕಂಡುಬರುತ್ತಿವೆ ಎಂದು ಅವರು ಹೇಳಿದ್ದಾರೆ.

English summary
A Vietnamese man has been sentenced to five years in jail for spreading Covid-19 after he breached home quarantine rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X