ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಕಿತ್ತಾಡಿಕೊಳ್ಳುವ ಪತಿ-ಪತ್ನಿಯರ ಬದುಕಿಗೆ ಸ್ಫೂರ್ತಿ ಈ ಕಥೆ

|
Google Oneindia Kannada News

ಕೀವ್‌, ಮೇ 03: ಉಕ್ರೇನ್ ನೆಲದಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧ ನೂರಾರು ಜೀವಗಳನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಸಾವಿರಾರು ಜನರ ಜೀವನವನ್ನೇ ಕಿತ್ತುಕೊಂಡಿದೆ. ಎಲ್ಲವೂ ಮುಗಿಯಿತು ಎಂದುಕೊಳ್ಳುವುದರಲ್ಲೇ ಮಹಿಳೆಯ ಬಾಳಿನಲ್ಲಿ ಹೊಸ ಸ್ಪೂರ್ತಿ ಚಿಲುಮೆಯನ್ನು ಚಿಮ್ಮಿಸುವಂತಾ ಘಟನೆಯೊಂದು ಅದೇ ಉಕ್ರೇನ್ ನೆಲದಲ್ಲಿ ನಡೆದಿದೆ.

ಎಲ್ವಿವ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಲಿಸಿಚಾನ್ಸ್ಕ್‌ನ ನರ್ಸ್ ಒಕ್ಸಾನಾ ಬಾಲಂಡಿನಾ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಅದಾಗ್ಯೂ, ಒಕ್ಸಾನಾರನ್ನು ವಿಕ್ಟರ್ ವಾಸಿಲಿನ್ ಎತ್ತಿಕೊಂಡು ನೃತ್ಯ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

2 ಲಕ್ಷ ಮಕ್ಕಳು ಸೇರಿದಂತೆ 11 ಲಕ್ಷ ಉಕ್ರೇನಿಯನ್ನರು ರಷ್ಯಾಕ್ಕೆ ಗಡಿಪಾರು 2 ಲಕ್ಷ ಮಕ್ಕಳು ಸೇರಿದಂತೆ 11 ಲಕ್ಷ ಉಕ್ರೇನಿಯನ್ನರು ರಷ್ಯಾಕ್ಕೆ ಗಡಿಪಾರು

ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಒಂದು ತಿಂಗಳ ನಂತರ ಮಾರ್ಚ್ 27ರಂದು ಈ ದಂಪತಿ ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದ ಲೈಸಿಚಾನ್ಸ್ಕ್‌ನಲ್ಲಿ ಮನೆಗೆ ತೆರಳುತ್ತಿದ್ದರು, ಈ ವೇಳೆ ಸಂಭವಿಸಿದ ಸ್ಫೋಟದಲ್ಲಿ ಒಕ್ಸಾನಾ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರು.

ಸ್ಫೋಟದ ಘಟನೆ ಬಗ್ಗೆ ನೆನಪಿಸಿಕೊಂಡ ಒಕ್ಸಾನಾ: "ನಾನು ಅವರಿಗೆ ಕೂಗಿ ಹೇಳಿದೆನು: "ಹನಿ, ನೋಡಿ!" ಎನ್ನುತ್ತಿದ್ದಂತೆ ಗಣಿ ಸ್ಫೋಟಗೊಂಡಾಗ ಅವರು ನನ್ನತ್ತ ನೋಡಿದರು. ನಾನು ನೆಲದ ಮೇಲೆ ಮುಖ ಮಾಡಿ ಕೆಳಗೆ ಬಿದ್ದೆ. ವಿಪರೀತ ಶಬ್ಧದಿಂದಾಗಿ ನನ್ನ ತಲೆಯಲ್ಲಿ ಗಿರ್ ಎನ್ನುವಂತಾಗಿತ್ತು. ಗಾಳಿ ವೇಗ ಹೆಚ್ಚಾಗಿರದ ಕಾರಣ ನನಗೆ ಉಸಿರಾಡುವುದಕ್ಕೆ ಯಾವುದೇ ರೀತಿ ತೊಂದರೆ ಆಗಲಿಲ್ಲ" ಎಂದು ಘಟನೆಯ ಬಗ್ಗೆ ಬಾಲಂಡಿನಾ ನೆನಪಿಸಿಕೊಂಡರು.

 Video: Ukrainian Nurse Who Lost Both Legs in Blast Shares First Dance With Husband

ಈ ಘಟನೆ ಬಗ್ಗೆ ಪತಿ ಹೇಳಿದ ಮಾತು: "ಈ ಘಟನೆಯು ಸಂಭವಿಸಿದಾಗ, ಅದು ನನಗೆ ಒಂದು ನಿಮಿಷದಂತೆ ಭಾಸವಾಯಿತು. ಅವಳು ಗಾಯಗೊಂಡಳು. ಒಕ್ಸಾನಾ ಹೊರತಾಗಿ ಬೇರೆ ಯಾರೇ ಆಗಿದ್ದರೂ, ಏನಾಗುತ್ತಿದ್ದರು ಎಂಬುದನ್ನು ನನಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಅವಳು ತುಂಬಾ ಬಲಶಾಲಿ. ಅವಳು ಮೂರ್ಛೆ ಹೋಗಲಿಲ್ಲ. ನಮ್ಮ ಕಾರ್ಯಗಳನ್ನು ಸಂಘಟಿಸಿದವರು ಒಕ್ಸಾನಾ. ಈ ಘಟನೆ ಸಂಭವಿಸಿದಾಗ, ನಾನು ಹತಾಶನಾಗಿಬಿಟ್ಟೆ, ಏನು ಮಾಡಬೇಕೆಂದು ನನಗೆ ತೋಚಲಿಲ್ಲ. ಅವಳು ಸ್ಥಿರವಾಗಿರುವುದನ್ನು ನಾನು ಗಮನಿಸಿದೆ" ಎಂದು ಪತಿ ವಾಸಿಲಿವ್ ಹೇಳಿದರು.

 Video: Ukrainian Nurse Who Lost Both Legs in Blast Shares First Dance With Husband

ಎರಡೂ ಕಾಲುಗಳನ್ನು ಕತ್ತರಿಸಲಾಯಿತು: ದೇಶದ ಕೆಲವು ಪ್ರದೇಶಗಳಲ್ಲಿ ರಷ್ಯನ್ ಸೇನೆಯು ಭಾರೀ ಶೆಲ್ ದಾಳಿ ನಡೆಸಿತು. ಈ ಮಧ್ಯೆ ಸ್ಫೋಟದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಒಕ್ಸಾನಾರ ಜೀವ ಉಳಿಸುವ ನಿಟ್ಟಿನಲ್ಲಿ ವೈದ್ಯರು ಶ್ರಮ ವಹಿಸಿದರು. ಒಂದು ತಿಂಗಳ ಚಿಕಿತ್ಸೆ ನಂತರ ಕೊನೆಯಲ್ಲಿ ವೈದ್ಯರು ಒಕ್ಸಾನಾ ಎರಡೂ ಕಾಲುಗಳನ್ನು ಮತ್ತು ಎಡಗೈಯಲ್ಲಿನ ನಾಲ್ಕು ಬೆರಳುಗಳನ್ನು ಕತ್ತರಿಸಬೇಕಾಯಿತು.

ಬದುಕುವುದಕ್ಕೇ ಇಷ್ಟವಿಲ್ಲ ಎಂದ ಒಕ್ಸಾನಾ: "ನನಗೆ ಬದುಕಲು ಇಷ್ಟವಿರಲಿಲ್ಲ, ನಾನು ಅಂತಹ ಜೀವನವನ್ನು ಬಯಸುವುದಿಲ್ಲ ಎಂದು ಹೇಳಿದೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಅವರು ನನ್ನನ್ನು ಹೀಗೆ ನೋಡುವುದು ನನಗೆ ಇಷ್ಟವಿರಲಿಲ್ಲ. ನನ್ನ ಕುಟುಂಬದಲ್ಲಿ ಯಾರಿಗೂ ಹೊರೆಯಾಗಲು ನಾನು ಬಯಸುವುದಿಲ್ಲ. ಆದರೆ ನಿಮ್ಮ ಬೆಂಬಲಕ್ಕೆ ನನ್ನ ಧನ್ಯವಾದ, ನಾನು ಬದುಕಬೇಕು. ಇದು ಜೀವನದ ಅಂತ್ಯವಲ್ಲ. ದೇವರು ನನ್ನನ್ನು ಜೀವಂತವಾಗಿ ಬಿಟ್ಟರೆ, ಅದು ನನ್ನ ಅದೃಷ್ಟ" ಎಂದು ಬಾಲಂಡಿನಾ ಹೇಳಿದರು. 7 ವರ್ಷದ ಮಗ ಹಾಗೂ 5 ವರ್ಷದ ಮಗಳು ಈಗ ಮಧ್ಯ ಉಕ್ರೇನ್‌ನ ಪೋಲ್ಟವಾ ಪ್ರದೇಶದಲ್ಲಿ ಇರುವ ತಮ್ಮ ಅಜ್ಜಿಯರೊಂದಿಗೆ ಸುರಕ್ಷಿತವಾಗಿದ್ದಾರೆ ಎಂದರು.

Recommended Video

RCB ಅಭಿಮಾನಿಗಳಿಗೆ ಗುಜರಾತ್ ಗೆಲ್ಲಬೇಕಾಗಿತ್ತು | Oneindia Kannada

English summary
Video: Ukrainian nurse who lost both legs in blast shares first dance with husband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X