ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಪುಟ್ಟ ಬಾಲಕಿ ಎಳೆದೊಯ್ದ ಕಡಲ ಸಿಂಹ

ಕೆನಡಾದ ಸ್ಟೀವ್ಸ್ ಟನ್ ಬಂದರಿನಲ್ಲಿ ಭಾನುವಾರ (ಮೇ 21) ನಡೆದ ಘಟನೆಯಿದು. ಅಲ್ಲಿನ ಪುಟ್ಟ ತಡೆಗೋಡೆಯ ಮೇಲೆ ಕುಳಿತಿದ್ದ ಬಾಲಕಿಯನ್ನು ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ದಾಳಿ ನಡೆಸಿ ನೀರಿನೊಳಕ್ಕೆ ಎಳೆದೊಯ್ದಿತ್ತು ಆ ಕಡಲ ಸಿಂಹ.

|
Google Oneindia Kannada News

ಸ್ಟೀವ್ಸ್ ಟನ್, ಮೇ 22: ಕೆನಡಾದಲ್ಲಿ ಪುಟ್ಟ ಬಂದರಿನ ದಡದ ಕಟ್ಟಿಯ ಮೇಲೆ ಕೂತಿದ್ದ ಒಬ್ಬ ಪುಟ್ಟ ಹುಡುಗಿಯನ್ನು ಆಕೆ ಕೂತ ನಂತರದ ಒಂದೇ ಒಂದು ಸೆಕೆಂಡಿನಲ್ಲಿ ಹಿಂಬದಿಯಿಂದ ದಾಳಿ ನಡೆಸಿರುವ ಕಡಲು ಸಿಂಹ, ಆಕೆಯನ್ನು ಹಠಾತ್ತಾಗಿ ನೀರೊಳಗೆ ಎಳೆದೊಯ್ದ ಘಟನೆ ನಡೆದಿದೆ.

ಅದೇ ಜಾಗದಲ್ಲಿದ್ದ ವ್ಯಕ್ತಿಯೊಬ್ಬರು ಈ ಘಟನೆಯನ್ನು ಚಿತ್ರೀಕರಿಸಿದ್ದು ಅದನ್ನು ಯು ಟ್ಯೂಬ್ ನಲ್ಲಿ ಹಾಕಲಾಗಿ ಸೋಮವಾರ ಸಂಜೆ ಹೊತ್ತಿಗೆ ಅದನ್ನು ಸುಮಾರು 85 ಲಕ್ಷಕ್ಕಿಂತಲೂ ಹೆಚ್ಚು ಜನರು ಅದನ್ನು ನೋಡಿದ್ದಾರೆ!

ಅಂದಹಾಗೆ, ಆ ಬಾಲಕಿ ಹೇಗೆ ಬಿದ್ದಳು, ಯಾಕೆ ಆ ಕಡಲ ಸಿಂಹ ದಾಳಿ ನಡೆಸಿತು, ಆಮೇಲೆ ಏನಾಯಿತು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Video Shows The Terrifying Moment A Sea Lion Yanks A Girl Into The Water

ಆ ಘಟನೆ ನಡೆದ ಜಾಗದ ಬಗ್ಗೆ ತಿಳಿಯೋಣ. ಈ ಪುಟ್ಟ ಬಂದರು ಇರುವುದು ಕೆನಡಾದ ಸ್ಟೀವ್ಸ್ ಟನ್ ಬಂದರಿನಲ್ಲಿ. ಅದು ಚಿಕ್ಕ ಪುಟ್ಟ ದೋಣಿಗಳಿಗೆ, ಹಡಗುಗಳ ತಂಗುದಾಣ ಜತೆಗೆ ಪ್ರವಾಸಿ ಸ್ಥಳವೂ ಹೌದು. ಈ ಬಂದರಿನಲ್ಲಿರುವ ಕಡಲ ಸಿಂಹಗಳು ಇಲ್ಲಿನ ಪ್ರಮುಖ ಆಕರ್ಷಣೆ.

ಬಂದರಿನಲ್ಲಿ ಹೀಗೆ ಕಡಲ ಸಿಂಹಗಳನ್ನು ನೋಡ ಬರುವವರಿಗಾಗಿಯೇ ಪ್ರತ್ಯೇಕ ಸ್ಥಳವೊಂದನ್ನು ನಿಗದಿಗೊಳಿಸಲಾಗಿದೆ. ಅಲ್ಲಿಂದ ಕಡಲ ಸಿಂಹಗಳಿಗೆ ಫೀಡ್ ಮಾಡಬಹುದು. ಆದರೆ, ಅಲ್ಲಿ ಯಾವುದೇ ಅಪಾಯವಾಗದಿರಲೆಂದು ರಕ್ಷಣೆಗಾಗಿ ಮೊಣಕಾಲುದ್ದದ ಪುಟ್ಟ ಕಟ್ಟೆಯನ್ನೂ ನಿರ್ಮಿಸಲಾಗಿದೆ. ಅಲ್ಲಿ ನಿಂತು ಈ ಕಡಲು ಸಿಂಹಗಳನ್ನು ನೋಡಬಹುದು.

ಭಾನುವಾರ (ಮೇ 22) ಹೀಗೇ ಆಯಿತು. ಇಲ್ಲಿಗೆ ಬಂದಿದ್ದ ಪ್ರವಾಸಿಗಳ ತಂಡದಲ್ಲಿದ್ದ ಪುಟ್ಟ ಬಾಲೆಯೊಬ್ಬಳಿದ್ದಳು. ವಯಸ್ಸು ಸುಮಾರು 7 ಅಥವಾ 8 ಇರಬಹುದು. ಫ್ರಾಕ್ ಮಾದರಿಯ ಬಿಳಿಯ ದಿರಿಸನ್ನು ತೊಟ್ಟಿದ್ದ ಆ ಬಾಲೆಗಂತೂ ಆ ಕಡಲ ಸಿಂಹಗಳನ್ನು ನೋಡಿ ಸಂತೋಷವೋ ಸಂತೋಷ. ಪುಳಕಿತಳಾಗಿದ್ದ ಆಕೆ, ಆ ಕಟ್ಟೆಯ ಮುಂದೆಯೇ ಮಂಡಿಯೂರಿ ನಿಂತು ಅಲ್ಲಿಗೆ ಬಂದಿದ್ದ ಕಡಲ ಸಿಂಹವನ್ನು ನೋಡುತ್ತಿದ್ದಳು.

ಅದು, ಹಾಗೆ ಹೀಗೆ ಅಡ್ಡಾಡಿಕೊಂಡು ಬಂದು ನೀರಿನಲ್ಲಿ ಮುಳುಗು ಹಾಕಿ ಮರೆಯಾಯಿತು. ಅದು ದೂರ ಹೋಯಿತೆಂದು ತಿಳಿದ ಆ ಹುಡುಗಿ ಆ ಮೋಟು ಕಟ್ಟೆಯ ಮೇಲೆ ಕುಳಿತಳು. ಇತ್ತ ನೀರಿನಲ್ಲಿ ಮುಳುಗಿದ್ದ ಆ ಕಡಲ ಸಿಂಹ, ಅನತಿ ದೂರದಲ್ಲಿ ಮೇಲೆದ್ದಿತು. ಆಗ, ಅದಕ್ಕೆ ಕಂಡಿದ್ದೇ ಈ ಹುಡುಗಿ... ಅದೂ ಮೂತಿಗೆ ನಿಲುಕುವ ಸಾಧ್ಯತೆಯಲ್ಲಿ.

ನಿಧಾನವಾಗಿ, ದಡದ ಕಟ್ಟೆಯತ್ತ ಧಾವಿಸಿ ಬಂದ ಅದು ನೋಡ ನೋಡುತ್ತಿದ್ದಂತೆ ನೀರಿನ ಕಡೆಗೆ ಬೆನ್ನು ಮಾಡಿ ಕುಳಿತಿದ್ದ ಆ ಬಾಲಕಿಯ ಮೇಲೆ ಹಿಂಬದಿಯಿಂದ ಎರಗಿ ಆಕೆಯ ಬಟ್ಟೆಯನ್ನು ಬಾಯಲ್ಲಿ ಕಚ್ಚಿಕೊಂಡು ಆಕೆಯನ್ನೂ ಎಳೆದುಕೊಂಡು ಹೋಗಿ ನೀರಿಗೆ ಧೊಪ್ಪನೆ ಬಿದ್ದುಬಿಟ್ಟಿತು.

ಅರೆಕ್ಷಣದಲ್ಲಿ ನಡೆದ ಘಟನೆಯಿಂದ ಅಲ್ಲಿ ನೆರೆದಿದ್ದವರೆಲ್ಲರೂ ಬೆಚ್ಚಿಬಿದ್ದರು. ಒಂದೆದೆ ಆ ಬಾಲಕಿಯ ಕಿರುಚಾಟ, ಕೂಗಾಟ. ಮತ್ತೊಂದೆಡೆ ಸಹ ಪ್ರವಾಸಿಗರ ಹುಯಿಲು. ಘಟನೆ ನೋಡಿದ ಅಲ್ಲಿದ್ದವರಿಗಂತೂ ಮೈ ಮರಗಟ್ಟಿದ ಹಾಗಾಗಿತ್ತು.

ಅಷ್ಟರಲ್ಲಿ, ಯಾರೋ ಪುಣ್ಯಾತ್ಮ ಕೊಂಚವೂ ತಡಮಾಡದೇ ನೀರಿಗೆ ಜಂಪ್ ಮಾಡಿ ನೀರಿನಲ್ಲಿ ಮಳುಗಿದ್ದ ಆ ಬಾಲಕಿಯನ್ನು ಬಿಡಿಸಿಕೊಂಡು ತಂದು ಮೇಲೆತ್ತಿದರು. ಅವರು ಕಟ್ಟೆಯ ಮೇಲೆ ಆ ಹುಡುಗಿಯನ್ನು ತಂದು ಕೊಡುತ್ತಿದ್ದಂತೆ ಉಳಿದ ಪ್ರವಾಸಿಗರೂ ಕೈ ಕೊಟ್ಟು ಆ ಹುಡುಗಿಯನ್ನು ಹಾಗೂ ಆತನನ್ನೂ ಮೇಲೆತ್ತಿದರು. ಸದ್ಯಕ್ಕೆ ಆ ಹುಡುಗಿಗೆ ಹಾಗೂ ಆಕೆಯನ್ನು ಉಳಿಸಿದ ಆ ಪುಣ್ಯಾತ್ಮನಿಗೆ ಯಾವುದೇ ಗಾಯವಾಗಿಲ್ಲ. ಆದರೆ, ಆ ಹುಡುಗಿಯಂತೂ ಶಾಕ್ ನಿಂತ ಥರಗುಟ್ಟುತ್ತಿದ್ದಳು. ತಕ್ಷಣ ಆಕೆಯ ಪೋಷಕರು ಆಕೆಯನ್ನು ಬೇಗಬೇಗನೇ ಆ ಜಾಗದಿಂದ ಬೇರೆ ಕಡೆ ಕರೆದುಕೊಂಡು ಹೋದರು.

ಈ ಇಡೀ, ಘಟನೆ ಮೈಕಲ್ ಫುಜಿವಾರಾ ಎಂಬುವರ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಇದನ್ನು ಭಾನುವಾರ ಬೆಳಗ್ಗೆ ಯು ಟ್ಯೂಬ್ ಗೆ ಅಪ್ಲೋಡ್ ಮಾಡಿದ್ದು, ನಿಮಿಷಗಳು ಉರುಳುತ್ತಿದ್ದಂತೆ ಆ ವಿಡಿಯೋ ವೈರಲ್ ಆಗಿದೆ.

ಭಾನುವಾರ ಮಧ್ಯಾಹ್ನದ ಹೊತ್ತಿಗೆ 1 ಲಕ್ಷದ 50 ಸಾವಿರ ಮಂದಿ ಆ ವಿಡಿಯೋ ನೋಡಿದ್ದರೆ, ಸೋಮವಾರ ಸಂಜೆ ಹೊತ್ತಿಗೆ ಅವರ ಸಂಖ್ಯೆ 85 ಲಕ್ಷ ದಾಟಿತ್ತು.

English summary
The sea lion grabs the girl by her white dress and drags her into the water. Onlookers can be heard screaming in horror. A man immediately gets into the water to save the girl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X