ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಡೆಲ್ಟಾ ಏರಿಕೆ; ಜನರನ್ನು ಮನೆಯೊಳಗೇ ಲಾಕ್‌ ಮಾಡಲಾಗುತ್ತಿದೆಯಾ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಬೀಜಿಂಗ್, ಆಗಸ್ಟ್‌ 12: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಇದೀಗ ಡೆಲ್ಟಾ ರೂಪಾಂತರ ಪ್ರಕರಣಗಳು ಏರಿಕೆಯಾಗುತ್ತಿವೆ. ಚೀನಾದ ಹಲವು ಪ್ರಾಂತ್ಯಗಳಲ್ಲಿ ದಿನದಿಂದ ದಿನಕ್ಕೆ ಡೆಲ್ಟಾ ರೂಪಾಂತರ ಪ್ರಕರಣ ಹೆಚ್ಚಾಗುತ್ತಿರುವುದು ಸರ್ಕಾರಕ್ಕೆ ಮತ್ತೆ ನಡುಕ ಹುಟ್ಟಿಸಿದೆ.

ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವ ಸರ್ಕಾರ ಪ್ರಯಾಣ ಹಾಗೂ ಜನರ ಓಡಾಟದ ಮೇಲೆ ಹಲವು ನಿರ್ಬಂಧಗಳನ್ನು ಹೇರುತ್ತಿದೆ. ಜೊತೆಗೆ ಕೊರೊನಾ ಸೋಂಕು ಮೊದಲು ಪತ್ತೆಯಾಗಿದ್ದ, ಹಾಗೆಯೇ ಕೊರೊನಾ ಮುಕ್ತವಾಗಿದ್ದ ವುಹಾನ್‌ ನಗರದಲ್ಲಿಯೂ ಡೆಲ್ಟಾ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಚೀನಾ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಡೆಲ್ಟಾ ಉಲ್ಬಣ: ಚೀನಾ ಸೇರಿ ವಿದೇಶಗಳಲ್ಲಿ ಹೇಗಿದೆ ಕೋವಿಡ್‌ ಪರಿಸ್ಥಿತಿ?ಡೆಲ್ಟಾ ಉಲ್ಬಣ: ಚೀನಾ ಸೇರಿ ವಿದೇಶಗಳಲ್ಲಿ ಹೇಗಿದೆ ಕೋವಿಡ್‌ ಪರಿಸ್ಥಿತಿ?

ಮನೆಯಿಂದ ಜನರು ಹೊರಗೆ ಬರಲು ಅವಕಾಶ ನೀಡದೇ ಮನೆಯಲ್ಲಿಯೇ ಲಾಕ್‌ ಮಾಡುತ್ತಿರುವುದನ್ನು ತೋರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮುಂದೆ ಓದಿ...

 ದಿನಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಬಾಗಿಲು ತೆರೆಯುವಂತಿಲ್ಲ

ದಿನಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಬಾಗಿಲು ತೆರೆಯುವಂತಿಲ್ಲ

ಮನೆಯಿಂದ ಯಾರೂ ಹೊರಗೆ ಬರದಂತೆ ತಡೆಯಲು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಯೊಬ್ಬರು ಮನೆಯೊಂದರ ಬಾಗಿಲಿಗೆ ಕಬ್ಬಿಣದ ಕೋಲನ್ನು ಅಡ್ಡಲಾಗಿಟ್ಟು ಸುತ್ತಿಗೆಯಿಂದ ಲಾಕ್‌ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದಿನಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಮನೆ ಬಾಗಿಲು ತೆರೆದರೆ, ಅವರ ಮನೆ ಬಾಗಿಲಿಗೆ ಕಬ್ಬಿಣದ ರಾಡ್‌ನಿಂದ ಲಾಕ್ ಮಾಡಲಾಗುತ್ತದೆ ಎಂದು ಚೀನಾ ಆಡಳಿತ ಘೋಷಣೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದೇ ಕಾರಣಕ್ಕೂ ಜನರು ಹೊರಗೆ ಹೋಗಬಾರದು, ಹೊರಗೆ ಬಂದರೆ ಅವರ ಮನೆಯನ್ನು ಸೀಲ್ ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶ ನೀಡುತ್ತಿರುವುದಾಗಿ ತಿಳಿದುಬಂದಿದೆ.

 ಮನೆಯೊಳಗೇ ಇರುವ ಆದೇಶ ಹೊರಡಿಸಿದ ಚೀನಾ

ಮನೆಯೊಳಗೇ ಇರುವ ಆದೇಶ ಹೊರಡಿಸಿದ ಚೀನಾ

ಅಪಾರ್ಟ್‌ಮೆಂಟ್‌ನಲ್ಲಿ ಯಾರಿಗೇ ಕೊರೊನಾ ಸೋಂಕು ತಗುಲಿದರೂ, ಇಡೀ ಕಟ್ಟಡವನ್ನು ಎರಡರಿಂದ ಮೂರು ವಾರಗಳ ಕಾಲ ಸೀಲ್ ಮಾಡಲಾಗುತ್ತಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಸ್ಥಳೀಯ ಸಾರಿಗೆ ಬಂದ್‌ ಮಾಡಲಾಗಿದ್ದು, ಕೆಲವು ನಗರಗಳಲ್ಲಿ ಜನರಿಗೆ ಮನೆಯಲ್ಲಿಯೇ ಇರುವ ಆದೇಶಗಳನ್ನು ನೀಡಲಾಗಿದೆ. ಚೀನಾದ ವಲಸೆ ಪ್ರಾಧಿಕಾರ "ಅನಿವಾರ್ಯವಲ್ಲದ ಮತ್ತು ತುರ್ತು-ಅಲ್ಲದ" ಪ್ರಕರಣಗಳಲ್ಲಿ ದೇಶದಿಂದ ನಿರ್ಗಮಿಸಲು ಅಗತ್ಯವಾದ ಸಾಮಾನ್ಯ ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳನ್ನು ನೀಡುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಸಾಮೂಹಿಕ ಕೊರೊನಾ ಪರೀಕ್ಷೆಗಳಲ್ಲಿ ದೇಶಾದ್ಯಂತ ಡೆಲ್ಟಾ ಹರಡುವಿಕೆ ಸಾಬೀತಾಗಿದ್ದು, ಕಠಿಣ ಕ್ರಮಗಳನ್ನು ಚೀನಾ ಮತ್ತೆ ಕೈಗೆತ್ತಿಕೊಂಡಿದೆ.

5 ದೇಶಗಳಲ್ಲಿ ತೀವ್ರಗೊಳ್ಳುತ್ತಿದೆ ಡೆಲ್ಟಾ ಪ್ಲಸ್ ವೈರಸ್5 ದೇಶಗಳಲ್ಲಿ ತೀವ್ರಗೊಳ್ಳುತ್ತಿದೆ ಡೆಲ್ಟಾ ಪ್ಲಸ್ ವೈರಸ್

 ಚೀನಾದ 15 ಪ್ರಾಂತ್ಯಗಳಲ್ಲಿ ಡೆಲ್ಟಾ ಪತ್ತೆ

ಚೀನಾದ 15 ಪ್ರಾಂತ್ಯಗಳಲ್ಲಿ ಡೆಲ್ಟಾ ಪತ್ತೆ

ಚೀನಾದ 15 ಪ್ರಾಂತ್ಯಗಳಲ್ಲಿ ಸುಮಾರು 500 ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ಈ ಬೆನ್ನಲ್ಲೇ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕ ಸಾರಿಗೆ ಹಾಗೂ ಟ್ಯಾಕ್ಸಿ ಸೇವೆಯ ಮೇಲೆ ನಿರ್ಬಂಧ ಹೇರಲಾಗಿದೆ. ಬೀಜಿಂಗ್‌ನಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಹಾಂಕಾಂಗ್‌ನಲ್ಲಿ ಕ್ವಾರಂಟೈನ್ ನಿಯಮಗಳನ್ನು ಮತ್ತೆ ಜಾರಿಗೆ ತರಲಾಗಿದೆ. ಸೋಂಕು ವ್ಯಾಪಕವಾಗಿ ಹರಡದಂತೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳುತ್ತಿದೆ. ಚೀನಾದಲ್ಲಿ ಎರಡೇ ವಾರಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ವಿಮಾನ ನಿಲ್ದಾಣ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ವುಹಾನ್ ಒಳಗೊಂಡಂತೆ ಪ್ರಮುಖ ನಗರಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವುಹಾನ್‌ ನಗರದಲ್ಲಿ ಸಾಮೂಹಿಕ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದೆ.

 ಮುಕ್ಕಾಲು ಮಂದಿ ಲಸಿಕೆ ಪಡೆದಿದ್ದಾರೆ

ಮುಕ್ಕಾಲು ಮಂದಿ ಲಸಿಕೆ ಪಡೆದಿದ್ದಾರೆ

ಚೀನಾದಲ್ಲಿ 61% ಜನಸಂಖ್ಯೆಗೆ ಕೊರೊನಾ ಲಸಿಕೆ ನೀಡಲಾಗಿದೆ. ಆದರೆ ಸೋಂಕು ಹರಡುವ ಅಪಾಯವನ್ನು ತಡೆಗಟ್ಟಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಸೋಂಕಿನ ಪ್ರಕರಣಗಳು ಇನ್ನಷ್ಟು ಹೆಚ್ಚಾದರೆ ಮತ್ತೆ ಲಾಕ್‌ಡೌನ್ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ತಿಳಿಸಿದೆ. ಈಗಿನಿಂದಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ.

English summary
As Delta surges, video show Chinese officials locking residents inside their home by putting iron bars
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X