ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ರಷ್ಯಾದ ಡ್ರೋನ್ ದಾಳಿಗೆ ಉಕ್ರೇನ್ ಐದರ್ ಬೆಟಾಲಿಯನ್ ಕಮಾಂಡ್ ಪೋಸ್ಟ್ ನಾಶ

|
Google Oneindia Kannada News

ಕೀವ್, ಮಾರ್ಚ್ 5: ರಷ್ಯಾದ ವೈಮಾನಿಕ ಪಡೆಗಳು ಡ್ರೋನ್ ದಾಳಿಯಲ್ಲಿ ಉಕ್ರೇನ್‌ನ ರೆಬಲ್ ಪ್ರದೇಶದ ಡೊನೆಟ್ಸ್ಕ್‌ನಲ್ಲಿ ಐದಾರ್ ಬೆಟಾಲಿಯನ್ ಕಮಾಂಡ್ ಮತ್ತು ವೀಕ್ಷಣಾ ಪೋಸ್ಟ್ ಅನ್ನು ನಾಶವಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಉಕ್ರೇನ್ ನೆಲದಲ್ಲಿ ರಷ್ಯಾ ನಡೆಯುತ್ತಿರುವ ಯುದ್ಧವು 10ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಡ್ರೋನ್ ದಾಳಿ ನಡೆಸಿರುವುದಕ್ಕೆ ಸಂಬಂಧಿಸಿದಂತೆ ರಷ್ಯಾದ ರಕ್ಷಣಾ ಸಚಿವಾಲಯವು ವೀಡಿಯೊ ತುಣುಕೊಂದನ್ನು ಪ್ರಕಟಿಸಿದೆ.

ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ನ ಭೂಪ್ರದೇಶದಲ್ಲಿ ರಷ್ಯಾದ ಏರೋಸ್ಪೇಸ್ ಪಡೆಯ ಮಾನವರಹಿತ ವೈಮಾನಿಕ ವಾಹನ ಇನೋಖೋಡೆಟ್ಸ್ನ ಸಿಬ್ಬಂದಿಯಿಂದ ಐದಾರ್ ಬೆಟಾಲಿಯನ್ ಕಮಾಂಡ್ ಮತ್ತು ವೀಕ್ಷಣಾ ಪೋಸ್ಟ್ ನಾಶಪಡಿಸಲಾಗಿದೆ. ಮಾರ್ಗದರ್ಶಿ ವೈಮಾನಿಕ ಯುದ್ಧಸಾಮಗ್ರಿಗಳಿಂದ ಹೊಡೆಯಲಾಗಿದೆ.

Video: Russian drone strike destroys Aidar battalion command post in Ukraines Donetsk

ಓರಿಯನ್ ಡ್ರೋನ್ ದಾಳಿ:

ಓರಿಯನ್ (ಇನೊಖೊಡೆಟ್ಸ್ ಎಂದೂ ಕರೆಯುತ್ತಾರೆ) ಡ್ರೋನ್ ರಷ್ಯಾದ ಮಧ್ಯಮ-ಎತ್ತರದ ದೀರ್ಘ-ಹಾರಾಟದ ಡ್ರೋನ್ ಆಗಿದೆ. ಇದನ್ನು ಕ್ರೋನ್‌ಸ್ಟಾಡ್ಟ್ ಅಭಿವೃದ್ಧಿಪಡಿಸಿದ್ದಾರೆ. ಡ್ರೋನ್ ನಾಲ್ಕು ಗಾಳಿಯಿಂದ ನೆಲಕ್ಕೆ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲದು. ಡ್ರೋನ್ 24 ಗಂಟೆಗಳವರೆಗೆ ಗಾಳಿಯಲ್ಲಿ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ.

Russia-Ukraine War Live Updates: ಉಕ್ರೇನ್ ಮೇಲೆ ಒಂದೇ ವಾರದಲ್ಲಿ 500 ಕ್ಷಿಪಣಿ ದಾಳಿRussia-Ukraine War Live Updates: ಉಕ್ರೇನ್ ಮೇಲೆ ಒಂದೇ ವಾರದಲ್ಲಿ 500 ಕ್ಷಿಪಣಿ ದಾಳಿ

ರಷ್ಯಾದಿಂದ ಒಂದೇ ವಾರದಲ್ಲಿ 500 ಕ್ಷಿಪಣಿ ದಾಳಿ

Recommended Video

ರಷ್ಯಾ ಭಯಕ್ಕೆ ಉಕ್ರೇನ್ ಗೆ ಕೈ ಕೊಟ್ಟ NATO: ಉಕ್ರೇನ್ ಪತನ ಗ್ಯಾರೆಂಟಿ!! | Oneindia Kannada

ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ನಿರಂತರ ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ. ವ್ಲಾಡಿಮಿರ್ ಪುಟಿನ್ ಪಡೆ ನಡೆಸುತ್ತಿರುವ ವೈಮಾನಿಕ ದಾಳಿಗೆ ಉಕ್ರೇನ್ ನೆಲದಲ್ಲಿ ನರಕಸದೃಶ್ಯ ಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ ಕಳೆದ ಒಂದೇ ವಾರದಲ್ಲಿ ರಷ್ಯಾ ಪಡೆಯು 500ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ.

English summary
Video: Russian drone strike destroys Aidar battalion command post in Ukraine's Donetsk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X