ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಮಕ್ಕಳಿಗೆ ಆಹಾರ ನೀಡಬೇಕೇ ಅಥವಾ ಕೊಲ್ಲಬೇಕೇ?": ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ದೂರು

|
Google Oneindia Kannada News

ಕರಾಚಿ ಆಗಸ್ಟ್ 11: ಪಾಕಿಸ್ತಾನದಲ್ಲಿ ವಿಶೇಷವಾಗಿ ಕರಾಚಿ ನಗರದಲ್ಲಿ ವಿದ್ಯುತ್‌, ಔಷಧ ಮತ್ತು ದಿನಸಿಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಪಾಕ್ ಮಹಿಳೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಿಎಂಎಲ್-ಎನ್ ನಾಯಕಿ ಮರ್ಯಮ್ ನವಾಜ್ ವಿರುದ್ಧ ಕಿಡಿ ಕಾರಿದ ವಿಡಿಯೋ ವೈರಲ್ ಆಗಿದೆ. ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಪಾಕಿಸ್ತಾನದ ಮಹಿಳೆ ವಿಡಿಯೋದಲ್ಲಿ ವಿವರಿಸಿದ್ದಾರೆ.

ಪಾಕಿಸ್ತಾನ ದುರ್ಬಲ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಆಳವಾಗುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ಕಾರದ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಪಾಕಿಸ್ತಾನಿ ನಾಗರಿಕರು ತಮ್ಮ ಹಣಕಾಸಿನ ಪರಿಸ್ಥಿತಿಯನ್ನು ಆನ್‌ಲೈನ್‌ನಲ್ಲಿ ವಿವರಿಸುತ್ತಿದ್ದಾರೆ. ಜೊತೆಗೆ ದೇಶದ ಪ್ರಧಾನಿ ಜನಸಾಮಾನ್ಯರ ಪರಿಹಾರಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಟೀಕಿಸುತ್ತಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಶೇರ್ ಮಾಡಿದ್ದಾರೆ.

Asia Cup 2022 ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಮುಖಾಮುಖಿಗೆ ಮುಹೂರ್ತ ಫಿಕ್ಸ್Asia Cup 2022 ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಮುಖಾಮುಖಿಗೆ ಮುಹೂರ್ತ ಫಿಕ್ಸ್

ಹಣದುಬ್ಬರ ಏರಿಕೆಯ ನಂತರ ಕರಾಚಿ ಮಹಿಳೆಯೊಬ್ಬರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವೊಂದು ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ 'ಇನ್ನು ಮುಂದೆ ಮಕ್ಕಳಿಗೆ ಆಹಾರ ನೀಡದೆ ಅವರ ಜೀವನವನ್ನು ಕೊನೆಗೊಳಿಸಬೇಕೇ' ಎಂದು ಮಹಿಳೆ ಸರ್ಕಾರವನ್ನು ಕೇಳುತ್ತಾಳೆ. ಕರಾಚಿಯ ರಾಬಿಯಾ ಎಂದು ಗುರುತಿಸಲಾದ ಮಹಿಳೆ, ಬೆಲೆ ಏರಿಕೆಯ ನಂತರ ತಾನು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಬಗ್ಗೆ ದೂರು ನೀಡುವುದನ್ನು ಕಾಣಬಹುದು.

ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ದೂರು

ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ದೂರು

ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ ನಂತರ ಅವರ ಖರ್ಚುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಅಧಿಕಾರಿಗಳು ತಿಳಿಸಬೇಕು ಎಂದು ಕರಾಚಿಯ ರಾಬಿ ಅವರು ಹೇಳಿದರು. "ಮನೆ ಬಾಡಿಗೆ, ವಿದ್ಯುತ್ ಬಿಲ್‌, ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿ ಎಲ್ಲವೂ ದುಬಾರಿಯಾಗಿದೆ. ನನ್ನ ಮಕ್ಕಳಿಗೆ ಆಹಾರ ನೀಡಬೇಕೇ ಅಥವಾ ನಾನು ಅವರನ್ನು ಕೊಲ್ಲಬೇಕೇ?" ಎಂದು ಅವರು ಕೇಳಿದ್ದಾರೆ.

ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಪ್ರತಿಕ್ರಿಯೆ

ಎರಡು ಮಕ್ಕಳನ್ನು ಹೊಂದಿರುವ ರಾಬಿಯಾ ಅವರು ತಮ್ಮ ಮಕ್ಕಳಲ್ಲಿ ಒಬ್ಬರಿಗೆ ಫಿಟ್ಸ್ ಇದೆ ಎಂದು ಹೇಳಿದರು. ಆದರೆ ಕಳೆದ ನಾಲ್ಕು ತಿಂಗಳಿನಿಂದ ಮಕ್ಕಳ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಔಷಧದ ಬೆಲೆಗಳು ಏರಿಕೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಹಾಗಂತ "ನನ್ನ ಮಗುವಿಗೆ ಔಷಧಿಗಳನ್ನು ಖರೀದಿಸುವುದನ್ನು ನಾನು ತಪ್ಪಿಸಬಹುದೇ?" ಎಂದು ಪ್ರಶ್ನೆ ಮಾಡಿದ್ದಾರೆ. "ಸರ್ಕಾರವು ಬಡ ಜನರನ್ನು ಬಹುತೇಕ ಕೊಂದಿದೆ. ಸರ್ವಶಕ್ತನಾದ ಅಲ್ಲಾಹನಿಗೆ ಈ ಬಗ್ಗೆಉತ್ತರ ನೀಡಬೇಕು. ಆಗ ನೀವು ಭಯಪಡುತ್ತೀರಾ ಎಂದಿದ್ದಾರೆ.

ಅವರ ವಿಡಿಯೊಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಮಂಗಳವಾರ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರ ಜೂನ್‌ನಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಿಲ್ಲ ಅಥವಾ ಔಷಧಿಗಳ ಮೇಲೆ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಹು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು

ಬಹು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು

2022 ರ ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡ ಪಿಎಂ ಶೆಹಬಾಜ್ ಷರೀಫ್ ಅವರ ಸಮ್ಮಿಶ್ರ ಸರ್ಕಾರವು ಬಹು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಹೆಚ್ಚುತ್ತಿರುವ ವ್ಯಾಪಾರ ಕೊರತೆಯಿಂದಾಗಿ ಅದರ ಚಾಲ್ತಿ ಖಾತೆ ಕೊರತೆಯು $17.4 ಶತಕೋಟಿ ಅಥವಾ 4.6 ರಷ್ಟು ಏರಿದೆ.

ಕಳೆದುಹೋದ ಹೂಡಿಕೆದಾರರ ವಿಶ್ವಾಸ

ಕಳೆದುಹೋದ ಹೂಡಿಕೆದಾರರ ವಿಶ್ವಾಸ

ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಸಾಲದಾತರಿಂದ ಡಾಲರ್ ಒಳಹರಿವು ಕಡಿಮೆಯಾಗುತ್ತಿರುವ ನಡುವೆ ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆ, ಹಾಗೆಯೇ ಕುಗ್ಗುತ್ತಿರುವ ವಿದೇಶಿ ಹೂಡಿಕೆಗಳು ಕಳೆದ ಹಲವಾರು ತಿಂಗಳುಗಳಿಂದ ವಿದೇಶಿ ವಿನಿಮಯ ಮೀಸಲು ಮತ್ತು ರೂಪಾಯಿಯನ್ನು ಅಗಾಧವಾದ ಒತ್ತಡಕ್ಕೆ ತಂದಿವೆ. ಇದು ಕ್ಷಿಪ್ರ ಹಣದುಬ್ಬರವನ್ನು ಹೆಚ್ಚಿಸಿದೆ. ಸ್ಟೇಟ್ ಬ್ಯಾಂಕ್ ಸಾಲದ ವೆಚ್ಚವನ್ನು ಬಹುವರ್ಷದ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಒತ್ತಾಯಿಸಿದೆ ಮತ್ತು ಆರ್ಥಿಕತೆಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಕಳೆದುಕೊಂಡಿದೆ.

Recommended Video

ಇವರೇನಾ ಪ್ರವೀಣ್ ಗೆ ಹತ್ಯೆ ಮಾಡಿದ ಆ 3 ಕೊಲೆಗಡುಕರು | *Karnataka | OneIndia Kannada

English summary
mid increasing inflation, a video of a Pakistani woman has surfaced, describing the skyrocketing prices of medicines, groceries and electricity in the country, especially in Karachi city and slamming Prime Minister Shehbaz Sharif and PML-N leader Maryam Nawaz.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X