ಮಂಗಳ ಗ್ರಹದ ಮೇಲೆ ನೀರಿನ ಕುರುಹು: ಇಎಸ್‌ಎ ಮಾಹಿತಿ
ನವದೆಹಲಿ, ಜುಲೈ 7: ಮಂಗಳ ಗ್ರಹದ ಮೇಲೆ ನೀರಿನ ಕುರುಹು ಪತ್ತೆಯಾಗಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಮಂಗಳ
ಗ್ರಹದ
ಮೇಲೆ
ಬೃಹತ್
ಮಂಜುಗಡ್ಡೆಯ
ಕುಳಿ
ಪತ್ತೆಯಾಗಿದೆ.
ಅಂದಾಜು
82
ಕಿ.ಮೀ.
ಅಗಲವಾಗಿರುವ
ಈ
ಕುಳಿಯಲ್ಲಿ
1.8
ಕಿ.ಮೀ.
ಆಳವಾದ
ಮಂಜುಗಡ್ಡೆ
ಇದೆ.
ಕೊರೊಲೇವ್
ಕುಳಿ
ಎಂದು
ಗುರುತಿಸಲಾಗುವ
ಈ
ಕುಳಿಯ
ದೃಶ್ಯಗಳನ್ನು
ತನ್ನ
ಮಾರ್ಸ್
ಎಕ್ಸ್ಪ್ರೆಸ್
ರವಾನಿಸಿರುವುದಾಗಿ
ಇಎಸ್‌ಎ
ತಿಳಿಸಿದೆ.
ಮಂಗಳ ಗ್ರಹದ ಅತಿದೊಡ್ಡ ಚಂದ್ರನಾದ ಫೋಬೊಸ್ ಫೋಟೊ ಬಿಡುಗಡೆ ಮಾಡಿದ ಇಸ್ರೋ
ಮಂಗಳಗ್ರಹದ ಅಧ್ಯಯನಕ್ಕಾಗಿ ಅಮೆರಿಕ, ಯುರೋಪ್ ಒಕ್ಕೂಟ ಮತ್ತು ಭಾರತ ಸೇರಿ ಅನೇಕ ರಾಷ್ಟ್ರಗಳು ಪ್ರಯತ್ನ ಮುಂದುವರೆಸಿವೆ. ಕೆಂಪುಗ್ರಹದ ಮೇಲೆ ನೀರು ಮತ್ತು ಜೀವಿಗಳು ವಾಸವಾಗಿದ್ದ ಲಕ್ಷಣವನ್ನು ಪತ್ತೆ ಮಾಡಲು ಕಷ್ಟ ಪಡುತ್ತಲೇ ಇದೆ. ಈ ಸಂದರ್ಭದಲ್ಲಿ ಇಎಸ್‌ಎ ಸಿಹಿಸುದ್ದಿ ನೀಡಿದೆ.
ಮಂಜುಗಡ್ಡೆ ಮೇಲಿನ ಗಾಳಿ ತಣ್ಣಗಿದ್ದು, ಸುತ್ತಲಿನ ಗಾಳಿಗಿಂತಲೂ ಭಾರವಾಗಿದೆ. ಗಾಳಿಯು ಶಾಖನಿರೋಧಕ ಗುಣವನ್ನು ಹೊಂದಿರುವ ಕಾರಣ ಕುಳಿಯಲ್ಲಿರುವ ಮಂಜುಗಡ್ಡೆ ಕರಗದೆ ಹಾಗೆಯೇ ಗಟ್ಟಿಯಾಗಿ ಉಳಿದಿದೆ ಎಂದು ಇಎಸ್‌ಎ ವಿವರಿಸಿದೆ.
ಕೆಂಪು ಗ್ರಹದ ದಕ್ಷಿಣ ಭಾಗದಲ್ಲಿ ಒಲಿಂಪಿಯಾ ಆ್ಯಂಡೆ ಎಂಬ ಮರಳಿನ ದಿಬ್ಬವಿದೆ. ಇದು ಮಂಗಳಗ್ರಹದ ಉತ್ತರ ಧ್ರುವದ ಒಂದು ಭಾಗವನ್ನು ಆವರಿಸಿದೆ. ಈ ಕುಳಿಯಲ್ಲಿನ ಮಂಜುಗಡ್ಡೆ ವರ್ಷಪೂರ್ತಿ ಸ್ಥಿರವಾಗಿರುತ್ತದೆ. ಏಕೆಂದರೆ ಈ ಭಾಗದಲ್ಲಿನ ವಾಯುಭಾರ ಕುಸಿತ ನೈಸರ್ಗಿಕವಾಗಿ ತಂಪು ವಾತಾವರಣಕ್ಕೆ ಕಾರಣವಾಗಿದೆ.