ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral Video: ಹನುಮಂತನಂತೆ ಬಾಲಕನಿಗೆ ಇದೆ ಬಾಲ

|
Google Oneindia Kannada News

ಕಠ್ಮಂಡು, ಏಪ್ರಿಲ್ 17: ಮನುಷ್ಯರನ್ನು ಕೋತಿಗಳ ಪೂರ್ವಜರು ಎಂದು ಪರಿಗಣಿಸಲಾಗುತ್ತದೆ. ಆದರೆ ಕಾಲಾನಂತರದಲ್ಲಿ ಮನುಷ್ಯ ಮತ್ತು ಮಂಗಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹೀಗಿರುವಾಗ ಮನುಷ್ಯನ ಸೊಂಟದ ಮೇಲೆ ಕೋತಿಯಂತೆ ಬಾಲವಿರುವುದು ಕಂಡುಬಂದಿದೆ. ಈ ವಿಚಾರವನ್ನು ಕೇಳುತ್ತಿದ್ದಂತೆ ಜನ ಆಶ್ಚರ್ಯಪಟ್ಟಿದ್ದಾರೆ. ಹುಡುಗನನ್ನು ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ನೇಪಾಳದ ಹುಡುಗನೊಬ್ಬನು ಸದ್ಯ ಸಾಕಷ್ಟು ಚರ್ಚೆಯಲ್ಲಿದ್ದಾನೆ. ಈ ಬಾಲಕನ ಸೊಂಟದ ಹಿಂದೆ ಮಂಗನಂತೆ ಬಾಲವಿದೆ. ಈ ಹುಡುಗನನ್ನು ಕಂಡು ಸ್ಥಳೀಯ ಅರ್ಚಕರೊಬ್ಬರು ಹನುಮಂತನ ಅವತಾರವೆಂದು ಹೇಳಿದ್ದಾರೆ. ಹೀಗಾಗಿ ಜನರೂ ಕೂಡ ಈ ಬಾಲಕನನ್ನು ಹನುಮಂತನ ಅವತಾರವೆಂದೇ ಪರಿಗಣಿಸುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಹುಡುಗನ ಹೆಸರು ದೇಶಂತ್ ಅಧಿಕಾರಿ. ಅವನ ವಯಸ್ಸು ಸುಮಾರು ಹದಿನಾರು ವರ್ಷ. ಕೆಲವು ದಿನಗಳ ಹಿಂದೆ ಈ ಹುಡುಗನ ಬೆನ್ನಿನ ಕೆಳಭಾಗದಲ್ಲಿ ಕೂದಲು ಬೆಳೆಯಲು ಪ್ರಾರಂಭಿಸಿತು. ಅದು ಕೆಲವೇ ದಿನಗಳಲ್ಲಿ ಉದ್ದವಾಗಿ ಬೆಳೆದಿದೆ. ಸದ್ಯ ಅದರ ಉದ್ದ ಸುಮಾರು 70 ಸೆಂಟಿಮೀಟರ್ ಆಗಿದೆ. ಇನ್ನಷ್ಟು ವಿವರ ಮುಂದಿದೆ...

ಬಾಲದಿಂದ ದೇವರಾದ ಹುಡುಗ

ಬಾಲದಿಂದ ದೇವರಾದ ಹುಡುಗ

ಹದಿನಾರು ವರ್ಷ ವಯಸ್ಸಿನ ದೇಶಂತ್ ಅಧಿಕಾರಿ ಬೆನ್ನಿನ ಕೆಳಭಾಗದಲ್ಲಿ ಕೂದಲು ಬೆಳೆಯಲು ಪ್ರಾರಂಭಿಸಿದ್ದು, ಈಗ ಆ ಕೂದಲುಗಳನ್ನು ಹೆಣೆಯುವ ಮೂಲಕ, ಅದಕ್ಕೆ ಬಾಲದ ರೂಪವನ್ನು ನೀಡಲಾಗಿದೆ. ಅದನ್ನು ದೇವರೊಂದಿಗೆ ಹೋಲಿಕೆ ಮಾಡಿ ನೋಡಿಕೊಳ್ಳಲಾಗುತ್ತಿದೆ. ಕೆಲವರು ಈ ಹುಡುಗನನ್ನು ಹನುಮಂತನ ಅವತಾರವೆಂದು ಪರಿಗಣಿಸುತ್ತಿದ್ದಾರೆ.

ಬೆನ್ನಿನ ಕೆಳಭಾಗದಲ್ಲಿ ಬೆಳೆದ ಕೂದಲು

ಬೆನ್ನಿನ ಕೆಳಭಾಗದಲ್ಲಿ ಬೆಳೆದ ಕೂದಲು

ವರದಿಗಳ ಪ್ರಕಾರ,ದೇಶಂತ ಅವರ ಪೋಷಕರು ಅವನನ್ನು ಚಿಕಿತ್ಸೆಗಾಗಿ ನೇಪಾಳ ಮತ್ತು ಭಾರತದಲ್ಲಿ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ದರು. ಆದರೆ ಅವನ ಬಾಲ ಬೆಳೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ನಂತರ ದೇಶಾಂತ್ ಅವರನ್ನು ಅವರ ಪೋಷಕರು ಪಾದ್ರಿಯ ಬಳಿಗೆ ಕರೆದೊಯ್ದರು. ಅವರು ಹನುಮಂತನ ಅವತಾರ ಎಂದು ದೇಶಂತನಿಗೆ ಹೇಳಿದರು. ಇದಾದ ಬಳಿಕ ದೇಶಂತ ಹಾಗೂ ಆತನ ಪೋಷಕರಲ್ಲಿ ಬಾಲದ ಬಗ್ಗೆ ಸಂತಸದ ಅಲೆ ಎದ್ದಿತ್ತು. ಈ ಘಟನೆ ತಿಳಿದ ತಕ್ಷಣ ಜನರು ಅವರನ್ನು ನೋಡಲು ಬರಲಾರಂಭಿಸಿದರು. ಹುಡುಗನ ಬಾಲ ನೋಡಲು ಜನ ತಂಡೋಪತಂಡವಾಗಿ ಬರಲಾರಂಬಿಸಿದ್ದಾರೆ.

ಬಾಲ ತೋರಿಸಲು ನಾಚಿಕೆಪಡುತ್ತಿದ್ದ ಹುಡುಗ

ಬಾಲ ತೋರಿಸಲು ನಾಚಿಕೆಪಡುತ್ತಿದ್ದ ಹುಡುಗ

ವರದಿಯ ಪ್ರಕಾರ, ಬೆನ್ನಿನ ಕೆಳಭಾಗದಲ್ಲಿ ಮೂಳೆಯಾದ ಕೋಕ್ಸಿಕ್ಸ್‌ನಿಂದ ಹೊರಬಂದ ಈ ಬಾಲವನ್ನು ದೇಶಂತ್ ಜನಿಸಿದ ಸುಮಾರು 5 ದಿನಗಳ ನಂತರ ಅವರ ಹೆತ್ತವರು ನೋಡಿದ್ದಾರೆ. ಕೆಲವು ವೈದ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಬಾಲಕನ ಪೋಷಕರು ಹೇಳುತ್ತಾರೆ. ವೈದ್ಯರು ಸದ್ಯಕ್ಕೆ ಬಾಲ ಬೆಳೆಯುವುದನ್ನು ತಡೆದಿದ್ದರು. ಆದರೆ ಮತ್ತೆ ಬಾಲ ಬೆಳೆಯಲು ಪ್ರಾರಂಭವಾಯಿತು. ಮೊದಲು ದೇಶಂತ್ ಬಾಲ ತೋರಿಸಲು ನಾಚಿಕೆಪಡುತ್ತಿದ್ದನು, ಆದರೆ ಈಗ ಅವನು ಸ್ವಲ್ಪವೂ ನಾಚಿಕೆಪಡುವುದಿಲ್ಲ ಎಂದು ದೇಶಂತ ಹೇಳುತ್ತಾರೆ.

ಬಾಲ ಕತ್ತರಿಸಬೇಡಿ ಎಂದ ಅರ್ಚಕರು

ಟಿಕ್‌ಟಾಕ್‌ನಲ್ಲಿ ನನ್ನ ವಿಡಿಯೊವೊಂದು ವೈರಲ್ ಆಗಿದೆ ಎಂದು ಹುಡುಗ ಹೇಳಿಕೊಂಡಿದ್ದಾನೆ. ಈಗ ನನ್ನ ಬಾಲದಿಂದಾಗಿ ಸಾವಿರಾರು ಜನರು ನನ್ನನ್ನು ಗುರುತಿಸುತ್ತಾರೆ. ನನ್ನ ಆರೋಗ್ಯ ತುಂಬಾ ಚೆನ್ನಾಗಿದೆ ಎಂದು ದೇಶಂತ ಹೇಳಿಕೊಂಡಿದ್ದಾರೆ. ದೇಶಂತ ಬಾಲ 70 ಸೆಂ.ಮೀ ವರೆಗೆ ಇದೆ. ದೇಶಂತ ಬಾಲದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳನ್ನು ಮಾಡಲಾಗಿದೆ. ಅವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಜೊತೆಗೆ ಬಾಲವನ್ನು ಕತ್ತರಿಸಬೇಡಿ ಎಂದು ಅರ್ಚಕರು ಪೋಷಕರಿಗೆ ಸಲಹೆ ನೀಡಿದ್ದಾರೆ. ಈ ಹುಡುಗನಿಗೆ ಅಲೌಕಿಕ ಶಕ್ತಿಗಳಿರಬಹುದು ಎಂದು ಅರ್ಚಕರು ನಂಬುತ್ತಾರೆ.

English summary
Nepali boy Deshant has a tail. People are coming to see Deshant Adhikari. Learn more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X