ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ದಕ್ಷಿಣ ಅಮೆರಿಕದ ಅಗ್ನಿಪರ್ವತ ಸ್ಫೋಟ

By Mahesh
|
Google Oneindia Kannada News

ಸ್ಯಾಂಟಿಯಾಗೋ, ಮಾ.4: ಸುಮಾರು 3,500 ಜನರಿಗೆ ಜೀವ ಭೀತಿ ಹುಟ್ಟಿಸಿದ್ದ ಅಗ್ನಿ ಪರ್ವತ ಕೊನೆಗೂ ಸ್ಫೋಟಗೊಂಡಿದೆ. ಚಿಲಿಯ ಮೌಂಟ್ ವಿಲ್ಲಾರಿಕಾದಿಂದ ಜ್ವಾಲೆ ಸಿಡಿದು ಲಾವಾರಸ ಹರಿದ ಚಿತ್ರ ಹಾಗೂ ವಿಡಿಯೋ ಇಲ್ಲಿದೆ.

ದಕ್ಷಿಣ ಅಮೆರಿಕದ ಅಗ್ನಿಪರ್ವತ ಮಂಗಳವಾರ ಸ್ಫೋಟಗೊಂಡಿದೆ. ಸ್ಯಾಂಟಿಯಾಗೋದಿಂದ 670 ಕಿ.ಮೀ ದೂರ್ದಲ್ಲಿರುವ ಮೌಂಟ್ ವಿಲ್ಲಾರಿಕಾ ಪುಕೋನ್ ಎಂಬ ಪುಟ್ಟ ಪಟ್ಟಣಕ್ಕೆ ಭೀತಿ ಹುಟ್ಟಿಸಿತ್ತು. 22,000ಜನರಿಗೆ ಭೀತಿ ಎದುರಾಗಿತ್ತು.

Video: Mount Villarica in Chile erupts, over 3,500 evacuated

ಅದರೆ, ಸೂಕ್ತ ಮುನ್ನಚ್ಚರಿಕೆ ಕ್ರಮ ಅನುಸರಿಸಿ ಜೀವರಕ್ಷಣೆ ಮಾಡಲಾಗಿದೆ. ಅದರಲ್ಲೂ ಕೊನೆ ಕ್ಷಣದಲ್ಲಿ 3,500 ಜನರನ್ನು ಅಪಾಯ ಸ್ಥಳದಿಂದ ಸ್ಥಳಾಂತರಿಸಲಾಗಿದೆ.

ಪ್ರವಾಸಿ ತಾಣವಾಗಿರುವ ಮೌಂಟ್ ವಿಲ್ಲಾರಿಕಾದಲ್ಲಿ ಕಯಾಕಿಂಗ್, ಟ್ರೆಕ್ಕಿಂಗ್, ಫಿಶಿಂಗ್ ಮುಂತಾದ ಕಾರ್ಯಕ್ರಮ ನಡೆಯುತ್ತಿರುತ್ತದೆ. ಸುಮಾರು 40 ಚದರ ಕಿ.ಮೀ ವ್ಯಾಪ್ತಿ ಹಿಮದಿಂದ ಆವರಿಸಿದೆ.

1984ರಲ್ಲಿ ಸ್ಫೊಟಗೊಂಡಿದ್ದ ಅಗ್ನಿಪರ್ವತ ಈಗ ಮತ್ತೊಮ್ಮೆ ಸ್ಫೋಟಗೊಂಡಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಚಿಲಿಯ ಅಧ್ಯಕ್ಷ ಮಿಚೆಲ್ ಬಾಚೆಲ್ ಹೇಳಿದ್ದಾರೆ. ಅಗ್ನಿ ಪರ್ವತ ಸ್ಫೋಟ ವಿಡಿಯೋ ಇಲ್ಲಿದೆ ನೋಡಿ

ಒನ್ ಇಂಡಿಯಾ ಸುದ್ದಿ

English summary
Over 3,500 people were evacuated after Mount Villarica, one of South America's most active volcanoes located in Chile, erupted early Tuesday. The eruption occurred around 3 am local time and the National Emergency Office of the country issued a red alert and ordered evacuations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X