ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನಿಯನ್ ಸೈನಿಕನ ಜೀವನ ಉಳಿಸಿದ ಫೋನ್: ಆ ಸ್ಮಾರ್ಟ್‌ಫೋನ್ ಯಾವುದು?

|
Google Oneindia Kannada News

ಇಂದಿನ ಯುಗದಲ್ಲಿ ಮೊಬೈಲ್‌ ಫೋನ್‌ಗಳು ನಮ್ಮ ಸಾಮಾನ್ಯ ಜೀವನದ ಒಂದು ಭಾಗವಾಗಿದೆ. ಪ್ರತಿದಿನ ಫೋನ್ ಮೂಲಕ ಸಾವು ನೋವುಗಳ ಸುದ್ದಿಗಳನ್ನು ನಾವು ತಿಳಿಯುತ್ತೇವೆ. ಯುದ್ಧಭೂಮಿಯಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವ ಉಕ್ರೇನ್ ಸೈನಿಕನ ಫೋನ್ ಅವನ ಜೀವವನ್ನು ಉಳಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ದಾಳಿ ವೇಳೆ ಬಂದೂಕಿನ ಬುಲೆಟ್ ಯೋಧನ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ದಾಟಿ ಜೇಬಿನಲ್ಲಿಟ್ಟ ಮೊಬೈಲ್ ಫೋನ್ ಗೆ ತಾಗಿದೆ. ಜನರು ಫೋನ್‌ನ ಶಕ್ತಿಯನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಈ ಫೋನ್‌ನಿಂದಾಗಿ ಸೈನಿಕನ ಜೀವ ಉಳಿದಿದೆ.

ಈ ವಿಡಿಯೊ ಮತ್ತು ಇದರ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ಕ್ಲಿಪ್ ನಲ್ಲಿ ಉಕ್ರೇನಿಯನ್ ಸೈನಿಕ ತನ್ನ ಬೆನ್ನುಹೊರೆಯಿಂದ ತನ್ನ ಐಫೋನ್ ಅನ್ನು ಹೊರತೆಗೆಯುವುದನ್ನು ತೋರಿಸುತ್ತದೆ. ವಿಡಿಯೊದಲ್ಲಿ, ಸೈನಿಕನು ತನ್ನ ಬುಲೆಟ್ ಪ್ರೂಫ್ ಜಾಕೆಟ್‌ನಿಂದ ತನ್ನ ಐಫೋನ್ ಅನ್ನು ತೆಗೆಯುತ್ತಾರೆ. ಫೋನ್‌ ಮೇಲೆ ಬುಲೆಟ್ ಮಾರ್ಕ್ ಬಿದ್ದರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ 2019 ಮಾದರಿಯ ಐಫೋನ್ ಬುಲೆಟ್ ಪ್ರೂಫ್ ಜಾಕೆಟ್ ಆಗಿ ಕಾರ್ಯನಿರ್ವಹಿಸಿದ್ದು, ಸೈನಿಕನ ಪ್ರಾಣ ಉಳಿಸಿದೆ.

ಸೈನಿಕನ ಜೀವ ಉಳಿಸಿದ ಫೋನ್

ಸೈನಿಕನ ಜೀವ ಉಳಿಸಿದ ಫೋನ್

ಗುಂಡಿನ ದಾಳಿಯ ನಂತರ ಐಫೋನ್ ಕೆಟ್ಟದಾಗಿ ಹಾನಿಗೊಳಗಾಗಿದೆ. ಅದು ಯೋಧನ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. 2019 ರ ಮಾದರಿಯ ಈ ಐಫೋನ್ 11 ಪ್ರೊ ಬುಲೆಟ್ ಪ್ರೂಫ್ ಆಗಿ ಕಾರ್ಯನಿರ್ವಹಿಸಿ ಸೈನಿಕನ ಜೀವ ಉಳಿಸಿದೆ. ಈ ಫೋನ್ ಅಲ್ಲಿ ಇಡದೇ ಹೋಗಿದ್ದರೆ ತಾವು ಇಂದು ಬದುಕಿರುತ್ತಿರಲಿಲ್ಲ ಎನ್ನುತ್ತಾರೆ ಸೈನಿಕ. ಜನರು ಈಗ ಐಫೋನ್‌ನ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ರೆಡ್ಡಿಟ್‌ನಲ್ಲಿ ವಿಡಿಯೊ ಮತ್ತು ಪ್ರಕರಣವನ್ನು ಪೋಸ್ಟ್ ಮಾಡಿದ ನಂತರ, ಇದು ಮೂರೂವರೆ ಸಾವಿರಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಗಳಿಸಿದೆ, ಆದರೆ ಇನ್ನೂರಕ್ಕೂ ಹೆಚ್ಚು ಬಳಕೆದಾರರು ಅದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಹಾನಿಗೊಳಗಾದ ಫೋನ್

ಹಾನಿಗೊಳಗಾದ ಫೋನ್

'ಐಫೋನ್‌ಗಳು ಇಷ್ಟೊಂದು ಗಟ್ಟಿಯಾಗಿರುತ್ತವೆ ಎಂದು ನಮಗೆ ತಿಳಿದಿರಲಿಲ್ಲ' ಎಂದು ಬಳಕೆದಾರರೊಬ್ಬರು ಮಾಹಿತಿ ನೀಡಿದ್ದಾರೆ. 'ಫೋನ್‌ನಿಂದಾಗಿ ಸೈನಿಕನ ಪ್ರಾಣ ಉಳಿದಿರುವುದು ಇದು ನಂಬಲು ಅನರ್ಹವಾದ ವಿಷಯ'ಎಂದು ಮತ್ತೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ 'ನೀನು ಸೈನಿಕನ ಪ್ರಾಣ ಉಳಿಸಿದೆ ನಿನ್ನ ಪ್ರಾಣವೂ ಉಳಿಯುತ್ತದೆ' ಎಂದು ಬರೆದಿದ್ದಾರೆ. ಇನ್ನೂ ಕೆಲವರು 'ಬುಲೆಟ್ ಫ್ರೂಫ್ ಐಫೋನ್ ಅನ್ನು ಏಕೆ ತಯಾರಿಸಬಾರದು? ಅದು ತುಂಬಾ ಹಗುರವಾಗಿರುತ್ತದೆ' ಎಂದು ಸಲಹೆ ನೀಡಿದ್ದಾರೆ.

"ಬುಲೆಟ್ ಫ್ರೂಫ್ ಐಫೋನ್‌ನಲ್ಲಿ ಚಿತ್ರೀಕರಿಸಬಹದು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಫೋನಿನಲ್ಲಿ ಕಂಡ ಬುಲೇಟ್

ಫೋನ್‌ನಿಂದಾಗಿ ಉಕ್ರೇನಿಯನ್ ಸೈನಿಕನ ಜೀವ ಉಳಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಅದರಲ್ಲಿ ರಷ್ಯಾದ ಸೈನಿಕನೊಬ್ಬ ಹಾರಿಸಿದ ಬುಲೆಟ್ ಉಕ್ರೇನ್ ಸೈನಿಕನ ಸ್ಮಾರ್ಟ್ ಫೋನ್ ಗೆ ತಗುಲಿತ್ತು. 45 ಸೆಕೆಂಡುಗಳ ವಿಡಿಯೊದಲ್ಲಿ, ಉಕ್ರೇನಿಯನ್ ಸೈನಿಕನೊಬ್ಬ ತನ್ನ ಮುರಿದ ಫೋನ್‌ನಲ್ಲಿ 7.62 ಎಂಎಂ ಬುಲೆಟ್ ಸಿಲುಕಿರುವುದನ್ನು ತೋರಿಸುತ್ತಾರೆ. ಸ್ಮಾರ್ಟ್ ಫೋನ್ ನನ್ನ ಜೀವ ಉಳಿಸಿದೆ ಎಂದು ಸೈನಿಕ ತನ್ನ ಸಹೋದ್ಯೋಗಿಗೆ ಹೇಳುತ್ತಾರೆ. ವಿಡಿಯೋದಲ್ಲಿ ಗುಂಡಿನ ಸದ್ದು, ಸ್ಫೋಟದ ಸದ್ದು ಕೂಡ ಕೇಳಿಬರುತ್ತಿದೆ.

ಕೊನೆಗೊಳ್ಳದ ಯುದ್ಧ

ಕೊನೆಗೊಳ್ಳದ ಯುದ್ಧ

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಶನಿವಾರ, ರಷ್ಯಾದ ಪಡೆಗಳು ಉಕ್ರೇನ್‌ನ ದಕ್ಷಿಣ ನಗರವಾದ ನಿಕೋಪೋಲ್ ಮೇಲೆ ಗುಂಡಿನ ದಾಳಿ ನಡೆಸಿವೆ. ಇದರಲ್ಲಿ ಉಕ್ರೇನ್‌ನ ತುರ್ತು ಸೇವೆಗಳ ಇಬ್ಬರು ಗಾಯಗೊಂಡಿದ್ದಾರೆ ಮತ್ತು ಇಬ್ಬರು ಅವಶೇಷಗಳಡಿಯಲ್ಲಿ ಹೂತುಹೋಗಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ, ಡೊನೆಟ್ಸ್ಕ್‌ನ ಪೂರ್ವ ಪ್ರದೇಶದ 10 ಸ್ಥಳಗಳಲ್ಲಿ ಶೆಲ್ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಘೋಷಿಸಿದೆ. ಕಪ್ಪು ಸಮುದ್ರದಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಿದ ಕಲಿಬ್ರ್ ಕ್ರೂಸ್ ಕ್ಷಿಪಣಿಗಳು ವಿನ್ನಿಟ್ಸಿಯಾದಲ್ಲಿನ ಕಚೇರಿ ಕಟ್ಟಡವನ್ನು ಹೊಡೆದವು ಎಂದು ಕೈವ್ ಒಂದು ದಿನ ಮುಂಚಿತವಾಗಿ ವರದಿ ಮಾಡಿದೆ. ದಾಳಿಯಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆಂದು ವರದಿಯಾಗಿದೆ.

English summary
An iPhone saved the life of a Ukrainian soldier and it is being discussed in the social network. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X