• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದ ನ್ಯಾಯಾಲಯದ ಹೊರಗೆ ಮಹಿಳೆಯನ್ನು ಎಳೆದೊಯ್ದು ದೌರ್ಜನ್ಯ

|
Google Oneindia Kannada News

ಸಿಂಧ್ ಪ್ರಾಂತ್ಯ ಡಿಸೆಂಬರ್ 21: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಹೃದಯ ವಿದ್ರಾವಕ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಹಿಂದು ಮಹಿಳೆಯನ್ನು ಸಾರ್ವಜನಿಕವಾಗಿ ಕೆಲವರು ಎಳೆದೊಯ್ಯತ್ತಿರುವುದು ಕಂಡು ಬಂದಿದೆ. ನ್ಯಾಯಾಲಯದ ಮುಂದೆ ಮಹಿಳೆಯನ್ನು ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ. ಆದರೂ ಆಕೆಯ ರಕ್ಷಣೆಗೆ ಯಾರೂ ಕೂಡ ಮುಂದಾಗಿಲ್ಲ. ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಹೋಗುವ ಕಿಡಿಗೇಡಿತನವನ್ನು ಜನ ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಈ ವಿಡಿಯೋವನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ದೇವಾಲಯಗಳು ಮತ್ತು ದೇವತೆಗಳ ಮೇಲೆ ದಾಳಿಗಳ ಮಧ್ಯೆ ಹೃದಯ ವಿದ್ರಾವಕ ವೀಡಿಯೊವೊಂದು ಹೊರಬಿದ್ದಿದೆ. ಈ ವಿಡಿಯೋವನ್ನು ಭಾರತೀಯ ಜನತಾ ಪಕ್ಷದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಲವರು ಹಿಂದೂ ಮಹಿಳೆಯನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಆಕೆ ತನ್ನನ್ನು ರಕ್ಷಿಸುವಂತೆ ಮನವಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ್ದು ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಕುರಿತು ಸಿರ್ಸಾ ಅವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಉಮರ್‌ಕೋಟ್‌ನಲ್ಲಿ ಹಿಂದೂ ಮಹಿಳೆಯೊಬ್ಬರನ್ನು ಈ ರೀತಿ ಅಪಹರಿಸಲಾಗಿದೆ ಎಂದು ಹೇಳಿದ್ದಾರೆ.

ಮಂಜಿಂದರ್ ಸಿಂಗ್ ಸಿರ್ಸಾ ಅವರು ತಮ್ಮ ಟ್ವೀಟ್‌ನಲ್ಲಿ, 'ನಾನು ದಿಗ್ಭ್ರಮೆಗೊಂಡಿದ್ದೇನೆ. ಪಾಕಿಸ್ತಾನದ ಸಿಂಧ್‌ನ ಉಮರ್‌ಕೋಟ್‌ನಲ್ಲಿರುವ ಸೆಷನ್ಸ್ ನ್ಯಾಯಾಲಯದ ಹೊರಗಿನಿಂದ ಹಗಲು ಹೊತ್ತಿನಲ್ಲಿ ಹಿಂದೂ ಮಹಿಳೆಯನ್ನು ಹೇಗೆ ಅಪಹರಿಸಲಾಗಿದೆ ಎಂಬುದನ್ನು ವೀಕ್ಷಿಸಿ. ಅವಳು ಸಹಾಯಕ್ಕಾಗಿ ಕಿರುಚುತ್ತಿದ್ದಳು. ಅವಳ ಸಹಾಯಕ್ಕೆ ಯಾರೂ ಕೂಡ ಬರಲಿಲ್ಲ. ಕಿಡಿಗೇಡಿಗಳು ಯಾವುದೇ ಪೊಲೀಸರ ಕ್ರಮಕ್ಕೆ ಹೆದರುವುದಿಲ್ಲ. ಅವರು ಅವಳ ಕೂದಲು ಹಿಡಿದು ಎಳೆದುಕೊಂಡು ಕಾರಿನಲ್ಲಿ ಹಾಕಿದರು. ಈಕೆಯನ್ನು ಕಾರಿನಲ್ಲಿ ಕೂರಿಸುವಂತೆ ಕೆಲವರು ಕೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ. ಅಪಹರಣಕಾರರಲ್ಲಿ ನಾಲ್ವರು ಪುರುಷರು ಕಾಣಿಸಿಕೊಂಡಿದ್ದಾರೆ. ಉಳಿದವರು ಮೂಕಪ್ರೇಕ್ಷಕರಾಗಿದ್ದಾರೆ. ಯಾರೂ ಕೂಡ ಈ ಕೃತ್ಯವನ್ನು ತಡೆದಿಲ್ಲ. ಸಿರ್ಸಾ ಅವರು ತಮ್ಮ ಟ್ವೀಟ್ ಅನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಮುಂದಿನ ಟ್ವೀಟ್‌ನಲ್ಲಿ ಚಿತ್ರ ಹಾಕಿರುವ ಅವರು, ಪಾಕಿಸ್ತಾನದಲ್ಲಿರುವ ಹಿಂದೂಗಳ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡುತ್ತಾ, 'ಅಪಹರಣ, ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ಈ ಹಿಂದೂ ಯುವತಿ ಹರಿಯಾನ್ ಮೇಘವಾರ್ ಬಗ್ಗೆ ಪಾಕಿಸ್ತಾನದ ಹಿಂದೂ ಹೇಳಿದ್ದಾನೆ. ಬಲವಂತವಾಗಿ ಈಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಈಗಾಗಲೇ ಮದುವೆಯಾಗಿದ್ದ ತನ್ನ ಅಪಹರಣಕಾರ 31 ವರ್ಷದ ಸಹೋದರ ಖಾನ್ ಅವರನ್ನು ವಿವಾಹವಾದಳು' ಎಂದಿದ್ದಾರೆ. ಆದಾಗ್ಯೂ, ಈ ವರದಿಗಳು ಮತ್ತು ವೀಡಿಯೊಗಳ ಸತ್ಯಾಸತ್ಯತೆಯನ್ನು ಒನ್ಇಂಡಿಯಾ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದರೆ ಪಾಕಿಸ್ತಾನದಲ್ಲಿ ಹಿಂದೂ ಸಮುದಾಯದ ಮೇಲಿನ ಶೋಷಣೆ ಹೊಸ ವಿದ್ಯಮಾನವಲ್ಲ.

ಮತ್ತೊಂದು ವಿಡಿಯೊದಲ್ಲಿ, ಸಿರ್ಸಾ ಅವರು ಪಾಕಿಸ್ತಾನದಲ್ಲಿ ಹಿಂದೂಗಳ ವಿರುದ್ಧ ಮತ್ತೊಂದು ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾರೆ. 'ಲೈಂಗಿಕ ಶೋಷಣೆ ಮತ್ತು ಬಲವಂತದ ಮತಾಂತರಕ್ಕಾಗಿ 14 ವರ್ಷದ ಹಿಂದೂ ಹುಡುಗ ಅವಿನಾಶ್ ಕೊಹ್ಲಿಯನ್ನು ಆತನ ಮನೆಯಿಂದ ಬಂದೂಕು ತೋರಿಸಿ ಅಪಹರಿಸಲಾಗಿದೆ' ಎಂದು ಅವರು ಹೇಳಿದ್ದಾರೆ. ಸ್ವಾತಂತ್ರ್ಯದ ನಂತರ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆಯು ನಿರಂತರವಾಗಿ ಕ್ಷೀಣಿಸುತ್ತಿದೆ. ಅವರ ವಿರುದ್ಧ ಭಯಾನಕ ಘಟನೆಗಳು ವರದಿಗಳಾಗುತ್ತಿವೆ.

English summary
A heart-wrenching video of atrocities on Hindus in Pakistan has surfaced. In this, a Hindu woman is being abducted by some people in public and that too in front of the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X