ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಬಾಹ್ಯಾಕಾಶದಲ್ಲಿ ತೇಲಾಡುವ ಕನಸಿಗೆ ರೆಕ್ಕೆ ಪುಕ್ಕ

|
Google Oneindia Kannada News

ನ್ಯೂಯಾರ್ಕ್, ಜುಲೈ 12: ಬಾಹ್ಯಾಕಾಶದಲ್ಲಿ ಹಾರಾಡಬೇಕು ಎಂಬ ಕನಸಿಗೆ ರೆಕ್ಕೆ ಪುಕ್ಕ ಮೂಡಿದೆ. ಇಂಗ್ಲೆಂಡಿನ ಕೋಟ್ಯಧಿಪತಿ ಆಗಿರುವ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಆ ಮೂಲಕ ಬಾನಂಗಳದಲ್ಲಿ ಹಾರಾಡುವ ಮನುಷ್ಯನ ಕನಸು ನನಸಾಗಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

Recommended Video

ಇಂಗ್ಲೆಂಡಿನ ಕೋಟ್ಯಧಿಪತಿ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದು ಹೀಗೆ! | Oneindia

ವರ್ಜಿನ್​ ಗ್ಯಾಲಕ್ಟಿಕ್ ಸ್ಪೇಸ್​ಫ್ಲೈಟ್​ ಕಂಪನಿಯಲ್ಲಿ ತಮ್ಮ ತಾಯಿ ಹೆಸರಿನಲ್ಲೇ ರಚಿಸಿರುವ ವಿಭಿನ್ನ ಹಾಗೂ ವಿಶಿಷ್ಟವಾದ ವಿಎಸ್ಎಸ್ ಯುನಿಟಿ ಗಗನ ನೌಕೆಯಲ್ಲಿ ತಮ್ಮ ಐದು ಮಂದಿ ತಂತ್ರಜ್ಞರು ಹಾಗೂ ಸಹಚರರೊಂದಿಗೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಬಾಹ್ಯಾಕಾಶಕ್ಕೆ ಜಿಗಿದ ಕೋಟ್ಯಧೀಶ ರಿಚರ್ಡ್ ಬ್ರಾನ್ಸನ್ ಮೊದಲ ಅನುಭವಬಾಹ್ಯಾಕಾಶಕ್ಕೆ ಜಿಗಿದ ಕೋಟ್ಯಧೀಶ ರಿಚರ್ಡ್ ಬ್ರಾನ್ಸನ್ ಮೊದಲ ಅನುಭವ

ನ್ಯೂ ಮೆಕ್ಸಿಕೋ ಮರುಭೂಮಿಯಿಂದ 89 ಕಿಲೋ ಮೀಟರ್ (53 ಮೈಲಿ) ಎತ್ತರಕ್ಕೆ ಹಾರಿದ್ದಾರೆ. ಯಾವುದೇ ಅಡ್ಡಿ ಆತಂಕವಿಲ್ಲದೇ ಪ್ರವಾಸ ಆರಂಭವಾದ ಒಂದು ಗಂಟೆಯ ನಂತರ ಅಂದರೆ ಮೌಂಟೇನ್ ಟೈಮ್ (1540 GMT) ಬೆಳಿಗ್ಗೆ 9:40ಕ್ಕೆ ನಿಗದಿತ ಗುರಿಯನ್ನು ತಲುಪಿದೆ.

Video: Billionaire Richard Branson Fly In Space From Virgin Galactic Vessel Project

ಬಾನಂಗಳಕ್ಕೆ ಹಾರಿದ ಎರಡನೇ ಸಾಧಕ:

71 ವರ್ಷದ ರಿಚರ್ಡ್ ಬ್ರಾನ್ಸನ್ ತಮ್ಮದೇ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಬಾಹ್ಯಾಕಾಶಕ್ಕೆ ಹಾರಿದ 70 ವರ್ಷಕ್ಕಿಂತ ಮೇಲ್ಪಟ್ಟ ಸಾಧಕರಲ್ಲಿ ಇವರು ಎರಡನೇಯವರಾಗಿದ್ದಾರೆ. ಈ ಹಿಂದೆ 1998ರಲ್ಲಿ 77 ವರ್ಷದ ಗಗನಯಾತ್ರಿ ಜಾನ್ ಗ್ಲೇನ್ ಬಾಹ್ಯಾಕಾಶ ಪ್ರವಾಸ ಕೈಗೊಂಡಿದ್ದರು.

ಗಗನ ನೌಕೆಗೆ ರಿಚರ್ಡ್ ಬ್ರಾನ್ಸನ್ ತಾಯಿ ಹೆಸರು:

ವಿಎಸ್​ಎಸ್​ ಯುನಿಟಿ ಒಂದು ಬಿಳಿಬಣ್ಣದ ಬಾಹ್ಯಾಕಾಶ ನೌಕೆಯಾಗಿದೆ. ಈ ಜೆಟ್​​ಗೆ ರಿಚರ್ಡ್ ಬ್ರಾನ್ಸನ್​ ತಾಯಿ ಹೆಸರು VMS Eve ಎಂದು ನಾಮಕರಣ ಮಾಡಲಾಗಿದೆ. ವಿಎಸ್​ಎಸ್​ ನೌಕೆ, ಭೂಮಿಯ ವಾತಾವರಣದ ಹೊರಗಿನ ಅಂಚಿನ ಹಿಂದೆ ನೇರವಾಗಿ ಸುಮಾರು 50,000 ಅಡಿ ಎತ್ತರದವರೆಗೂ ಈ VMS Eve ಫ್ಲ್ಯೂಸೇಜ್​ ಕ್ಯಾರಿಯರ್​ ಜೆಟ್​ ಹಾರಿದೆ. ನ್ಯೂ ಮೆಕ್ಸಿಕೊ ಮರುಭೂಮಿಗಿಂತ 89 ಕಿಮೀ ಎತ್ತರದಲ್ಲಿ ಕೆಲವು ನಿಮಿಷಗಳ ಕಾಲ ಗಗನಯಾತ್ರಿಗಳು ತೂಕವಿಲ್ಲದ ಸ್ಥಿತಿಯನ್ನು ಹಾರಾಟ ನಡೆಸಿದರು.

English summary
Video: Billionaire Richard Branson Fly In Space From Virgin Galactic vessel Project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X