ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಡ್ ಲಕ್: ಅಫ್ಘನ್‌ನಿಂದ ಉಕ್ರೇನ್‌ಗೆ ಬಂದವರು ಇಲ್ಲೂ ನೆಲೆ ಕಳೆದುಕೊಂಡರು

|
Google Oneindia Kannada News

ಮೆಡಿಕಾ, ಫೆಬ್ರವರಿ 28: ದುರಾದೃಷ್ಟ ಎಂದರೆ ಹೇಗಿರುತ್ತೆ ನೋಡಿ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಭಯದಿಂದ ದೇಶಬಿಟ್ಟು ಉಕ್ರೇನ್‌ಗೆ ಬಂದವರು ಇದೀಗ ಉಕ್ರೇನ್‌ ಅನ್ನೂ ಬಿಡುವ ಪರಿಸ್ಥಿತಿ ಎದುರಾಗಿದೆ.

ಒಂದು ವರ್ಷದ ಹಿಂದೆ ಅಫ್ಘಾನಿಸ್ತಾನವನ್ನು ತೊರೆದ ಅಜ್ಮಲ್ ರಹಮಾನಿ ಎಂಬವರು ಉಕ್ರೇನ್‌ಗೆ ಬಂದಿದ್ದರು, ಇಲ್ಲಿಯೇ ನೆಮ್ಮದಿಯಾಗಿದ್ದರು, ಆದರೆ ಅವರ ದುರಾದೃಷ್ಟ ನೋಡಿ, ರಷ್ಯಾವು ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಬಳಿಕ ಅಲ್ಲಿಯೂ ಮತ್ತೆ ನೆಲೆ ಕಳೆದುಕೊಂಡಿದ್ದಾರೆ.

ರಷ್ಯಾದಿಂದ ಉಕ್ರೇನ್ ಅಧಿಕಾರಿಗಳ ಫೇಸ್‌ಬುಕ್ ಖಾತೆ ಹ್ಯಾಕ್ರಷ್ಯಾದಿಂದ ಉಕ್ರೇನ್ ಅಧಿಕಾರಿಗಳ ಫೇಸ್‌ಬುಕ್ ಖಾತೆ ಹ್ಯಾಕ್

ಹಾಗೆಯೇ ಬೇರೆ ದೇಶಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್​ ತೊರೆದು ಪೋಲ್ಯಾಂಡ್​​​​​​​ಗೆ ಬಂದಿರುವ ರಹಮಾನಿ ನಾನು ಒಂದು ಯುದ್ಧದಿಂದ ಓಡಿ, ಇನ್ನೊಂದು ದೇಶಕ್ಕೆ ಬಂದೆ. ಈಗ ಇಲ್ಲಿ ಇನ್ನೊಂದು ಯುದ್ಧ ಪ್ರಾರಂಭವಾಗಿದೆ. ದುರಾದೃಷ್ಟ ಎಂದರೆ ಇದೇ. ನಾನು ಎಲ್ಲವನ್ನೂ ಕಳೆದುಕೊಂಡೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Very Bad Luck: Afghan Who Moved To Ukraine Forced To Flee Again

ಉಕ್ರೇನ್​ಗೆ ಬರುವ ಮುನ್ನ "ನನಗೆ ಅಫ್ಘಾನಿಸ್ತಾನದಲ್ಲಿ ಉತ್ತಮ ಜೀವನವಿತ್ತು, ಖಾಸಗಿ ಮನೆ ಇತ್ತು, ಕಾರು ಇತ್ತು, ಒಳ್ಳೆಯ ಸಂಬಳವಿತ್ತು. ಕಾರು, ಮನೆ ಎಲ್ಲವನ್ನೂ ಮಾರಿದೆ" ಎಂದು ರಹಮಾನಿ ಹೇಳಿಕೊಂಡಿದ್ದಾರೆ. ಇದೀಗ ಉಕ್ರೇನ್​ ಅನ್ನೂ ಬಿಟ್ಟು ತಮ್ಮ ಪತ್ನಿ - ಮಕ್ಕಳೊಂದಿಗೆ ಪೋಲ್ಯಾಂಡ್​ನ ಮೆಡಿಕಾ ನಗರಕ್ಕೆ ಕಿಲೋ ಮೀಟರ್​ಗಟ್ಟಲೆ ನಡೆದುಕೊಂಡು​ ಬಂದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನ್ಯಾಟೋಗಾಗಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ 18 ವರ್ಷಗಳ ಕಾಲ ಅಜ್ಮಲ್ ರಹಮಾನಿ ಕೆಲಸ ಮಾಡಿದ್ದರು. ಅಫ್ಘಾನಿಸ್ತಾನದಿಂದ ಯುಎಸ್​ ತನ್ನ ಸೇನೆಯನ್ನು ಹಿಂಪಡೆಯುವ ನಾಲ್ಕು ತಿಂಗಳ ಮೊದಲು ಬೆದರಿಕೆಗಳನ್ನು ಸ್ವೀಕರಿಸಿದ ಕಾರಣ ದೇಶ ತೊರೆಯಲು ನಿರ್ಧರಿಸಿದರು. ಅವರ ಮಕ್ಕಳೂ ಶಾಲೆಯಿಂದ ದೂರ ಉಳಿಯುವಂತಾಗಿತ್ತು.

ರಷ್ಯಾ ದಾಳಿಗೆ ಸಿಲುಕಿ ನಲುಗುತ್ತಿರುವ ಉಕ್ರೇನಿಗೆ ಸೇನಾ ಶಸ್ತ್ರಾಸ್ತ್ರ ನೆರವು ನೀಡಲು ಆಸ್ಟ್ರೇಲಿಯಾ ನಿರ್ಧರಿಸಿದೆ. ಇದರೊಂದಿಗೆ ಕೋಟ್ಯಂತರ ರೂ. ಮೌಲ್ಯದ ಔಷಧವನ್ನೂ ಒದಗಿಸಲಿದೆ.ಆಸ್ಟ್ರೇಲಿಯಾ ತನ್ನ ಬಳಿಯಿರುವ ಅಪಾಯಕಾರಿ ಮಾರಕ ಶಸ್ತ್ರಾಸ್ತ್ರಗಳನ್ನು ಕಳಿಸಿಕೊಡುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಆಸ್ಟ್ರೇಲಿಯ ಸರ್ಕಾರ ಹೆಚ್ಚುವರಿ ಮಾಹಿತಿಯನ್ನು ನೀಡಿಲ್ಲ.

ಇದಕ್ಕೂ ಮುನ್ನ ರಷ್ಯಾ ದಾಳಿಯನ್ನು ಖಂಡಿಸಿದ್ದ ಆಸ್ಟ್ರೇಲಿಯಾ, ಸುಮಾರು 350ಕ್ಕೂ ಹೆಚ್ಚು ರಷ್ಯನ್ ಮಿಲಿಟರಿ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಿ ತನ್ನ ವಿರೋಧ ವ್ಯಕ್ತಪಡಿಸಿತ್ತು.

English summary
After leaving Afghanistan a year ago, Ajmal Rahmani believed he had found a haven of peace in Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X