ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೋಣ್ ಮೂಲಕ ವೆನಿಜುವೆಲಾ ಅಧ್ಯಕ್ಷ ಹತ್ಯಾ ಪ್ರಯತ್ನ

|
Google Oneindia Kannada News

ವೆನಿಜುವೆಲಾದ ಅಧ್ಯಕ್ಷ ನಿಕೊಲಾಸ್ ಮದುರೊ ಮೇಲೆ ಡ್ರೋಣ್ ಮೂಲಕ ಹತ್ಯಾ ಪ್ರಯತ್ನ ನಡೆದಿದ್ದು, ಅದರಿಂದ ಅವರು ಪಾರಾಗಿದ್ದಾರೆ. ಶನಿವಾರದಂದು ಮಿಲಿಟರಿ ಪರೇಡ್ ವೇಳೆ ಭಾಷಣ ಮಾಡುವಾಗ ಆವರ ಕಡೆದ ಸ್ಫೋಟಕಗಳಿದ್ದ ಡ್ರೋಣ್ ಗಳು ಹಾರುತ್ತಾ ಬಂದಿದ್ದವು. ವೆನಿಜುವೆಲಾದ ರಾಜಧಾನಿ ಕರಾಕಸ್ ನಲ್ಲಿ ನಡೆದ ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.

ರಾಷ್ಟ್ರೀಯ ರಕ್ಷಣಾ ಪಡೆಯ ಏಳು ಮಂದಿಗೆ ದಾಳಿ ವೇಳೆ ಗಾಯಗಳಾಗಿವೆ. ಉಗ್ರ ಬಲಪಂಥೀಯವಾದಿಗಳು ಹಾಗೂ ಕೊಲಂಬಿಯಾದ ನಿರ್ಗಮಿತ ಅಧ್ಯಕ್ಷ ಜುವಾನ್ ಮಾನುಯೆಲ್ ಸಂಟೋಸ್ ವಿರುದ್ಧ ನಿಕೊಲಾಸ್ ಮದುರೊ ಅವರು ಆರೋಪ ಮಾಡಿದ್ದಾರೆ. ಆದರೆ ಕೊಲಂಬಿಯಾ ಅಧ್ಯಕ್ಷರ ಮೂಲಗಳು, ಇದು ಆಧಾರರಹಿತ ಆರೋಪ ಎಂದಿವೆ.

Assassination Attempt

ಹತ್ಯಾಪ್ರಯತ್ನ ಎಂಬ ಆರೋಪ ಕೇಳಿಬಂದ ಕೆಲ ಗಂಟೆಗಳ ನಂತರ ವೆನಿಜುವೆಲಾದ ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಮದುರೊ, ನಾನು ಬದುಕಿದ್ದೇನೆ ಮತ್ತು ಗೆದ್ದಿದ್ದೇನೆ ಎಂದು ಹೇಳಿದ್ದಾರೆ.

ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?

ವಾಸ್ತವವಾಗಿ ಎರಡು ಸ್ಫೋಟಗಳಾಗಿವೆ. ಮೊದಲನೆಯದನ್ನು ಸೇನಾ ಪರೇಡ್ ನಲ್ಲಿನ ಪಟಾಕಿ ಸದ್ದು ಅಂತಲೇ ಭಾವಿಸಿದ್ದೆ ಎಂದು ಅಧ್ಯಕ್ಷರು ಹೇಳಿದ್ದಾರೆ. ಸದ್ಯಕ್ಕೆ ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

English summary
Venezuelan President Nicolas Maduro survived an apparent assassination attempt Saturday after several drones armed with explosives flew toward him during a speech at a military parade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X