ವೆನಿಜುವೆಲಾ ಜೈಲಿನಲ್ಲಿ ಭೀಕರ ಬೆಂಕಿ, 68 ಬಲಿ

Subscribe to Oneindia Kannada

ವೆಲೆನ್ಸಿಯಾ, ಮಾರ್ಚ್ 29: ಕ್ಯಾರಬೊಬೊ ರಾಜ್ಯದ ವೆಲೆನ್ಸಿಯಾ ನಗರದಲ್ಲಿರುವ ಪೊಲೀಸ್ ಠಾಣೆಯೊಂದರಲ್ಲಿ ನಡೆದ ಬೆಂಕಿ ದುರಂತದಲ್ಲಿ 68 ಜನರು ಸಾವನ್ನಪ್ಪಿದ್ದಾರೆ.

ಜೈಲಿನಲ್ಲಿದ್ದ ಖೈದಿಗಳು ಬೆಡ್ ಶೀಟ್ ಗಳಿಗೆ ಬೆಂಕಿ ಹಾಕಿ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ನಡೆದ ದುರಂತದಲ್ಲಿ ಖೈದಿಗಳು ಮತ್ತು ಜೈಲಿನ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಜೈಲಿನ ಸುತ್ತ ಸುತ್ತುವರಿದಿದ್ದು, ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Venezuela fire: 68 die in Carabobo police station cells

ಜೈಲಿನಲ್ಲಿ ನಡೆದಿದ್ದೇನು?

ಜೈಲಿನಲ್ಲಿ ನಿಜಕ್ಕೂ ನಡೆದಿದ್ದೇನು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಮೂಲಗಳ ಪ್ರಕಾರ ವಶಕ್ಕೆ ಪಡೆದಿದ್ದ ಆರೋಪಿಯೊಬ್ಬ ಪೊಲೀಸ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದ. ಇದಾದ ಬಳಿಕ ಖೈದಿಗಳು ಜೈಲಿನಲ್ಲಿ ಬೆಡ್ ಶೀಟ್ ಗಳಿಗೆ ಬೆಂಕಿ ಹಾಕಿದ್ದರು. ಕ್ಷಣ ಮಾತ್ರದಲ್ಲಿ ಈ ಬೆಂಕಿ ಜೈಲಿನ ತುಂಬಾ ಹರಡಿಕೊಂಡಿತ್ತು. ಜೈಲಿನಿಂದ ಪರಾರಿಯಾಗಲು ಸಂಚು ರೂಪಿಸಿ ಬೆಂಕಿ ಹಾಕಲಾಗಿತ್ತು ಎನ್ನಲಾಗಿದೆ.

ಕೋಲಾರದ ಬನಶಂಕರಿ ತೈಲ ಕಾರ್ಖಾನೆಯಲ್ಲಿ ಅಗ್ನಿ ಅವಘಡ

ಘಟನೆಯಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿದ್ದಾರೆ. ಇನ್ನು ಜೈಲಿಗೆ ಭೇಟಿಗೆ ಬಂದ ಇಬ್ಬರು ಮಹಿಳೆಯರು ಹಾಗೂ ಉಳಿದ ಖೈದಿಗಳು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಕೆಲವರು ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದರೆ, ಇನ್ನು ಕೆಲವರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A fire at a police station in the Venezuelan city of Valencia, in Carabobo state, has left 68 people dead.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ