ವೀಣಾ ಮಲಿಕ್ ಮೂರು ವರ್ಷದ ದಾಂಪತ್ಯ ಜೀವನ ಅಂತ್ಯ

Posted By:
Subscribe to Oneindia Kannada

ಲಾಹೋರ್ ಮಾರ್ಚ್ 11: ಪಾಕಿಸ್ಥಾನಿ ನಟಿ ವೀಣಾ ಮಲಿಕ್ ತಮ್ಮ ಮೂರು ವರ್ಷದ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದಾರೆ. 2013 ರ ಡಿಸೆಂಬರ್ ನಲ್ಲಿ ಅಸಾದ್ ಬಶಿರ್ ಖಾನ್ ಎಂಬುವವರನ್ನು ಮದುವೆಯಾಗಿದ್ದ 33 ವರ್ಷದ ವೀಣಾ ಮಲಿಕ್ ಹೊಂದಾಣಿಕೆಯ ಕೊರತೆಯ ಕಾರಣ ನೀಡಿ ಇಲ್ಲಿನ ಕುಟುಂಬ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು. []

ಇದಕ್ಕೆ ತಮ್ಮ ಸಮ್ಮತಿಯಿದೆಯೇ ಎಂದು ಅಸಾದ್ ಬಶಿರ್ ಗೆ ನ್ಯಾಯಾಲಯ ನೋಟೀಸ್ ಕಳಿಸಿತ್ತು. ಆದರೆ ಅವರು ಯಾವುದೇ ಉತ್ತರ ನೀಡಿರಲಿಲ್ಲ. ಇದೀಗ ಇಲ್ಲಿನ ಕೋರ್ಟ್ ಅವರು ವಿಚ್ಛೇದನ ಪಡೆಯಲು ಅನುಮತಿ ನೀಡಿದೆ. ವೀಣಾ ಮತ್ತು ಅಸಾದ್ ಗೆ ಅಬ್ರಾಮ್ ಮತ್ತು ಅಮಲ್ ಎಂಬ ಇಬ್ಬರು ಮಕ್ಕಳಿದ್ದಾರೆ. [ಕಿಚ್ಚ ಸುದೀಪ್ ದಂಪತಿ ವಿರುದ್ಧ ಗರಂ ಆದ ಕೌಟುಂಬಿಕ ಕೋರ್ಟ್!]

Veena malik ends relationship with Asad

ವೀಣಾ ಮಲಿಕ್ ಮದುವೆಯ ಸಂದರ್ಭದಲ್ಲಿ ತೆಗೆದುಕೊಂಡಿದ್ದ ವಧುದಕ್ಷಿಣೆಯ 25% ಭಾಗವನ್ನು ಅಸಾದ್ ಗೆ ಹಿಂದಿರುಗಿಸಬೇಕೆಂದು ಕೋರ್ಟ್ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakisthani Actress Veena Malik gets divorce. She ends her relationship with Asad Bhashir Khan. 33 year Actress has 2 sons.
Please Wait while comments are loading...