ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ; ಬಳಕೆಗೆ ಒಪ್ಪಿದ ವ್ಯಾಟಿಕನ್

|
Google Oneindia Kannada News

ವ್ಯಾಟಿಕನ್ ಸಿಟಿ, ಡಿಸೆಂಬರ್ 22: ಗರ್ಭಪಾತಗೊಂಡ ಭ್ರೂಣದ ಅಂಗಾಂಶ ಬಳಸಿ ತಯಾರಿಸಿದ ಕೋವಿಡ್ ಲಸಿಕೆ ಬಳಸುವುದು ನೈತಿಕವಾಗಿ ಒಪ್ಪಿತ ಎಂದು ಪೋಪ್ ತಿಳಿಸಿದ್ದಾರೆ. ಯಾವುದೇ ಪರ್ಯಾಯ ಆಯ್ಕೆ ಇಲ್ಲದ ಸಂದರ್ಭ ಈ ಲಸಿಕೆಗಳನ್ನು ಬಳಸಲು ಯಾವುದೇ ಅಡ್ಡಿಯಿಲ್ಲ ಎಂದು ವ್ಯಾಟಿಕನ್ ಡಾಕ್ಟ್ರಿನಲ್ ಕಾಂಗ್ರಿಗೇಷನ್ ಟಿಪ್ಪಣಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಫೈಜರ್ ಹಾಗೂ ಮಾಡರ್ನಾ ಈ ಎರಡೂ ಲಸಿಕೆಗಳು, ಗರ್ಭಪಾತವಾದ ಭ್ರೂಣದ ಅಂಗಾಂಶವನ್ನು ಬಳಸಿ ಅಭಿವೃದ್ಧಿಪಡಿಸಿವೆ ಎನ್ನಲಾಗಿದ್ದು, ಇಡೀ ವಿಶ್ವವೇ ತತ್ತರಿಸಿರುವ ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ಲಸಿಕೆ ಬಳಕೆ ಸ್ವೀಕಾರಾರ್ಹ ಎಂದು ತಿಳಿಸಿ ಯುಎಸ್ ಕಾನ್ಫರೆನ್ಸ್ ಆಫ್ ಕ್ಯಾಥೋಲಿಕ್ ಬಿಷಪ್ (ಯುಎಸ್‌ಸಿಸಿಬಿ ) ಕಳೆದ ವಾರ ಅಮೆರಿಕದ ಕ್ಯಾಥೋಲಿಕ್ ಗಳಿಗೆ ಟಿಪ್ಪಣಿ ಕಳುಹಿಸಿದ್ದಾರೆ.

ಬ್ರಿಟನ್ ನಿಂದ ಬಂದ 6 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಬ್ರಿಟನ್ ನಿಂದ ಬಂದ 6 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆ

ಇಂಥ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ನೈತಿಕವಾಗಿ ನ್ಯಾಯ ಸಮ್ಮತಿ ನೀಡುವುದು ಜವಾಬ್ದಾರಿಯ ವಿಭಿನ್ನ ಹಂತಗಳಿಗೆ ಸಂಬಂಧಿಸಿದೆ ಎಂದು ತಿಳಿಸಲಾಗಿದೆ. ಕೊರೊನಾ ಸಾಂಕ್ರಾಮಿಕವು ಮಾರಣಾಂತಿಕವಾಗಿರುವುದರಿಂದ ಈ ಲಸಿಕೆಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬಹುದು ಎಂದು ತಿಳಿಸಿದೆ.

Vatican Permits To Use COVID-19 Vaccines Prepared Using Aborted Fetal Tissue

ಈಚೆಗೆ ಅಭಿವೃದ್ಧಿಯಾಗುತ್ತಿರುವ ಕೊರೊನಾ ಲಸಿಕೆಗಳ ಅಭಿವೃದ್ಧಿ, ಪರೀಕ್ಷೆಯ ಹಂತಗಳಲ್ಲಿ ಭ್ರೂಣದ ಅಂಶವನ್ನು ಬಳಸುತ್ತಿರುವ ಕುರಿತು ಕ್ಯಾಥೋಲಿಕ್ ಗಳು ಆತಂಕ ವ್ಯಕ್ತಪಡಿಸಿದ್ದರು. ಇದೀಗ "ಕೋವಿಡ್ 19 ಲಸಿಕೆ ನೈತಿಕವಾಗಿ ಸ್ವೀಕಾರಾರ್ಹವಾಗಿದೆ" ಎಂದು ಪೋಪ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಪರೀಕ್ಷೆ ಒಳಗಾದ ಪೋಪ್ ಫ್ರಾನ್ಸಿಸ್ಕೊರೊನಾ ವೈರಸ್ ಪರೀಕ್ಷೆ ಒಳಗಾದ ಪೋಪ್ ಫ್ರಾನ್ಸಿಸ್

1971ರಲ್ಲಿ ನೆದರ್ಲೆಂಡ್ ‌ನಲ್ಲಿ ಗರ್ಭಪಾತಗೊಂಡಿದ್ದ ಭ್ರೂಣವೊಂದರಿಂದ ಪ್ರತ್ಯೇಕಿಸಿದ ಜೀವಕಣಗಳನ್ನು ಬಳಸಿ ಔಷಧಿ ತಯಾರಿಸಿ ಟ್ರಂಪ್ ‌ಗೆ ನೀಡಿ ಅವರ ಜೀವ ಉಳಿದಿದೆ ಎಂದು ವರದಿಯಾಗಿತ್ತು. ಆನಂತರ ಕ್ಯಾಥೋಲಿಕ್ ಗಳು ಈ ಚಿಕಿತ್ಸೆಗೆ ಅನುಮತಿ ನೀಡಬೇಕು ಎಂದು ಕೇಳಿಕೊಂಡಿದ್ದರು. ಆದರೆ ಅದರ ಬಳಕೆ ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಇದೀಗ ಲಸಿಕೆಯನ್ನು ಬಳಕೆ ಮಾಡಬಹುದು ಎಂದು ಯುಎಸ್‌ಸಿಸಿಬಿ ಅನುಮತಿ ನೀಡಿದೆ.

English summary
The Vatican told Roman Catholics that it was morally acceptable to use COVID-19 vaccines even if their production include cell lines from tissues of aborted foetuses,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X