• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತಾರಿನಿಂದ ಮಾತೃಭೂಮಿಗೆ ಮರಳುತ್ತಿರುವ ಕನ್ನಡಿಗರು

By ಸುಬ್ರಮಣ್ಯ ಹೆಬ್ಬಾಗಿಲು, ಕತಾರ್
|

22 ಮೇ 2020 ಕನ್ನಡಿಗರ ಇತಿಹಾಸದಲ್ಲಿ ನೆನಪಿನ್ನಲ್ಲಿಡಬೇಕಾದ ದಿನ, ಪ್ರತ್ಯೇಕವಾಗಿ 185 ಜನ ಪ್ರಯಾಣಿಕರನ್ನು ಹೊತ್ತು ಆರಲಿರುವ ದೋಹಾ - ಬೆಂಗಳೂರು ನೇರ ವಿಮಾನ ಯಾನಕ್ಕೆ ಕಾರಣಕರ್ತರಾದ ಹಾಗೂ ಪ್ರಯಾಣಿಕರೆಲ್ಲರೂ ನೆನಪಿನಲ್ಲಿಡಬೇಕಾದ ಸುದಿನ.

   ದುಬೈನಿಂದ‌ ಬಂದವರ ವಿರುದ್ಧ ಮಂಗಳೂರು ನಿವಾಸಿಗಳ ಆಕ್ರೋಶ | Quarantine for Dubai returns | Mangalore

   ಕೊರೊನಾವೈರಸ್ 19 ಮಹಾಮಾರಿಯಿಂದ ತತ್ತರಿಸಿ ಹೋಗಿ, ನಿರಾಶ್ರಿತ ಮತ್ತು ತುರ್ತು ಪರಿಸ್ಥಿತಿಯಲ್ಲಿರುವ ಕತಾರಿನ ಕನ್ನಡಿಗರಿಗೆ ಅಭಯ ಹಸ್ತ ನೀಡಿದ ಭಾರತ ಹಾಗು ಕರ್ನಾಟಕ ಸರಕಾರವು ಸಕಲ ಪ್ರಯತ್ನವನ್ನು ಮಾಡಿ,''ವಂದೇ ಭಾರತ ನಿಯೋಗ"ದಡಿಯಲ್ಲಿ ಬೆಂಗಳೂರಿಗೆ ಮೊದಲ ವಿಮಾನಯಾನವನ್ನು ಹಾರಲು ವ್ಯವಸ್ಥೆ ಮಾಡಿರುವುದು ಸಂತಸದ ವಿಚಾರ.

   ಕೇರಳ: 24 ಹೊಸ ಕೋವಿಡ್ 19 ಕೇಸ್, 28 ಹಾಟ್ ಸ್ಪಾಟ್

   ಈ ವಿಮಾನದಲ್ಲಿ ಕರ್ನಾಟಕ ಮೂಲದ, ಕತಾರಿನಲ್ಲಿ ನೆಲೆಸಿದ್ದ ಕನ್ನಡಿಗರು, ಅದರಲ್ಲೂ ಗರ್ಭಿಣಿಯರು, ವಯೋವೃದ್ಧರು, ಅನಾರೊಗ್ಯದಿಂದ ಬಳಲುತ್ತಿರುವವರು ಹಾಗೂ ಕೆಲಸ ಕಳೆದುಕೊಂಡು ವಾಸ್ತವ್ಯ ಹೂಡಲಾಗದೆ ಬಳಲುತ್ತಿರುವವರನ್ನು ಮಾತೃಭೂಮಿಗೆ ಹಿಂತಿರುಗಲು ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ.

   ದೋಹಾದಿಂದ ಬೆಂಗಳೂರಿಗೆ ಏರ್ಪಡಿಸಿರುವ ವಿಮಾನಕ್ಕೆ ಕಾರಣಕರ್ತರಾದ ಎಲ್ಲಾ ಮಂತ್ರಿಗಳು, ಸಚಿವರು ಹಾಗು ಸ್ವಯಂ ಸೇವಾಕರ್ತರಿಗೂ ವಂದನೆಗಳು.

   ಕತಾರ್‌ನಿಂದ ಸುಮಾರು 1,300 ಜನರು ಊರಿಗೆ ಬರಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ಕರ್ನಾಟಕ ಕರಾವಳಿಯವರೇ ಹೆಚ್ಚು. ಬೆಂಗಳೂರು, ಮೈಸೂರು, ಮಂಡ್ಯ ಮೊದಲಾದೆಡೆ ಹೋಗುವವರು ಬೆಂಗಳೂರಿನ ಮೂಲಕ ಹೋಗುವವರಾದರೆ, ಅತ್ತ ಕಾಸರಗೋಡು, ಇತ್ತ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಭಟ್ಕಳ, ಬೈಂದೂರಿನವರೆಗೆ ಹೋಗುವವರು ಮಂಗಳೂರನ್ನು ಆಶ್ರಯಿಸಬೇಕಾಗಿದೆ.

   ಈಗ ಬೆಂಗಳೂರಿಗೆ ವಿಮಾನ ಯಾನಕ್ಕೆ ತಾತ್ವಿಕ ಸಮ್ಮತಿಯಾಗಿದ್ದರೂ ಮಂಗಳೂರಿಗೆ ಆಗಿಲ್ಲ ಎನ್ನುವ ಕೊರಗು ಕತಾರ್‌ನಲ್ಲಿರುವ ಕರಾವಳಿ ಭಾಗದವರಿಗೆ ಕತಾರ್‌ ನಲ್ಲಿರುವ ಕನ್ನಡಿಗರನ್ನು ಆದಷ್ಟು ಬೇಗ ಭಾರತಕ್ಕೆ ಕರೆತರಲು ಕೇಂದ್ರ‌ ಸಚಿವ‌ ಡಿ.ವಿ.ಸದಾನಂದ ಗೌಡ, ಕರ್ನಾಟಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಮಂಗಳೂರಿಗೆ‌ ಕತಾರ್ ನಿಂದ ನೇರ ವಿಮಾನ‌ ವ್ಯವಸ್ಥೆ ಹೆಚ್ಚು‌ ಸಂಕಷ್ಟದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜನತೆಗೆ ಅಗತ್ಯವಿದೆ.

   ಹೀಗೆ ಮುಂದುವರೆದು ಮಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂತಿರುಗಬೇಕೆಂದಿರುವ ಕನ್ನಡಿಗರಿಗೆ ವಿಮಾನ ಸೇವೆಯನ್ನು ವ್ಯವಸ್ಥೆ ಮಾಡಲು ಈ ಮೂಲಕ ಬಿನ್ನವಿಸಲಾಗುತ್ತಿದೆ- ಸುಬ್ರಮಣ್ಯ ಹೆಬ್ಬಾಗಿಲು, ಕರ್ನಾಟಕ ಪ್ರತಿನಿಧಿ, ಭಾರತೀಯ‌ ಸಮುದಾಯ ಹಿತೈಷಿ‌ ವೇದಿಕೆ, ಕತಾರ್.

   English summary
   Vande Bharat Mission: Kannadigas returning from Doha to KIAL, Bengaluru. More than 185 passengers traveling back to India said Karnataka representative Subrahmanya Hebbagilu.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X