ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಈ ಲಸಿಕೆಯಿಂದ 73 ಅಡ್ಡಪರಿಣಾಮ ಎಂದ ತಜ್ಞ; ಗಂಟೆಗಳಲ್ಲೇ ಪೋಸ್ಟ್ ಮಾಯ

|
Google Oneindia Kannada News

ಶಾಂಘೈ, ಜನವರಿ 08: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವಿಶ್ವದಾದ್ಯಂತ ಹಲವು ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಲಸಿಕೆಗಳನ್ನು ಹಂತ ಹಂತಗಳಲ್ಲಿ ಪರೀಕ್ಷೆಗೊಳಪಡಿಸಿ, ಜನರಿಗೆ ನೀಡಲು ಸಿದ್ಧತೆ ನಡೆಯುತ್ತಿದೆ. ಹಾಗೆಯೇ ಚೀನಾ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಗ್ರೂಪ್ (ಸಿನೊಫಾರ್ಮ್) ಕೂಡ ಕೊರೊನಾ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸಿದೆ.

ಆದರೆ ಈ ಸಿನೊಫಾರ್ಮ್ ಬಗ್ಗೆ ಚೀನಾ ಲಸಿಕಾ ತಜ್ಞರೊಬ್ಬರು ಎಚ್ಚರಿಕೆ ನೀಡಿದ್ದು, ಸಿನೊಫಾರ್ಮ್ ನ ಲಸಿಕೆ ಅತಿ ಅಸುರಕ್ಷಿತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಆ ಪೋಸ್ಟ್ ಮಾಯವಾಗಿದೆ. ಇದೀಗ ಲಸಿಕೆ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ. ಮುಂದೆ ಓದಿ...

ಚೀನಾದ ಸಿನೋಫಾರ್ಮ್ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಸುರಕ್ಷಿತಚೀನಾದ ಸಿನೋಫಾರ್ಮ್ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಸುರಕ್ಷಿತ

"ವಿಶ್ವದ ಅತ್ಯಂತ ಅಸುರಕ್ಷಿತ ಲಸಿಕೆ"

ಶಾಂಘೈನ ಲಸಿಕಾ ತಜ್ಞ ಡಾ. ಟಾವೊ ಲಿನಾ, ಸಿನೊಫಾರ್ಮ್ ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಸಿನೊಫಾರ್ಮ್ "ವಿಶ್ವದ ಅತ್ಯಂತ ಅಸುರಕ್ಷಿತ ಲಸಿಕೆ" ಎಂದು ಬರೆದಿದ್ದು, ಈ ಲಸಿಕೆ ಪಡೆದ ನಂತರ 73 ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

<br />ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್
ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್

 ವೈರಲ್ ಆಗುತ್ತಿದ್ದಂತೆ ಮಾಯವಾದ ಪೋಸ್ಟ್‌

ವೈರಲ್ ಆಗುತ್ತಿದ್ದಂತೆ ಮಾಯವಾದ ಪೋಸ್ಟ್‌

ಸಿನೊಫಾರ್ಮ್ ಕುರಿತು ಹೇಳಿಕೆ ವೈರಲ್ ಆಗುತ್ತಿದ್ದಂತೆ, ಟಾವೊ ಲಿನಾ ಅದನ್ನು ಡಿಲೀಟ್ ಮಾಡಿದ್ದಾರೆ. ತನ್ನ ನಿರ್ದಾಕ್ಷಿಣ್ಯ ಕಾಮೆಂಟ್ ಗಳಿಗೆ ರಾಷ್ಟ್ರ ಹಾಗೂ ಲಸಿಕೆಗೆ ಒಪ್ಪಂದ ಮಾಡಿಕೊಂಡಿರುವ ಬೇರೆ ದೇಶಗಳಿಗೆ ಕ್ಷಮೆ ಯಾಚಿಸಿದ್ದಾರೆ.

 ಡಿಲೀಟ್ ಆದ ಪೋಸ್ಟ್ ನಲ್ಲಿದ್ದದ್ದು...

ಡಿಲೀಟ್ ಆದ ಪೋಸ್ಟ್ ನಲ್ಲಿದ್ದದ್ದು...

ಸಿನೊಫಾರ್ಮ್ ಲಸಿಕೆ ಪಡೆದ ನಂತರ ಲಸಿಕೆ ನೀಡಿದ ಜಾಗದ ಸುತ್ತ ನೋವು ಕಾಣಿಸಿಕೊಳ್ಳುತ್ತದೆ. ತಲೆ ನೋವು, ರಕ್ತದೊತ್ತಡ, ದೃಷ್ಟಿ ಹಾಗೂ ರುಚಿ ಕಳೆದುಕೊಳ್ಳುವಿಕೆ, ಮೂತ್ರನಾಳದಲ್ಲಿ ತೊಂದರೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಲಸಿಕೆ ಬಗ್ಗೆ ಬರೆದಿದ್ದರು. ಒಟ್ಟು 73 ಅಡ್ಡಪರಿಣಾಮಗಳು ಲಸಿಕೆಯಿಂದ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈಗ ಆ ಪೋಸ್ಟ್ ಡಿಲೀಟ್ ಆಗಿದೆ.

 ಸಿನೊಫಾರ್ಮ್ 79% ಪರಿಣಾಮಕಾರಿ

ಸಿನೊಫಾರ್ಮ್ 79% ಪರಿಣಾಮಕಾರಿ

ಈ ಸಂಗತಿ ನಡೆದ ನಂತರ, ಟಾವೊ ಲಿನಾ, ಚೀನಾದ ಈ ಲಸಿಕೆ ಸುರಕ್ಷಿತ ಎಂದು ಸ್ಪಷ್ಟಪಡಿಸಿದ್ದಾರೆ. ಟಾವೊ ಲಿನಾ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಚೀನಾದ ಮಾಧ್ಯಮ ಹೇಳಿಕೊಂಡಿದೆ. ಜೊತೆಗೆ, ಸಿನೊಫಾರ್ಮ್ ಸುರಕ್ಷಿತವಲ್ಲ, ಪರಿಣಾಮಕಾರಿಯಲ್ಲ ಎಂದು ನಾನು ಎಂದಿಗೂ ಹೇಳಿಲ್ಲ. ಬದಲಾಗಿ ಲಸಿಕೆ ಬಗ್ಗೆ ಜನರಲ್ಲಿರುವ ಕಳವಳ ನೀಗಲು, ಚೀನಾದಲ್ಲಿ ಉತ್ಪಾದಿಸುವ ಲಸಿಕೆಗಳು ಸುರಕ್ಷಿತವೆಂದು ನಾನು ಒತ್ತಿ ಹೇಳಿದ್ದೇನೆ ಎಂದು ಟಾವೊ ಲಿನಾ ಹೇಳಿಕೊಂಡಿದ್ದಾರೆ.
ಚೀನಾ ಸರ್ಕಾರ ತುರ್ತು ಬಳಕೆಗೆ ಸಿನೊಫಾರ್ಮ್ ಲಸಿಕೆಗೆ ಅನುಮತಿ ನೀಡಿದ್ದು, ಲಸಿಕೆ 79% ಪರಿಣಾಮಕಾರಿ ಎನ್ನಲಾಗಿತ್ತು.

English summary
Dr Tao Lina, a vaccine expert from Shanghai, took to his social media account to sound an alarm about the Sinopharm vaccine, has called vaccine the ‘most unsafe in the world’ and claimed it has 73 side effects,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X