ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

USIBC India Ideas Summit 2020 :ಅಮೆರಿಕ ಹೂಡಿಕೆದಾರರನ್ನು ಭಾರತಕ್ಕೆ ಆಹ್ವಾನಿಸಿದ ಮೋದಿ

|
Google Oneindia Kannada News

ನವದೆಹಲಿ, ಜುಲೈ 22: ಭಾರತ ಅಮೆರಿಕ ಉದ್ಯಮ ಮಂಡಳಿಯ 45ನೇ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಲಿದ್ದಾರೆ.

ಈ ಮಂಡಳಿ ಆರಂಭವಾಗಿ 45 ವರ್ಷ ದಾಟಿದ್ದು, ಇಂದಿನ ಶೃಂಗ ಸಭೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಕೊವಿಡ್ 19, ಬದಲಾದ ಆರ್ಥಿಕ ಪರಿಸ್ಥಿತಿ, ಹಾಗೂ ಭಾರತ ಚೀನಾ ನಡುವಿನ ಸಂಘರ್ಷದ ಬೆನ್ನಲ್ಲೇ ಈ ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಹತ್ವ ಬಂದಿದೆ.

USIBC India Ideas Summit- PM Narendra Modi Keynote Address Live Updates And Highlights In Kannada

ವಾಣಿಜ್ಯ ಸಮರ ಹಾಗೂ ಕೊವಿಡ್ 19ನಿಂದ ಜಾಗತಿಕ ಪೂರೈಕೆ ವ್ಯವಸ್ಥೆ ಸಂಪೂರ್ಣ ಬದಲಾಗಿದೆ ಇದನ್ನು ಅಮೆರಿಕ ಹಾಗೂ ಭಾರತ ಹೇಗೆ ಸಂಬಾಳಿಸಬಹುದು ಎಂಬುದರ ಕುರಿತು ಇಂದು ಚರ್ಚೆಯಾಗುವ ಸಾಧ್ಯತೆ ಇದೆ.

ಇದರ ಜೊತೆಗೆ ಎಚ್‌1ಬಿ ವೀಸಾ ಕುರಿತು ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಶೃಂಗಸಭೆ ಹಾಗೂ ಮೋದಿ ಭಾಷಣದ ಕ್ಷಣ ಕ್ಷಣದ ಮಾಹಿತಿ ಒನ್ ಇಂಡಿಯಾ ಕನ್ನಡದಲ್ಲಿ ನಾವು ನೀಡಲಿದ್ದೇವೆ.

Newest FirstOldest First
9:19 PM, 22 Jul

ಭಾರತ ಮತ್ತು ಅಮೆರಿಕ ಸಂಬಂಧ ಇನ್ನಷ್ಟು ವೃದ್ಧಿಸಲಿ, ಉಭಯ ದೇಶಗಳು ಇನ್ನಷ್ಟು ಸ್ನೇಹ ವೃದ್ಧಿಗೆ ಕೆಲಸ ಮಾಡಲಿವೆ ಎಂಬ ವಿಶ್ವಾಸವಿದೆ.-ಮೋದಿ
9:18 PM, 22 Jul

ಭಾರತ ಹಾಗೂ ಅಮೆರಿಕವು ವಿಶ್ವದ ಅತಿ ಪ್ರಬಲ ಪ್ರಜಾತಂತ್ರ ರಾಷ್ಟ್ರವಾಗಿದ್ದು ಹೋಲಿಕೆ ಇದೆ. ಜಗತ್ತಿನ ಸಬಲೀಕರಣಕ್ಕಾಗಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಿದೆ-ಮೋದಿ
9:16 PM, 22 Jul

ಕೊವಿಡ್ 19 ಸಂದರ್ಭದಲ್ಲಿ ಭಾರತವು 20 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ-ಮೋದಿ
9:15 PM, 22 Jul

ವಿಮಾ ಕ್ಷೇತ್ರದಲ್ಲಿ ಭಾರತವು ವಿದೇಶಿ ಬಂಡವಾಳ ಹೂಡಿಕೆ ಮಿತಿಯನ್ನು ಶೇ.49ರಿಂದ ತೆಗೆದು ಶೇ.100ರಷ್ಟು ಮಾಡಲು ಅವಕಾಶ ಮಾಡಿಕೊಟ್ಟಿದೆ.
9:09 PM, 22 Jul

ಡಿಜಿಟಲ್ ಕ್ಷೇತ್ರದಲ್ಲದೆ ಆರೋಗ್ಯ ಕ್ಷೇತ್ರದಲ್ಲೂ ಭಾರತವು ಹೂಡಿಕೆಗೆ ತೆರೆದುಕೊಂಡಿದೆ. ಭಾರತದ ಕಂಪನಿಗಳು ಕೂಡ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ-ಮೋದಿ
9:08 PM, 22 Jul

ನಗರ ಭಾರತದ ಜೊತೆಗೆ ಗ್ರಾಮೀಣ ಭಾರತವು ಮುಂದುವರೆಯುತ್ತಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಬಳಕೆದಾರರು ಹೆಚ್ಚಾಗಿದ್ದಾರೆ.ಇದು ಉದ್ದಿಮೆಗಳಿಗೆ ದೊಡ್ಡ ಅವಕಾಶವಾಗಿದೆ-ಮೋದಿ
9:07 PM, 22 Jul

ಕಳೆದ 6 ವರ್ಷಗಳಿಂದ ಭಾರತದಲ್ಲಿ ಆರ್ಥಿಕ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಮಾಡಲಾಗಿದೆ. ಡಿಜಿಟಲೀಕರಣ, ಸ್ಥಿರ ಆಡಳಿತ ನೀತಿಗಳು ಉದ್ದಿಮೆಗಳ ಪರವಾಗಿದೆ-ಮೋದಿ
Advertisement
9:06 PM, 22 Jul

ಹೀಗಾಗಿ ಭಾರತದ ಮೇಲೆ ಎಲ್ಲರೂ ಉತ್ಸುಕತೆಯನ್ನು ತೋರಿಸುತ್ತಿದ್ದಾರೆ. ಭಾರತದ ಆರ್ಥಿಕತೆ ಇಲ್ಲಿಯ ಉದ್ಯಮಸ್ನೇಹಿ ವಾತಾವರಣ ಎಲ್ಲವೂ ಹೂಡಿಕೆಗೆ ಪೂರಕವಾಗಿದೆ
9:05 PM, 22 Jul

ಜಾಗತಿಕ ಮಹಾಮಾರಿ ಕೊರೊನಾವು ನಮ್ಮ ಇತಿಮಿತಿಯನ್ನು ತಿಳಿಸಿಕೊಟ್ಟಿದೆ. ಸ್ಥಳೀಯ ಉತ್ಪಾದನೆಯ ಮಹತ್ವವನ್ನು ಸಾರಿದೆ. ಇದಕ್ಕಾಗಿ ನ್ಮಮ ಸರ್ಕಾರವು ಆತ್ಮ ನಿರ್ಭರ ಭಾರತ ಯೋಜನೆಗೆ ಚಾಲನೆ ನೀಡಿದೆ- ಮೋದಿ
9:03 PM, 22 Jul

ಭಾರತ ಹಾಗೂ ಅಮೆರಿಕದ ಅಭಿವೃದ್ಧಿಗೆ ಯುಎಸ್‌ಐಬಿಸಿ ಮಹತ್ವದ ಪಾತ್ರವಹಿಸುತ್ತಿದೆ.
6:57 PM, 22 Jul

ಈ ಕುರಿತು ಹೇಳಿಕೆ ನೀಡಿರುವ ಯುಎಸ್ಐಬಿಸಿ ಗ್ಲೋಬಲ್ ಬೋರ್ಡ್ ಅಧ್ಯಕ್ಷ ಮತ್ತು ನುವೀನ್ ಕಾರ್ಯನಿರ್ವಾಹಕ ಅಧ್ಯಕ್ಷ ವಿಜಯ್ ಅಡ್ವಾಣಿ, ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ನ 45 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಮಾತನ್ನು ಆಲಿಸಲು ನಾವು ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
6:25 PM, 22 Jul

ಇಂದು ಸಂಜೆ 9 ಗಂಟೆಗೆ ಶೃಂಗ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
Advertisement
5:07 PM, 22 Jul

ಜುಲೈ 17 ರಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ವಿಡಿಯೋ ಭಾಷಣ ಮಾಡಿದ್ದರು.
5:07 PM, 22 Jul

2 ದಿನಗಳ ವರ್ಚುಯಲ್ ಅಥವಾ ವಾಸ್ತವಿಕ ಸಮಾವೇಶದಲ್ಲಿ ಉಭಯ ರಾಷ್ಟ್ರಗಳ ಪ್ರಮುಖ ನೀತಿ ನಿರೂಪಕರು ಪಾಲ್ಗೊಳ್ಳಲಿದ್ದಾರೆ. ಉದ್ಯಮ ಮತ್ತು ಸಾಮಾಜಿಕ ರಂಗದ ಉನ್ನತ ನಾಯಕರು, ರಾಷ್ಟ್ರೀಯ ಮಟ್ಟದ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
5:07 PM, 22 Jul

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ವರ್ಜೀನಿಯಾ ಸೆನೆಟರ್ ಮಾರ್ಕ್ ವಾರ್ನರ್, ವಿಶ್ವಸಂಸ್ಥೆಯ ಅಮೆರಿಕ ಮಾಜಿ ಕಾರ್ಯದರ್ಶಿ ನಿಕ್ಕಿ ಹ್ಯಾಲೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
5:06 PM, 22 Jul

ಕೋವಿಡ್-19 ನಂತರದ ಜಗತ್ತನ್ನು ಕಟ್ಟಲು ಅಮೆರಿಕ - ಭಾರತದ ಪಾಲುದಾರಿಕೆ ಹೇಗೆ ನೆರವಾಗಲಿದೆ ಎಂಬ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ದೃಷ್ಟಿಕೋನ ವ್ಯಕ್ತಪಡಿಸಲಿದ್ದಾರೆ. ಭಾರತ - ಅಮೆರಿಕ ಸಹಕಾರ ಮತ್ತು ಉಭಯ ರಾಷ್ಟ್ರಗಳ ಭವಿಷ್ಯದ ಸಂಬಂಧ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.

English summary
USIBC India Ideas Summit 2020- PM Narendra Modi keynote address live updates & highlights in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X