ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುವ್ಯ ಇರಾನ್ ನಲ್ಲಿ ಭೂಕಂಪ, 5 ಸಾವು, 120 ಮಂದಿಗೆ ತೀವ್ರ ಗಾಯ

|
Google Oneindia Kannada News

ತೆಹರಾನ್, ನವೆಂಬರ್ 08: ಇರಾನ್ನಿನ ವಾಯುವ್ಯ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೂಕಂಪದಲ್ಲಿ ಐದು ಮಂದಿ ಮೃತಪಟ್ಟಿದ್ದು, 120 ಮಂದಿಗೆ ತೀವ್ರ ಗಾಯಗಳಾಗಿರುವ ಘಟನೆ ನಡೆದಿದೆ. ಯುನೈಟೆಡ್ ಸ್ಟೇಟ್ ಭೂಗರ್ಭ ಸಮೀಕ್ಷಾ ಸಂಸ್ಥೆ ವರದಿಯಂತೆ ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ಕಂಡು ಬಂದಿದೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ವಾಯುವ್ಯ ಇರಾನ್ನಿನ ಪೂರ್ವ ಅಜರ್ ಬೈಜಾನ್ ಪ್ರಾಂತ್ಯಕ್ಕೆ ಸಮೀಪದ ಹಸ್ತ್ರುದ್ ಪಟ್ಟಣದಿಂದ 60 ಕಿ.ಮೀ ದೂರದಲ್ಲಿ 23.00 GMT ಅವಧಿಯಲ್ಲಿ ಭೂಮಿ ಕಂಪಿಸಿದೆ. ಸುಮಾರು 8 ಕಿ.ಮೀ ಆಳಕ್ಕೆ ಕಂಪನ ಕಂಡು ಬಂದಿದೆ ಹಾಗೂ ಭೂಕಂಪದ ನಂತರ 5 ಬಾರಿ ಕಂಪನದ ನಂತರದ ಅನುಭವವಾಗಿದೆ ಎಂದು ಇರಾನ್ನಿನ ಭೂಕಂಪ ಮಾಪನ ಕೇಂದ್ರ ಹೇಳಿದೆ.

USGS report 5.9 tremor hits north-west Iran earthquake kills many

ಭೂಕಂಪದಿಂದ ಸಾವು ನೋವು ಸಂಭವಿಸಿರುವುದನ್ನು ಪ್ರಾಂತ್ಯದ ರಾಜ್ಯಪಾಲ ಮೊಹಮ್ಮದ್ ರೆಜಾ ಖಚಿತಪಡಿಸಿದ್ದು, ಸುಮಾರು 30 ಬಸ್ ಗಳು ಸಂಪೂರ್ಣ ಧ್ವಂಸಗೊಂಡಿವೆ ಎಂದಿದ್ದಾರೆ. ಸುಮಾರು 41 ಗ್ರಾಮಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದರು.

1990ರಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಉತ್ತರ ಇರಾನ್ನಿನಲ್ಲಿ 40,000 ಮಂದಿ ಮೃತಪಟ್ಟು, 3,00,000 ಮಂದಿ ಗಾಯಗೊಂಡಿದ್ದರು. ಲಕ್ಷಾಂತರ ಮಂದಿ ಮನೆ ಕಳೆದುಕೊಂಡಿದ್ದರು. 2005ರಲ್ಲಿ ಭೂಕಂಪಕ್ಕೆ 600 ಮಂದಿ ಬಲಿಯಾಗಿದ್ದರೆ, 2012ರಲ್ಲಿ 300 ಮಂದಿ ಮೃತಪಟ್ಟಿದ್ದರು.

English summary
A 5.9-magnitude earthquake struck north-western Iran early on Friday, the United States Geological Survey has said, killing five people and injuring 120.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X