• search

ವಿಶ್ವಕಪ್ ಫುಟ್ಬಾಲ್ ಮೇಲೆ ಉಗ್ರರ ದಾಳಿ ಸಾಧ್ಯತೆ: ಅಮೆರಿಕ ಎಚ್ಚರಿಕೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ವಾಷಿಂಗ್ಟನ್, ಜೂನ್ 16: ರಷ್ಯಾದಲ್ಲಿ ಆರಂಭವಾಗಿರುವ ವಿಶ್ವಕಪ್‌ ಫುಟ್ಬಾಲ್‌ನ ಜ್ವರ ಫುಟ್ಬಾಲ್ ಜನಪ್ರಿಯತೆ ಇರುವ ಎಲ್ಲ ದೇಶಗಳಿಗೂ ವ್ಯಾಪಿಸಿದೆ.

  ದೇಶ ವಿದೇಶಗಳಿಂದ ಸಾವುರಾರು ಜನರು ರಷ್ಯಾಕ್ಕೆ ದಾಂಗುಡಿ ಇಡುತ್ತಿದ್ದಾರೆ. ಆದರೆ, ಅಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ. ಹೊರಡುವ ಮುನ್ನ ಯೋಚನೆ ಮಾಡಿ ಎಂದು ಅಮೆರಿಕ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

  ರೊನಾಲ್ಡೋ ಆಕರ್ಷಕ ಆಟ: 3-3ರಿಂದ ಪೋರ್ಚುಗಲ್-ಸ್ಪೇನ್ ಪಂದ್ಯ ಡ್ರಾ

  ರಷ್ಯಾದಲ್ಲಿ ಫುಟ್ಬಾಲ್ ಪಂದ್ಯ ನಡೆಯುವ ಸ್ಥಳಗಳನ್ನು ಉಗ್ರರು ಗುರಿಯನ್ನಾಗಿಸಿಕೊಳ್ಳುವ ಅಪಾಯವಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಹೇಳಿದೆ. ಆದರೆ, ಯಾವುದೇ ನಿರ್ದಿಷ್ಟ ಬೆದರಿಕೆ ಕುರಿತು ಅದು ತಿಳಿಸಿಲ್ಲ.

  US warns terror attack at worldcup in russia

  ವಿಶ್ವಕಪ್‌ನಂತಹ ಬೃಹತ್ ಮಟ್ಟದ ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಭಯೋತ್ಪಾದನಾ ದಾಳಿಯ ಪ್ರಮುಖ ಗುರಿಗಳಾಗುತ್ತವೆ ಎಂದು ಅಮೆರಿಕ ಹೇಳಿದೆ.

  ವಿಶ್ವಕಪ್‌ಗಾಗಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದರೂ, ಉಗ್ರರು ಕ್ರೀಡಾಂಗಣ, ಫ್ಯಾನ್ ಫೆಸ್ಟ್ ವೀಕ್ಷಕ ಪ್ರದೇಶಗಳು, ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಗಳನ್ನು ಗುರಿಯನ್ನಾಗಿಸಿ ದಾಳಿ ನಡೆಸುವ ಅಪಾಯವಿರುತ್ತದೆ ಎಂದು ಅದು ತಿಳಿಸಿದೆ.

  ಯಡವಟ್ಟಿನಾಟಕೆ ಬೆಲೆತೆತ್ತ ಮೊರಾಕೋ: ಇರಾನ್ ಗೆ 1-0ರ ಜಯ

  ರಷ್ಯಾಕ್ಕೆ ತೆರಳುವವರು ಭಯೋತ್ಪಾದನೆ ದಾಳಿಯ ಭಯ ಇರುವುದರಿಂದ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು. ಏಕೆಂದರೆ ಅಲ್ಲಿನ ಕಾನೂನು ಜಾರಿ ಹಾಗೂ ಇತರೆ ಅಧಿಕಾರಿಗಳಿಂದ ಅನಗತ್ಯ ಕಿರುಕುಳ ಅನುಭವಿಸಬೇಕಾಗುತ್ತದೆ ಎಂದು ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  US state department has warned Americans to reconsider their tour ti Russia as terrorists may target world cup venues in that country.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more