India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಯುಎಸ್

|
Google Oneindia Kannada News

ವಾಶಿಂಗ್ಟನ್, ಜೂನ್ 7: ಉತ್ತರ ಕೊರಿಯಾ ಪರಮಾಣು ಪರೀಕ್ಷೆಯನ್ನು ನಡೆಸಿದರೆ ಬಲವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಡೆಪ್ಯೂಟಿ ಸೆಕ್ರೆಟರಿ ಆಫ್ ಸ್ಟೇಟ್ ವೆಂಡಿ ಶೆರ್ಮನ್ ಎಚ್ಚರಿಕೆ ನೀಡಿದ್ದಾರೆ.

"ಯಾವುದೇ ಪರಮಾಣು ಪರೀಕ್ಷೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ. ಇಂತಹ ಪರೀಕ್ಷೆಗೆ ತ್ವರಿತ ಮತ್ತು ಬಲವಾದ ಪ್ರತಿಕ್ರಿಯೆ ಇರುತ್ತದೆ," ಎಂದು ಶೆರ್ಮನ್ ತಿಳಿಸಿದ್ದಾರೆ. ಸಿಯೋಲ್‌ನಲ್ಲಿ ತಮ್ಮ ದಕ್ಷಿಣ ಕೊರಿಯಾದ ಸಹವರ್ತಿ ಚೋ ಹ್ಯುನ್-ಡಾಂಗ್ ಅವರೊಂದಿಗೆ ಮಾತುಕತೆ ನಂತರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇಡೀ ಪ್ರಪಂಚವು ಬಲವಾದ ಮತ್ತು ಸ್ಪಷ್ಟವಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಅದಕ್ಕೆ ನಾವು ಸಿದ್ಧರಾಗಿದ್ದೇವೆ," ಈ ವರ್ಷ ಅಭೂತಪೂರ್ವ ಸಂಖ್ಯೆಯ ಕ್ಷಿಪಣಿ ಉಡಾವಣೆಗಳನ್ನು ನಡೆಸಿರುವ ಉತ್ತರ ಕೊರಿಯಾ ಶೀಘ್ರದಲ್ಲೇ 2017 ರಿಂದ ಮೊದಲ ಬಾರಿಗೆ ಪರಮಾಣು ಅಸ್ತ್ರವನ್ನು ಪರೀಕ್ಷಿಸಲಿದೆ ಎಂಬ ಆತಂಕ ಹೆಚ್ಚುತ್ತಿದೆ.

ಉತ್ತರ ಕೊರಿಯಾ ಅಣ್ವಸ್ತ್ರ ಧಮ್ಕಿ ನಡುವೆ ಜಪಾನ್‌ಗೆ ಬಂದಿಳಿದ ಬೈಡನ್ಉತ್ತರ ಕೊರಿಯಾ ಅಣ್ವಸ್ತ್ರ ಧಮ್ಕಿ ನಡುವೆ ಜಪಾನ್‌ಗೆ ಬಂದಿಳಿದ ಬೈಡನ್

ಒಂದು ದಿಕ್ಕಿನಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದೆ. ಜಾಗತಿಕ ಮಟ್ಟದಲ್ಲಿ ಮೂರನೇ ಮಹಾಯುದ್ದದ ಕುರಿತು ಚರ್ಚೆಗಳು ನಡೆಯುತ್ತಿರುವುದರ ಮಧ್ಯೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ದಾಳಿಗಳು ಮತ್ತಷ್ಟು ಭೀತಿಯನ್ನು ಹುಟ್ಟು ಹಾಕುತ್ತಿವೆ. ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ಪರಮಾಣು ಪರೀಕ್ಷೆಗಳು ಮತ್ತು ದಕ್ಷಿಯ ಕೊರಿಯಾದಲ್ಲೂ ನಡೆಯುತ್ತಿರುವ ಪರಮಾಣು ಪರೀಕ್ಷೆಗಳು ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪ್ರತಿಕ್ರಿಯೆ ಹೇಗಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ದಕ್ಷಿಣ ಕೊರಿಯಾದ ಪೂರ್ವ ಕರಾವಳಿಯಲ್ಲಿ ಕ್ಷಿಪಣಿ ಪರೀಕ್ಷೆ

ದಕ್ಷಿಣ ಕೊರಿಯಾದ ಪೂರ್ವ ಕರಾವಳಿಯಲ್ಲಿ ಕ್ಷಿಪಣಿ ಪರೀಕ್ಷೆ

ಸೋಮವಾರ ಪ್ಯೊಂಗ್ಯಾಂಗ್ ಅಲ್ಪ-ಪ್ರಮಾಣದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆದ ಮರುದಿನವೇ ದಕ್ಷಿಣ ಕೊರಿಯಾ ಮತ್ತು ಯುಎಸ್ ಪಡೆಗಳು ತಿರುಗಿ ಬಿದ್ದಿವೆ. ದಕ್ಷಿಣ ಕೊರಿಯಾದ ಪೂರ್ವ ಕರಾವಳಿಯ ಮೇಲ್ಮೈ ಪ್ರದೇಶದಲ್ಲಿ ಒಟ್ಟು ಎಂಟು ಕ್ಷಿಪಣಿಗಳನ್ನು ಹಾರಿಸಲಾಗಿದೆ. ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಉತ್ತರ ಕೊರಿಯಾದ ಯೋಂಗ್‌ಬಿಯಾನ್‌ನಲ್ಲಿರುವ ತನ್ನ ಮುಖ್ಯ ಪರಮಾಣು ಕೇಂದ್ರದಲ್ಲಿ ಪ್ರಮುಖ ಸೌಲಭ್ಯಗಳನ್ನು ವಿಸ್ತರಿಸುವ ಕ್ರಮವನ್ನು ಮುಂದುವರಿಸಿದೆ ಎಂದು ಹೇಳಿದೆ.

ಲೈಟ್ ವಾಟರ್ ರಿಯಾಕ್ಟರ್ ಬಳಿ ಕಟ್ಟಡ ನಿರ್ಮಾಣ

ಲೈಟ್ ವಾಟರ್ ರಿಯಾಕ್ಟರ್ ಬಳಿ ಕಟ್ಟಡ ನಿರ್ಮಾಣ

"ಅನೆಕ್ಸ್‌ನಲ್ಲಿ ಕೇಂದ್ರಾಪಗಾಮಿ ಪುಷ್ಟೀಕರಣ ಸೌಲಭ್ಯದ ಮೇಲ್ಛಾವಣಿಯನ್ನು ಸ್ಥಾಪಿಸಲಾಗಿದೆ. ಲೈಟ್ ವಾಟರ್ ರಿಯಾಕ್ಟರ್ (ಎಲ್‌ಡಬ್ಲ್ಯೂಆರ್) ಬಳಿ ಏಪ್ರಿಲ್ 2021ರಿಂದ ನಿರ್ಮಾಣ ಹಂತದಲ್ಲಿರುವ ಹೊಸ ಕಟ್ಟಡವು ಪೂರ್ಣಗೊಂಡಿದೆ. ಇದರ ಜೊತೆಗೆ ಪಕ್ಕದ ಎರಡು ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಶುರು ಮಾಡಲಾಗಿದೆ ಎಂಬುದನ್ನು ನಾವು ಗಮನಿಸಿದ್ದೇವೆ, "ಎಂದು ಐಎಇಎ ಮುಖ್ಯಸ್ಥ ರಾಫೆಲ್ ಗ್ರಾಸ್ಸಿ ಮಂಡಳಿಗೆ ನೀಡಿದ ತ್ರೈಮಾಸಿಕ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭದ್ರತಾ ಮಂಡಳಿ ನಿಯಮ ಉಲ್ಲಂಘಿಸಿರುವ ಕ್ರಮ

ಭದ್ರತಾ ಮಂಡಳಿ ನಿಯಮ ಉಲ್ಲಂಘಿಸಿರುವ ಕ್ರಮ

ಉತ್ತರ ಕೊರಿಯಾದ ಪರಮಾಣು ಪರೀಕ್ಷಾ ತಾಣವಾದ ಪುಂಗ್ಗ್ಯೆರಿಯಲ್ಲಿ, ಅದಿಟ್ಸ್ ಎಂದು ಕರೆಯಲ್ಪಡುವ ಮಾರ್ಗಗಳಲ್ಲಿ ಒಂದನ್ನು ಪುನಃ ತೆರೆಯಲಾಗಿದೆ ಎಂಬ ಸೂಚನೆಗಳಿವೆ. ಬಹುಶಃ ಪರಮಾಣು ಪರೀಕ್ಷೆಯ ತಯಾರಿಯಲ್ಲಿದೆ ಎಂದು ಅವರು ಗಮನಿಸಿದರು. ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ನಡುವಿನ 2018ರ ಶೃಂಗಸಭೆಯ ನಂತರ ಈ ಪ್ರದೇಶವನ್ನು ಕಿತ್ತುಹಾಕಲಾಯಿತು. "ಪರಮಾಣು ಪರೀಕ್ಷೆಯ ನಡವಳಿಕೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸುತ್ತದೆ ಅಲ್ಲದೇ ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕ್ಕೆ ದೂಡುತ್ತದೆ," ಎಂದು ಐಎಇಎ ಮುಖ್ಯಸ್ಥ ರಾಫೆಲ್ ಗ್ರಾಸ್ಸಿ ಹೇಳಿದ್ದಾರೆ.

ಯುಎಸ್ ಮತ್ತು ಉತ್ತರ ಕೊರಿಯಾ ನಡುವಿನ ಚರ್ಚೆ ಸ್ಥಗಿತ

ಯುಎಸ್ ಮತ್ತು ಉತ್ತರ ಕೊರಿಯಾ ನಡುವಿನ ಚರ್ಚೆ ಸ್ಥಗಿತ

ಕಳೆದ 2019ರಲ್ಲಿ ವಿಯೆಟ್ನಾಂನಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಉನ್ನತ ಮಟ್ಟದ ಶೃಂಗಸಭೆಯ ಪತನದ ನಂತರ ಅಣ್ವಸ್ತ್ರೀಕರಣದ ಚರ್ಚೆಗಳು ಸ್ಥಗಿತಗೊಂಡಿವೆ.

"ಯುನೈಟೆಡ್ ಸ್ಟೇಟ್ಸ್ DPRK ಕಡೆಗೆ ಯಾವುದೇ ಪ್ರತಿಕೂಲ ಉದ್ದೇಶವನ್ನು ಹೊಂದಿಲ್ಲ. ನಾವು ಪಯೋಂಗ್ಯಾಂಗ್ ತನ್ನ ಅಸ್ಥಿರಗೊಳಿಸುವ ಮತ್ತು ಪ್ರಚೋದನಕಾರಿ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಆರಿಸಿಕೊಳ್ಳುವಂತೆ ಒತ್ತಾಯಿಸುವುದನ್ನು ಮುಂದುವರಿಸುತ್ತೇವೆ," ಎಂದು ಉತ್ತರ ಕೊರಿಯಾದ ಬಗ್ಗೆ ಔಪಚಾರಿಕ ಹೆಸರಿನಿಂದ ಉಲ್ಲೇಖಿಸಲಾಗಿದೆ.

English summary
United States warns of ‘forceful’ response if North Korea tests nuclear weapon. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X