ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧದ ಹೋರಾಟದಲ್ಲಿ ಬೆಂಬಲ ನೀಡುವಂತೆ ವಿಯೆಟ್ನಾಂಗೆ ಅಮೆರಿಕ ಮನವಿ

|
Google Oneindia Kannada News

ಚೀನಾ ವಿರುದ್ಧದ ಹೋರಾಟದಲ್ಲಿ ಅಮೆರಿಕಕ್ಕೆ ಬಂಬಲ ನೀಡುವಂತೆ ಕಮಲಾ ಹ್ಯಾರಿಸ್ ವಿಯೆಟ್ನಾಂಗೆ ಮನವಿ ಮಾಡಿದ್ದಾರೆ. ಅವರು ವಿಯೆಟ್ನಾಂ ಪ್ರಧಾನಿ ಫಾಂ ಮಿನ್ ಚಿನ್ ಅವರೊಂದಿಗೆ ಮಾತುಕತೆ ನಡೆಸುವ ಸಂದರ್ಭ ಈ ಕರೆ ನೀಡಿದ್ದಾರೆ.

ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ವಿಯೆಟ್ನಾಂ ಸೇರಿದಂತೆ ಹಲವು ದ್ವೀಪರಾಷ್ಟ್ರಗಳನ್ನು ಕೆಣಕುವ ಪ್ರಯತ್ನವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಆದರಲ್ಲೂ ಕೊರೊನಾ ಸಾಂಕ್ರಾಮಿಕ ಶುರುವಾದ ನಂತರ ತನ್ನ ನೆರೆರಾಷ್ಟ್ರಗಳ ಗಡಿಗಳಲ್ಲಿ ಒಂದಿಲ್ಲೊಂದು ಕ್ಯಾತೆಯನ್ನು ಚೀನಾ ತೆಗೆಯುತ್ತಿದೆ.

ಭಾರತದ ಗಡಿ ಒತ್ತುವರಿ ಘಟನೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದು. ಹೀಗಾಗಿ ಚೀನಾದ ವಿರೋಧಿ ಪಾಳೆಯದಲ್ಲಿರುವ ಅಮೆರಿಕ ಚೀನಾ ವಿರೋಧಿ ರಾಷ್ಟ್ರಗಳನ್ನು ಎತ್ತಿಕಟ್ಟುವ ಪ್ರಯತ್ನದಲ್ಲಿ ತೊಡಗಿದೆ. ಅದರ ಅಂಗವಾಗಿ ಒಂದೊಮ್ಮೆ ವಿಯೆಟ್ನಾಂನಲ್ಲಿ ರಣ ಭೀಕರವಾಗಿ ಕಾದಾಡಿದ್ದ ಅಮೆರಿಕ ಈಗ ಚೀನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ವಿಯೆಟ್ನಾಂಅನ್ನು ಕೋರಿದೆ.

US VP Kamala Harris Makes Historic Visit To Vietnam

ಇದೇ ವೇಳೆ ಅಮೆರಿಕ ವಿಯೆಟ್ನಾಂಗೆ ಹೆಚ್ಚುವರಿ 10 ಲಕ್ಷ ಕೊರೊನಾ ಲಸಿಕೆಯನ್ನು ದೇಣಿಗೆಯಾಗಿ ನೀಡುವುದಾಗಿ ಕಮಲಾ ಹ್ಯಾರಿಸ್ ಘೋಷಿಸಿದ್ದಾರೆ. ಲಸಿಕೆ ಮುಂದಿನ 24 ಗಂಟೆಗಳಲ್ಲಿ ವಿಯೆಟ್ನಾಂ ತಲುಪುವುದಾಗಿ ಹೇಳಿ ಅಚ್ಚರಿಗೆ ಕಾರಣರಾದರು. ಇದರೊಂದಿಗೆ ಅಮೆರಿಕ ಇದುವರೆಗೂ 60 ಲಕ್ಷ ಕೊರೊನಾ ಲಸಿಕೆಯನ್ನು ವಿಯೆಟ್ನಾಂಗೆ ದೇಣಿಗೆ ರೂಪದಲ್ಲಿ ನೀಡಿದಂತಾಗುವುದು.

ಕೋವಿಡ್​-19 ಮೂಲದ ಬಗ್ಗೆ ಪಾರದರ್ಶಕ ಮತ್ತು ಸಮಗ್ರ ತನಿಖೆಗೆ ಕರೆ ನೀಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ, ಸಾಂಕ್ರಾಮಿಕ ರೋಗ ಹಬ್ಬುವುದನ್ನು ತಪ್ಪಿಸಬಹುದಾಗಿದ್ದ ಬೀಜಿಂಗ್, ವೈರಸ್ ಬಗ್ಗೆ ಪ್ರಮುಖ ಮಾಹಿತಿ ಬಹಿರಂಗಪಡಿಸಲಿಲ್ಲ. ಒಂದು ವೇಳೆ ಸಹಕಾರ ನೀಡಿದ್ದರೇ ವಿಜ್ಞಾನಿಗಳಿಗೆ ಜಗತ್ತನ್ನು ವೈರಸ್​ನಿಂದ ರಕ್ಷಿಸಲು ನೆರವಾಗುತ್ತಿತ್ತು ಎಂದು ಹೇಳಿದ್ದರು.

ಕೋವಿಡ್​-19 ಸಾಂಕ್ರಾಮಿಕ ರೋಗವನ್ನು ತಪ್ಪಿಸಬಹುದಾಗಿತ್ತು. ಬೇರೆ ಯಾವುದೇ ಜವಾಬ್ದಾರಿಯುತ ದೇಶವಾಗಿದ್ದರೇ ಏಕಾಏಕಿಯಾಗಿ ಹಬ್ಬಿದ ಕೆಲವೇ ದಿನಗಳಲ್ಲಿ ವಿಶ್ವ ಆರೋಗ್ಯ ತನಿಖಾಧಿಕಾರಿಗಳನ್ನು ವುಹಾನ್‌ಗೆ ಆಹ್ವಾನಿಸುತ್ತಿತ್ತು. ಚೀನಾ ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳ ಸಹಾಯದ ಪ್ರಸ್ತಾಪ ನಿರಾಕರಿಸಿತು. ಧೈರ್ಯಶಾಲಿ ಚೀನಾದ ವೈದ್ಯರು, ವಿಜ್ಞಾನಿಗಳು ಮತ್ತು ಪತ್ರಕರ್ತರಿಗೆ ಶಿಕ್ಷೆ ವಿಧಿಸಿತ್ತಾ ವೈರಸ್​ನ ಅಪಾಯಗಳ ಬಗ್ಗೆ ಜಗತ್ತನ್ನು ಎಚ್ಚರಿಸಲಿಲ್ಲ ಎಂದು ಆರೋಪಿಸಿದ್ದರು.

ಈ ಮಾರಕ ವೈರಸ್‌ನಿಂದ ವಿಜ್ಞಾನಿಗಳಿಗೆ ಜಗತ್ತನ್ನು ರಕ್ಷಿಸಲುಬೇಕಾದ ಪ್ರಮುಖ ಮಾಹಿತಿ ತಡೆಹಿಡಿಯುವ ಬೀಜಿಂಗ್​ನ ಪ್ರಯತ್ನ ಇಂದಿಗೂ ಮುಂದುವರೆದಿದೆ. ವುಹಾನ್‌ನಲ್ಲಿ ಏನಾಯಿತು ಎಂಬುದರ ಬಗ್ಗೆ ಚೀನಾದ ಕಮ್ಯುನಿಸ್ಟ್ ಪಕ್ಷವು ಸಂಪೂರ್ಣವಾಗಿ ಅನುಮತಿಸಬೇಕು. ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಜನಿಸಿ ಇಲ್ಲಿನ ಜನರು ಮತ್ತು ಪ್ರಪಂಚದ ಮೇಲೆ ಉಂಟುಮಾಡುವ ಮೊದಲು ಇದರ ಪತ್ತೆ ಮಾಡಬೇಕಿದೆ ಎಂದು ಪೊಂಪಿಯೊ ಹೇಳಿದ್ದರು.

English summary
Kamala Harris became the first US vice president to visit Vietnam. She has urged action against "bullying" by Beijing amid tensions in the South China Sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X