ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ವೀಸಾಗೆ ಇ ಮೇಲ್ ಐಡಿ, ಸೋಷಿಯಲ್ ಮೀಡಿಯಾ ಅಕೌಂಟ್, ಫೋನ್ ನಂಬರ್ ಎಲ್ಲ ನೀಡಬೇಕು

By ಅನಿಲ್ ಆಚಾರ್
|
Google Oneindia Kannada News

ಇನ್ನು ಮುಂದೆ ಅಮೆರಿಕಾದ ವೀಸಾಗೆ ಅರ್ಜಿ ಹಾಕಿಕೊಳ್ಳುವವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿನ ಯೂಸರ್ ನೇಮ್, ಈ ಹಿಂದಿನ ಇ ಮೇಲ್ ವಿಳಾಸ ಹಾಗೂ ಫೋನ್ ನಂಬರ್ ಗಳ ಮಾಹಿತಿಯನ್ನೂ ನೀಡಬೇಕಾಗುತ್ತದೆ ಎಂದು ಅಮೆರಿಕ ಸರಕಾರವೇ ತಿಳಿಸಿದೆ. ಈಗಿನ ವೀಸಾ ಅರ್ಜಿಯ ಜತೆಗೆ ಹೆಚ್ಚುವರಿ ಮಾಹಿತಿಯನ್ನೂ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

ಈ ಬದಲಾವಣೆಯನ್ನು ಕಳೆದ ವರ್ಷ ಮಾರ್ಚ್ ನಲ್ಲೇ ಪ್ರಸ್ತಾವ ಮಾಡಲಾಗಿತ್ತು. ಈ ಬದಲಾವಣೆಯು ಪ್ರತಿ ವರ್ಷ ಅಮೆರಿಕ ಪ್ರವೇಶಕ್ಕಾಗಿ ವೀಸಾಗೆ ಅರ್ಜಿ ಸಲ್ಲಿಸುವ ಒಂದೂವರೆ ಕೋಟಿ ಮಂದಿಗೆ ಅನ್ವಯ ಆಗುತ್ತದೆ. ರಾಷ್ಟ್ರೀಯ ಭದ್ರತೆ ನಮ್ಮ ಮುಖ್ಯ ಆದ್ಯತೆ. ಅಮೆರಿಕಕ್ಕೆ ಬರಲು ಬಯಸುವ ಪ್ರವಾಸಿಗರು, ವಲಸಿಗರ ಬಗ್ಗೆ ಕೂಲಂಕಷವಾದ ಮಾಹಿತಿ ಪಡೆಯಲಾಗುವುದು. ಅಮೆರಿಕ ನಾಗರಿಕರಾ ರಕ್ಷಣೆಗೆ ಇದು ಬಹಳ ಮುಖ್ಯ ಎಂದಿದ್ದಾರೆ.

ಭಾರತದ ಟೆಕ್ಕಿಗೆ ಎಚ್1ಬಿ ನಿರಾಕರಣೆ, ಟ್ರಂಪ್ ಸರ್ಕಾರ ವಿರುದ್ಧ ದಾವೆ ಭಾರತದ ಟೆಕ್ಕಿಗೆ ಎಚ್1ಬಿ ನಿರಾಕರಣೆ, ಟ್ರಂಪ್ ಸರ್ಕಾರ ವಿರುದ್ಧ ದಾವೆ

ಸಾಮಾಜಿಕ ಮಾಧ್ಯಮ, ಇಮೇಲ್ ಹಾಗೂ ಫೋನ್ ನಂಬರ್ ಗಳ ಇತಿಹಾಸವನ್ನು ಏಕೆ ಕೇಳಲಾಗುತ್ತದೆ ಅಂದರೆ, ಭಯೋತ್ಪಾದಕರ ನಿಯಂತ್ರಣದಲ್ಲಿ ಇರುವ ಪ್ರದೇಶಗಳಿಗೆ ತೆರಳಿದ್ದಾರಾ ಎಂದು ತಿಳಿದುಕೊಳ್ಳಲು ಹೀಗೆ ಮಾಡಲಾಗುತ್ತದೆ. ಅಂದಾಜು ಅರವತ್ತೈದು ಸಾವಿರ ಮಂದಿ ಈ ವಿಭಾಗದ ಅಡಿ ಬರುತ್ತಾರೆ.

US visa policy change; applicant must provide social media, telephone number details

ಹೊಸ ವೀಸಾ ಅರ್ಜಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿರುವ ಖಾತೆಯ ಮಾಹಿತಿಯನ್ನು ನೀಡಬೇಕಾಗುತ್ತದೆ. ಕಳೆದ ಐದು ವರ್ಷಗಳ ವಿವರ ಕೊಡಬೇಕು. ಅರ್ಜಿಯಲ್ಲಿ ಇಲ್ಲದ ಸಾಮಾಜಿಕ ಮಾಧ್ಯಮದಲ್ಲೂ ಖಾತೆ ಹೊಂದಿದ್ದರೆ ಸ್ವಯಂಪ್ರೇರಿತರಾಗಿ ತಿಳಿಸಬಹುದು.

ಗ್ರೀನ್ ಕಾರ್ಡ್, ಎಚ್1ಬಿ ವೀಸಾ ಬಗ್ಗೆ ಟ್ರಂಪ್ ಮಹತ್ವದ ಘೋಷಣೆ ಗ್ರೀನ್ ಕಾರ್ಡ್, ಎಚ್1ಬಿ ವೀಸಾ ಬಗ್ಗೆ ಟ್ರಂಪ್ ಮಹತ್ವದ ಘೋಷಣೆ

ಸಾಮಾಜಿಕ ಮಾಧ್ಯಮಗಳ ಖಾತೆ ಇತಿಹಾಸದ ಜತೆಗೆ ಹಿಂದಿನ ಐದು ವರ್ಷಗಳಲ್ಲಿ ಬಳಸಿದ ಟೆಲಿಫೋನ್ ಸಂಖ್ಯೆಗಳು, ಇ ಮೇಲ್ ವಿಳಾಸ, ಅಂತರರಾಷ್ಟ್ರೀಯ ಪ್ರಯಾಣ ಹಾಗೂ ಕುಟುಂಬ ಸದಸ್ಯರು ಯಾರಾದರೂ ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿ ಆಗಿದ್ದಾರಾ ಎಂಬ ಮಾಹಿತಿಯನ್ನೂ ಕೇಳಲಾಗುತ್ತದೆ.

ಕೆಲವು ರಾಜತಾಂತ್ರಿಕ ಹಾಗೂ ಅಧಿಕಾರಿಗಳ ವೀಸಾಗಳ ಅರ್ಜಿಗಳಿಗೆ ಮಾತ್ರ ಈ ಅಗತ್ಯಗಳಿಂದ ವಿನಾಯಿತಿಯನ್ನು ನೀಡಲಾಗಿದೆ.

English summary
US visa policy change; applicant must provide social media, telephone number and other details. Here is the complete details of latest rules framed by US state department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X