ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಪ್ರವೇಶ: 161 ಭಾರತೀಯರ ಗಡಿಪಾರು ಮಾಡಲಿರುವ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಮೇ 18: ಅಕ್ರಮವಾಗಿ ಬಂದ 161 ಮಂದಿ ಭಾರತೀಯರನ್ನು ಅಮೆರಿಕ ಗಡಿಪಾರು ಮಾಡಲು ನಿರ್ಧರಿಸಿದೆ.

ದಕ್ಷಿಣ ಗಡಿಭಾಗವಾದ ಮೆಕ್ಸಿಕೋದಿಂದ ಕಾನೂನು ಬಾಹಿರವಾಗಿ ರಾಷ್ಟ್ರ ಪ್ರವೇಶಿಸಿದ್ದ ಸುಮಾರು 161 ಮಂದಿ ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡುವುದಾಗಿ ಅಮೆರಿಕಾ ತಿಳಿಸಿದೆ.

ವಿಮಾನಯಾನದಲ್ಲಿ 1,000 ಕೋಟಿ ರೂಪಾಯಿ ಉಳಿಸಲು ಹೊಸ ಐಡಿಯಾ!ವಿಮಾನಯಾನದಲ್ಲಿ 1,000 ಕೋಟಿ ರೂಪಾಯಿ ಉಳಿಸಲು ಹೊಸ ಐಡಿಯಾ!

ಹರಿಯಾಣದ 76, ಪಂಜಾಬ್ 56, ಗೂಜರಾತ್ 12, ಉತ್ತರಪ್ರದೇಶ 5. ಮಹಾರಾಷ್ಟ್ರದ 4, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಸೇರಿದ ತಲಾ ಇಬ್ಬರು, ಆಂಧ್ರಪ್ರದಶ ಹಾಗೂ ಗೋವಾದ ತಲಾ ಒಬ್ಬರನ್ನು ಈ ವಾರ ಗಡಿಪಾರು ಮಾಡುವುದಾಗಿ ಎಂದು ಅಮೆರಿಕಾ ತಿಳಿಸಿದೆ.

ಪಂಜಾಬ್‌ನ ಅಮೃತಸರಕ್ಕೆ ಕಳುಹಿಸಲಿದ್ದಾರೆ

ಪಂಜಾಬ್‌ನ ಅಮೃತಸರಕ್ಕೆ ಕಳುಹಿಸಲಿದ್ದಾರೆ

ಗಡಿಪಾರು ಮಾಡಲಾಗುವ ಎಲ್ಲಾ 161 ಮಂದಿ ಭಾರತೀಯ ಪ್ರಜೆಗಳನ್ನು ವಿಶೇಷ ವಿಮಾನದಲ್ಲಿ ಪಂಜಾಬ್ ರಾಜ್ಯದ ಅಮೃತರಸರಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಅಕ್ರಮವಾಗಿ ಅಮೆರಿಕ ಪ್ರವೇಶ

ಅಕ್ರಮವಾಗಿ ಅಮೆರಿಕ ಪ್ರವೇಶ

ಅಕ್ರಮವಾಗಿ ಅಮೆರಿಕಾ ರಾಷ್ಟ್ರ ಪ್ರವೇಶಿಸಿದ್ದ 1,739 ಮಂದಿ ಭಾರತೀಯರು ಅಮೆರಿಕಾದ 95 ಜೈಲುಗಳಲ್ಲಿ ಇದ್ದಾರೆಂದು ಉತ್ತರ ಅಮೆರಿಕನ್ ಪಂಜಾಬಿ ಅಸೋಸಿಯೇಷನ್'ನ ಕಾರ್ಯಕಾರಿ ನಿರ್ದೇಶಕ ಸಟ್ನಾಮ್ ಸಿಂಗ್ ಅವರು ತಿಳಿಸಿದ್ದಾರೆ.

2018ರಲ್ಲಿ 611 ಮಂದಿ ಗಡಿಪಾರು ಮಾಡಿತ್ತು

2018ರಲ್ಲಿ 611 ಮಂದಿ ಗಡಿಪಾರು ಮಾಡಿತ್ತು

ಈ ನಡುವೆ ಇಮಿಗ್ರೇಶನ್ ಆ್ಯಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ ವರದಿ ಪ್ರಕಾರ, 2018ರಲ್ಲಿ ಅಮೆರಿಕ 611 ಮಂದಿ ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಿತ್ತು. ಈ ವರ್ಷ ಗಡಿಪಾರು ಮಾಡಿದ 161 ಮಂದಿಯ ಪೈಕಿ ಮೂವರು ಮಹಿಳೆಯರಿದ್ದಾರೆಂದು ತಿಳಿಸಿದೆ.

ಯಾವ ರಾಜ್ಯಗಳಿಂದ ಎಷ್ಟು ಮಂದಿ

ಯಾವ ರಾಜ್ಯಗಳಿಂದ ಎಷ್ಟು ಮಂದಿ

ಹರಿಯಾಣದ 76, ಪಂಜಾಬ್ 56, ಗೂಜರಾತ್ 12, ಉತ್ತರಪ್ರದೇಶ 5. ಮಹಾರಾಷ್ಟ್ರದ 4, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಸೇರಿದ ತಲಾ ಇಬ್ಬರು, ಆಂಧ್ರಪ್ರದಶ ಹಾಗೂ ಗೋವಾದ ತಲಾ ಒಬ್ಬರನ್ನು ಈ ವಾರ ಗಡಿಪಾರು ಮಾಡುವುದಾಗಿ ಎಂದು ಅಮೆರಿಕಾ ತಿಳಿಸಿದೆ.

English summary
The United States this week will deport 161 Indian nationals, most of whom had entered the country from its southern border with Mexico and have exhausted all legal options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X