ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪ್‌ನಲ್ಲಿ 3 ಸಾವಿರ ಸೈನಿಕರನ್ನು ನಿಯೋಜಿಸಲಿದೆ ಅಮೆರಿಕ

|
Google Oneindia Kannada News

ಅಮೆರಿಕವು ಯುರೋಪ್‌ನಲ್ಲಿ 3 ಸಾವಿರ ಸೈನಿಕರನ್ನು ನಿಯೋಜಿಸಲಿದೆ. ಪ್ರಸ್ತುತ ಜರ್ಮನಿಯಲ್ಲಿ ನೆಲೆಸಿರುವ 1 ಸಾವಿರ ಸೈನಿಕರನ್ನು ರೊಮೇನಿಯಾಕ್ಕೆ ಹಾಗೂ ಜರ್ಮನಿ ಮತ್ತು ಪೋಲೆಂಡ್‌ಗೆ ಅಮೆರಿಕದಿಂದ 2 ಸಾವಿರ ಸೈನಿಕರನ್ನು ಕಳುಹಿಸಲಾಗುವುದು ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ.

ಈ ಸೈನಿಕರು ಶಾಶ್ವತವಾಗಿ ಆ ಸ್ಥಳದಲ್ಲಿರುವುದಿಲ್ಲ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭೀತಿ ನಿರಂತರವಾಗಿ ಹೆಚ್ಚಾಗತೊಡಗಿದೆ.

ಉಕ್ರೇನ್ ಗಡಿ ವಿವಾದ: ರಷ್ಯಾದ ಬೇಡಿಕೆಯೇನು? ಯುದ್ಧ ಭೀತಿ ಏಕೆ?ಉಕ್ರೇನ್ ಗಡಿ ವಿವಾದ: ರಷ್ಯಾದ ಬೇಡಿಕೆಯೇನು? ಯುದ್ಧ ಭೀತಿ ಏಕೆ?

ಈ ಭಯದ ಮಧ್ಯೆ ಯುಎಸ್ ಡೆಪಾರ್ಟ್‌ಮೆಂಟ್ ಆಫ್ ಡಿಫೆನ್ಸ್ ಪೆಂಟಗನ್ , ಪೂರ್ವ ಯುರೋಪ್‌ನಲ್ಲಿ ನಿಯೋಜನೆಗಾಗಿ ಈಗಾಗಲೇ 8500 ಯುಎಸ್ ಸೈನಿಕರನ್ನು ಹೈಅಲರ್ಟ್‌ನಲ್ಲಿ ಇರಿಸಿದೆ.

US To Deploy Additional 3,000 Troops To Europe Amid Ukraine Tensions

ಈ ಸೈನಿಕರಲ್ಲಿ ಕಾಂಬ್ಯಾಟ್ ಟೀಮ್, ಹೆಲ್ತ್ ವರ್ಕರ್ಸ್, ಗುಪ್ತಚರ ಮತ್ತು ಸರ್ವಿಲೆನ್ಸ್ ತಂಡಗಳು ಸೇರಿವೆ. ಇಲ್ಲಿಯವರೆಗೆ ಈ ಸೈನಿಕರ ನಿಯೋಜನೆಗೆ ಯಾವುದೇ ಆದೇಶ ನೀಡಿಲ್ಲ, ಯಾವುದೇ ಮಿಷನ್‌ ಅನ್ನೂ ಸಹ ಅವರಿಗೆ ಒಪ್ಪಿಸಿಲ್ಲ, ಆದರೆ ಪೂರ್ವ ಯುರೋಪ್‌ನಲ್ಲಿ ನ್ಯಾಟೋ ಬಲಪಡಿಸಲು ಅಮೆರಿಕ ಪಡೆ ಈ ಪ್ರದೇಶದಲ್ಲಿ ನಿಯೋಜನೆ ಮಾಡುತ್ತಿದೆ. ಯುರೋಪ್‌ನಲ್ಲಿ ಹೆಚ್ಚುವರಿ ಯುಎಸ್ ಪಡೆಗಳ ನಿಯೋಜನೆ ನ್ಯಾಟೋ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಉಕ್ರೇನ್‌ ದೇಶ ಈ ಹಿಂದೆ ಸೋವಿಯತ್‌ ರಷ್ಯಾದ ಭಾಗವಾಗಿತ್ತು. ಇದರ ರಾಜಧಾನಿ ಕಿವ್‌. ಜನಸಂಖ್ಯೆ ಸುಮಾರು 6 ಕೋಟಿ. ಮಾತನಾಡುವ ಭಾಷೆ ಉಕ್ರೇನಿಯನ್‌. ಶೇ. 87ರಷ್ಟು ಕ್ರೈಸ್ತರು ಮತ್ತು ಇತರರು ಇರುವ, ಸಾಕಷ್ಟು ಬಡತನವೂ ಇರುವ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಯುರೋಪ್‌ನಲ್ಲಿ 74ನೇ ಸ್ಥಾನದಲ್ಲಿರುವ ದೇಶ.

1991ರಲ್ಲಿ ಸೋವಿಯತ್‌ ರಷ್ಯಾ ಒಡೆದು ಚೂರುಚೂರಾದಾಗ, ಉಕ್ರೇನ್‌ ಕೂಡ ಸ್ವಾತಂತ್ರ್ಯ ಗಳಿಸಿತು. ರಷ್ಯಾದಿಂದ ದೂರವಾಗುತ್ತ, ನ್ಯಾಟೋ ದೇಶಗಳಿಗೆ ಹತ್ತಿರವಾಗುತ್ತ ನಡೆದಿದೆ.

ಇಲ್ಲಿನ ಜನತೆ ರಷ್ಯಾ ಮೂಲದ ಕಮ್ಯುನಿಸಂನಿಂದ ಬೇಸತ್ತು ಯುರೋಪ್‌ನ ಮುಕ್ತ ಪ್ರಜಾಪ್ರಭುತ್ವದತ್ತ ಹೆಚ್ಚು ಚಲಿಸುತ್ತಿದ್ದಾರೆ. ತನ್ನ ಪಕ್ಕದಲ್ಲೇ ಹೆಚ್ಚುತ್ತಿರುವ ಅಮೆರಿಕ- ಯುರೋಪ್‌ನ ಪ್ರಭಾವವನ್ನು ಸಹಿಸಿಕೊಳ್ಳಲು ರಷ್ಯಾ ಸಿದ್ಧವಿಲ್ಲ. ಇದೇ ರಷ್ಯಾ- ಉಕ್ರೇನ್‌ ಬಿಕ್ಕಟ್ಟಿನ ಮೂಲ.

ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಜಟಿಲವಾಗುತ್ತಿದ್ದು, ರಷ್ಯಾ ಭಾರೀ ಪ್ರಮಾಣದಲ್ಲಿ ತನ್ನ ಸೈನಿಕರನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸುತ್ತಿದೆ. ಅಲ್ಲದೇ ಭಾರೀ ಪ್ರಮಾಣದಲ್ಲಿ ಸೈನ್ಯ ಸಲಕರಣೆಗಳು ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹಣೆ ಮಾಡುತ್ತಿದೆ.

ಉಕ್ರೇನ್ ಗಡಿಯಲ್ಲಿ ರಷ್ಯಾದ ಸೈನ್ಯ ನಿಯೋಜನೆಯ ಉಪಗ್ರಹ ಆಧಾರಿತ ಚಿತ್ರಗಳು ಜಾಗತಿಕ ಗಮನ ಸೆಳೆದಿದ್ದು, ಉಕ್ರೇನ್ ಮೇಲೆ ಯುದ್ಧ ಸಾರಲು ರಷ್ಯಾ ಸಜ್ಜಾಗಿ ಕುಳಿತಿದೆ ಎಂಬ ವಾದಕ್ಕೆ ಪುಷ್ಠಿ ನೀಡುವಂತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಅಮೆರಿಕ ಕೂಡ ಸುಮಾರು 8,500 ಸೈನಿಕರನ್ನು ಯುದ್ಧ ಸನ್ನದ್ಧತೆಯಲ್ಲಿ ಇಟ್ಟಿದೆ. ನ್ಯಾಟೋ ಪಡೆಗಳು ಕೂಡ ಅಪಯಾಕಾರಿ ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ.

ಕ್ರಿಮಿಯಾ ಮತ್ತು ಬೆಲಾರಸ್ ಗಡಿಗಳಲ್ಲಿ ರಷ್ಯಾ ಸೈನ್ಯ ಚಟುವಟಿಕೆಗಳು ಹೆಚ್ಚಿದ್ದು, ರೈಲ್ವೇ ಮಾರ್ಗದ ಮೂಲಕ ಭಾರೀ ಪ್ರಮಾಣದ ಫಿರಂಗಿಗಳನ್ನು ಗಡಿಗೆ ರವಾನಿಸಲಾಗಿದೆ.

ರಷ್ಯಾದ ಈ ನಡೆ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಯುದ್ಧ ಸ್ಥಿತಿಗೆ ಸಜ್ಜಾಗುವ ಅನಿವಾರ್ಯತೆಗೆ ದೂಡಿದೆ. ಉಕ್ರೇನ್ ಕೂಡ ರಷ್ಯಾ ದಾಳಿಯ ಭೀತಿಯಲ್ಲಿ ದಿನದೂಡುತ್ತಿದೆ.

ಪಶ್ಚಿಮ ರಷ್ಯಾ ಗಡಿಗಳಲ್ಲಿ ರಷ್ಯನ್ ಸೈನಿಕರು ಸಮರಾಭ್ಯಾಸ ನಡೆಸುತ್ತಿದ್ದು, ಕ್ಷಿಪಣಿ ಉಡಾವಣೆ ತರಬೇತಿಗೆ ವೇಗ ನೀಡಲಾಗಿದೆ. ಭಾರೀ ಪ್ರಮಾಣದಲ್ಲಿ ಫಿರಂಗಿಗಳನ್ನು ನಿಯೋಜಿಸಲಾಗಿದ್ದು, ಉಕ್ರೇನ್ ಮೇಲೆ ಭಾರೀ ಸೈನ್ಯ ಶಕ್ತಿಯೊಂದಿಗೆ ಮುಗಿಬೀಳುವ ಇರಾದೆ ಹೊಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಷ್ಯಾ-ಉಕ್ರೇನ್ ನಡುವಿನ ಈ ಬಿಕ್ಕಟ್ಟು ಜಾಗತಿಕ ಪರಿಣಾಮ ಬೀರಿದ್ದು, ಅಮೆರಿಕ, ಬ್ರಿಟನ್ ಮತ್ತು ಕೆನಡಾ ಈಗಾಗಲೇ ಉಕ್ರೇನ್‌ಗೆ ಸೈನ್ಯ ಸಹಾಯ ನೀಡುವುದಾಗಿ ಘೋಷಿಸಿವೆ. ಅದರಂತೆ ಬ್ರಿಟನ್ ಮತ್ತು ಕೆನಡಾ ತನ್ನ ಸೈನ್ಯ ತುಕಡಿಗಳನ್ನು ರವಾನಿಸಿವೆ.

ಮಾಸ್ಕೋ: ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಜಟಿಲವಾಗುತ್ತಿದ್ದು, ರಷ್ಯಾ ಭಾರೀ ಪ್ರಮಾಣದಲ್ಲಿ ತನ್ನ ಸೈನಿಕರನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸುತ್ತಿದೆ. ಅಲ್ಲದೇ ಭಾರೀ ಪ್ರಮಾಣದಲ್ಲಿ ಸೈನ್ಯ ಸಲಕರಣೆಗಳು ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹಣೆ ಮಾಡುತ್ತಿದೆ.

ಉಕ್ರೇನ್ ಗಡಿಯಲ್ಲಿ ರಷ್ಯಾದ ಸೈನ್ಯ ನಿಯೋಜನೆಯ ಉಪಗ್ರಹ ಆಧಾರಿತ ಚಿತ್ರಗಳು ಜಾಗತಿಕ ಗಮನ ಸೆಳೆದಿದ್ದು, ಉಕ್ರೇನ್ ಮೇಲೆ ಯುದ್ಧ ಸಾರಲು ರಷ್ಯಾ ಸಜ್ಜಾಗಿ ಕುಳಿತಿದೆ ಎಂಬ ವಾದಕ್ಕೆ ಪುಷ್ಠಿ ನೀಡುವಂತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಅಮೆರಿಕ ಕೂಡ ಸುಮಾರು 8,500 ಸೈನಿಕರನ್ನು ಯುದ್ಧ ಸನ್ನದ್ಧತೆಯಲ್ಲಿ ಇಟ್ಟಿದೆ. ನ್ಯಾಟೋ ಪಡೆಗಳು ಕೂಡ ಅಪಯಾಕಾರಿ ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ.

ಕ್ರಿಮಿಯಾ ಮತ್ತು ಬೆಲಾರಸ್ ಗಡಿಗಳಲ್ಲಿ ರಷ್ಯಾ ಸೈನ್ಯ ಚಟುವಟಿಕೆಗಳು ಹೆಚ್ಚಿದ್ದು, ರೈಲ್ವೇ ಮಾರ್ಗದ ಮೂಲಕ ಭಾರೀ ಪ್ರಮಾಣದ ಫಿರಂಗಿಗಳನ್ನು ಗಡಿಗೆ ರವಾನಿಸಲಾಗಿದೆ.

ರಷ್ಯಾದ ಈ ನಡೆ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಯುದ್ಧ ಸ್ಥಿತಿಗೆ ಸಜ್ಜಾಗುವ ಅನಿವಾರ್ಯತೆಗೆ ದೂಡಿದೆ. ಉಕ್ರೇನ್ ಕೂಡ ರಷ್ಯಾ ದಾಳಿಯ ಭೀತಿಯಲ್ಲಿ ದಿನದೂಡುತ್ತಿದೆ.

ಪಶ್ಚಿಮ ರಷ್ಯಾ ಗಡಿಗಳಲ್ಲಿ ರಷ್ಯನ್ ಸೈನಿಕರು ಸಮರಾಭ್ಯಾಸ ನಡೆಸುತ್ತಿದ್ದು, ಕ್ಷಿಪಣಿ ಉಡಾವಣೆ ತರಬೇತಿಗೆ ವೇಗ ನೀಡಲಾಗಿದೆ. ಭಾರೀ ಪ್ರಮಾಣದಲ್ಲಿ ಫಿರಂಗಿಗಳನ್ನು ನಿಯೋಜಿಸಲಾಗಿದ್ದು, ಉಕ್ರೇನ್ ಮೇಲೆ ಭಾರೀ ಸೈನ್ಯ ಶಕ್ತಿಯೊಂದಿಗೆ ಮುಗಿಬೀಳುವ ಇರಾದೆ ಹೊಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಷ್ಯಾ-ಉಕ್ರೇನ್ ನಡುವಿನ ಈ ಬಿಕ್ಕಟ್ಟು ಜಾಗತಿಕ ಪರಿಣಾಮ ಬೀರಿದ್ದು, ಅಮೆರಿಕ, ಬ್ರಿಟನ್ ಮತ್ತು ಕೆನಡಾ ಈಗಾಗಲೇ ಉಕ್ರೇನ್‌ಗೆ ಸೈನ್ಯ ಸಹಾಯ ನೀಡುವುದಾಗಿ ಘೋಷಿಸಿವೆ. ಅದರಂತೆ ಬ್ರಿಟನ್ ಮತ್ತು ಕೆನಡಾ ತನ್ನ ಸೈನ್ಯ ತುಕಡಿಗಳನ್ನು ರವಾನಿಸಿವೆ.

ಅಮೆರಿಕ ತನ್ನನ್ನು ಯುದ್ಧಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಪ್ರಾದೇಶಿಕ ಶಾಂತಿಯ ತನ್ನ ಎಲ್ಲಾ ಪ್ರಯತ್ನಗಳಿಗೆ ಅಡ್ಡಗಾಲಾಗುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆಯಷ್ಟೇ ಆಪಾದಿಸಿದ್ದರು, ಅಲ್ಲದೇ ರಷ್ಯಾದ ಭಧ್ರತೆ ವಿಷಯದಲ್ಲಿ ಯಾವುದೇ ರಾಜಿಗೆ ಸಿದ್ಧರಿಲ್ಲ ಎಂದೂ ಪುಟಿನ್ ಸ್ಪಷ್ಟ ಸಂದೇಶ ರವಾನಿಸಿದ್ದರು.

ಒಟ್ಟಿನಲ್ಲಿ ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು ಜಾಗತಿಕ ಆತಂಕಕ್ಕೆ ಕಾರಣವಾಗಿದ್ದು, ಯುದ್ಧ ಸನ್ನಿವೇಶ ಜಗತ್ತನ್ನು ಮಹಾಸಂಗ್ರಾಮದ ಹೊಸ್ತಿಲಿಗೆ ತಂದು ನಿಲ್ಲಿಸಿದೆ.

English summary
The US will deploy additional troops to Europe, the Defense Department has announced, citing tensions on Ukraine's borders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X