ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಕಕ್ಕಾಬಿಕ್ಕಿಯಾದ ಅಮೆರಿಕಾದಲ್ಲಿ ವಲಸಿಗರಿಗೆ ಉದ್ಯೋಗವಿಲ್ಲ!

|
Google Oneindia Kannada News

ವಾಶಿಂಗ್ ಟನ್, ಏಪ್ರಿಲ್.21: ಕೊರೊನಾ ವೈರಸ್ ನಿಂದ ಬಳಲಿ ಬೆಂಡಾಗಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಉದ್ಯೋಗ ಸೃಷ್ಟಿಸುವುದು ಇರಲಿ ಈಗಿರುವ ಉದ್ಯೋಗಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

Recommended Video

Trump finally points his finger towards China | Oneindia kannada

ದೇಶದ ಪ್ರಜೆಗಳಿಗೆ ಉದ್ಯೋಗವನ್ನು ಉಳಿಸಲು ವಿದೇಶಿ ವಲಸಿಗರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದಾರೆ. ಅಗೋಚರ ಪರಿಸ್ಥಿತಿಯ ನಡುವೆ ದೇಶದ ಪ್ರಜೆಗಳಿಗೆ ಉದ್ಯೋಗವನ್ನು ಸೃಷ್ಟಿಸುವುದು ದೊಡ್ಡ ಸವಾಲಾಗಿ ಬಿಟ್ಟಿದೆ. ಈ ದೃಷ್ಟಿಯಿಂದ ಅಧ್ಯಕ್ಷ ಡೊನೊಲ್ಡ್ ಟ್ರಂಪ್ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?

ಯುನೈಟೆಡ್ ಸ್ಟೇಟ್ಸ್ ಗೆ ಉದ್ಯೋಗವನ್ನು ಹರಿಸಿ ವಲಸೆ ಬರುವವರಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸುವ ಆಡಳಿತಾತ್ಮದ ಆದೇಶಕ್ಕೆ ಅಂಕಿತ ಹಾಕಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿತ್ತಾರೆ. ಆ ಮೂಲಕ ದೇಶದ ಪ್ರಜೆಗಳಿಗೆ ಉದ್ಯೋಗ ಖಾತ್ರಿಯ ಭರವಸೆ ಮೂಡಿಸಲು ಕ್ರಮ ತೆಗೆದುಕೊಂಡಿದ್ದಾರೆ.

US Temporarily Suspend Immigration For protect Jobs Of American Citizens

ಅಮೆರಿಕಾದಲ್ಲಿ 220 ಲಕ್ಷ ಮಂದಿಗೆ ನಿರುದ್ಯೋಗ ಕಾಟ!:

ನೊವೆಲ್ ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಶ್ರಮಿಸುತ್ತಿದೆ. ಇದರ ನಡುವೆ ಸಂಭವಿಸಿದ ಆರ್ಥಿಕ ಹಿಂಜರಿತದಿಂದ 220 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಏಕೆಂದರೆ ಕಳೆದ ಮಾರ್ಚ್ ನಲ್ಲಿ ಯುನೈಟೆಡ್ ಸ್ಟೇಟ್ಸ್ ನ ಚಿಲ್ಲರೆ ವ್ಯಾಪಾರದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. 1946ರ ನಂತರ ಮೊದಲ ಬಾರಿಗೆ ಚಿಲ್ಲರೇ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ.

ವಿಶ್ವದಲ್ಲಿ ಕೊರೊನಾ ವೈರಸ್ ಹೊಡೆತಕ್ಕೆ ನಲುಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿದೆ. ಇದುವರೆಗೂ ದೇಶದಲ್ಲಿ 7,92,913ಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಮಹಾಮಾರಿಗೆ 42,517 ಜನರು ಪ್ರಾಣ ಬಿಟ್ಟಿದ್ದಾರೆ. ಇನ್ನು, 72,389ಕ್ಕೂ ಅಧಿಕ ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

English summary
Coronavirus Effect: US Temporarily Suspend Immigration For Protect Jobs Of American Citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X