ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳಯಾನಕ್ಕೆ ಅಮೆರಿಕದ ಬಾಹ್ಯಾಕಾಶ ಪ್ರಶಸ್ತಿ

|
Google Oneindia Kannada News

ನವದೆಹಲಿ, ಜ, 14: ಭಾರತೀಯ ಭಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ ಮಂಗಳ ನೌಕೆ 'ಮಾಮ್' ಗೆ ಅಮೆರಿಕದ ನ್ಯಾಶನಲ್ ಸ್ಪೇಸ್ ಸೊಸೈಟಿಯ(ಎನ್ ಎಸ್ಎಸ್) 2015ರ ಬಾಹ್ಯಾಕಾಶ ಸಂಶೋಧನಾ ಪ್ರಶಸ್ತಿ ದೊರೆತಿದೆ.

ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿಭಾಗದಲ್ಲಿ ಮಾಮ್ ಗೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಎನ್ ಎಸ್ಎಸ್ ತಿಳಿಸಿದೆ. ಕೆನಡಾದ ಟೊರಾಂಟೋ ದಲ್ಲಿ ಮೇ 20 ರಂದು ನಡೆಯಲಿರುವ ಎನ್ ಎಸ್ಎಸ್ ನ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಚಂದ್ರ ವಿಗ್ರಹವುಳ್ಳ ಪ್ರಶಸ್ತಿಯನ್ನು ಇಸ್ರೋದ ಪ್ರತಿನಿಧಿಯೊಬ್ಬರಿಗೆ ನೀಡಲಾಗುತ್ತದೆ.[ಅಮೆರಿಕ-ಭಾರತ ಜಂಟಿ ಮಂಗಳಯಾನ]

mars

ಯಾವುದೇ ದೇಶದ ಬಾಹ್ಯಾಕಾಶ ನೌಕೆಯೊಂದು ಮೊದಲ ಪ್ರಯತ್ನದಲ್ಲೇ ಮಂಗಳನ್ನು ತಲುಪಿದ್ದು ಇದೇ ಮೊದಲು. ಅಲ್ಲದೇ ಅತಿ ಕಡಿಮೆ ಖರ್ಚಿನಲ್ಲಿ ನಿರ್ಮಾಣವಾದ ನೌಕೆ ಅತ್ಯಾಧುನಿಕ ಕ್ಯಾಮರಾಗಳನ್ನು ಸುಲಭವಾಗಿ ಹೊತ್ತೊಯ್ದಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಎನ್ ಎಸ್ ಎಸ್ ತಿಳಿಸಿದೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

2013 ರಲ್ಲಿ ಉಡಾವಣೆ ಮಾಡಿದ್ದ ಮಾಮ್ ಕಳೆದ 2014 ಸಪ್ಟೆಂಬರ್ 24 ರಂದು ಯಶಸ್ವಿಯಾಗಿ ಮಂಗಳನ ಕಕ್ಷೆ ಪ್ರವೇಶ ಮಾಡಿತ್ತು. 450 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ಮಾಮ್ ಯಶಸ್ಸಿನಲ್ಲಿ ಅನೇಕ ವಿಜ್ಞಾನಿಗಳು ಪಾಲ್ಗೊಂಡಿದ್ದರು.

English summary
Indian Space Research Organisation has been conferred ‘Space Pioneer Award' by the National Space Society (NSS) of the United States over the historic feat on successfully sending an orbit to Martian atmosphere in its very first attempt. The award would be presented to an ISRO representative during the 34th Annual International Space Development Conference to be held at Toronto in Canada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X