ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

TikTok ನಿಷೇಧದ ಹಿಂದಿನ ಅಸಲಿ ರಹಸ್ಯ ಬಿಚ್ಚಿಟ್ಟ ಅಮೆರಿಕಾ!

|
Google Oneindia Kannada News

ವಾಶಿಂಗ್ಟನ್, ಜುಲೈ.16: ಕೊರೊನಾವೈರಸ್ ಹುಟ್ಟುಹಾಕಿದ ಚೀನಾದ ವಿರುದ್ಧ ಜಾಗತಿಕ ಮಟ್ಟದಲ್ಲಿ ದೈತ್ಯ ರಾಷ್ಟ್ರಗಳೆಲ್ಲ ಸಮರ ಸಾರುತ್ತಿವೆ. ಡ್ರ್ಯಾಗನ್ ರಾಷ್ಟ್ರಕ್ಕೆ ಆರ್ಥಿಕ ನಿರ್ಬಂಧ ವಿಧಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ಭಾರತದ ಬೆನ್ನಲ್ಲೇ ಅಮೆರಿಕಾದಲ್ಲೂ ಚೀನೀಯರ ಪ್ರಸಿದ್ಧ TikTok ಆ್ಯಪ್ ಬ್ಯಾನ್ ಮಾಡುವುದರ ಬಗ್ಗೆ ಚರ್ಚೆ ಶುರುವಾಗಿದೆ. ಯುನೈಟೆಡ್ ಸ್ಟೇಟ್ಸ್ ಸೆನೆಟ್ ಕಮಿಟಿಯು ಇದಕ್ಕೆ ಸಂಬಂಧಿಸಿದಂತೆ ಮಸೂದೆಯನ್ನು ಮುಂದಿನ ವಾರದಲ್ಲಿ ಮತದಾನಕ್ಕೆ ಹಾಕುವ ಸಾಧ್ಯತೆಗಳಿವೆ.

ಟಿಕ್‌ಟಾಕ್ ಸೇರಿ ಚೀನಾ ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಲು ಅಮೆರಿಕ ಚಿಂತನೆಟಿಕ್‌ಟಾಕ್ ಸೇರಿ ಚೀನಾ ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಲು ಅಮೆರಿಕ ಚಿಂತನೆ

ಸೆನೆಟ್ ನ ಹೋಮ್ ಸೆಕ್ಯೂರಿಟಿ ಮತ್ತು ಸರ್ಕಾರಿ ವ್ಯವಹಾರಗಳ ಸಮಿತಿಯು 'ಸರ್ಕಾರಿ ಸಾಧನಗಳಲ್ಲಿ ಟಿಕ್ ಟಾಕ್ ಗೆ ನಿರ್ಬಂಧ ಕಾಯ್ದೆ'ಯನ್ನು ಜಾರಿಗೊಳಿಸುವುದಕ್ಕೆ ಜುಲೈ.22ರಂದು ಮಂಡನೆ ಮಾಡಲಾಗುತ್ತದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಚೀನಾ ಆ್ಯಪ್ ಗಳ ವಿರುದ್ಧ ಅಮೆರಿಕಾದಲ್ಲಿ ಅಭಿಯಾನ

ಚೀನಾ ಆ್ಯಪ್ ಗಳ ವಿರುದ್ಧ ಅಮೆರಿಕಾದಲ್ಲಿ ಅಭಿಯಾನ

ಭಾರತವು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಮೂಲಕ ಅಸಾಮಾನ್ಯ ಹೆಜ್ಜೆ ಇಟ್ಟಿದೆ. ಟಿಕ್‌ಟಾಕ್ ಸೇರಿದಂತೆ ಅಮೆರಿಕನ್ನರ ದತ್ತಾಂಶವನ್ನು ರಕ್ಷಿಸುವ ಉದ್ದೇಶದಿಂದ ಟಿಕ್ ಟಾಕ್ ಸೇರಿದಂತೆ ಇತರೆ ಚೀನೀ ಅಪ್ಲಿಕೇಶನ್‌ಗಳನ್ನು ಅಮೆರಿಕಾ ನಂಬಬಾರದು. ಸಿ.ಸಿ.ಪಿಯ ಅತ್ಯಾಧುನಿಕ ಗೂಢಚರ್ಯೆ ಅಭಿಯಾನವನ್ನು ತಡೆಯಲು ಮತ್ತು ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಬಲವಾದ ಕ್ರಮವನ್ನು ತೆಗೆದುಕೊಳ್ಳುವಂತೆ ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ಯುಎಸ್ ಕಾಂಗ್ರೆಸ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದಿದ್ದಾರೆ.

ಅಮೆರಿಕಾದಲ್ಲಿ ಟಿಕ್ ಟಾಕ್ ಟ್ರಿಂಡಿಂಗ್ ಸೃಷ್ಟಿ

ಅಮೆರಿಕಾದಲ್ಲಿ ಟಿಕ್ ಟಾಕ್ ಟ್ರಿಂಡಿಂಗ್ ಸೃಷ್ಟಿ

ಚೀನೀಯ ಬೈಟ್ ಡ್ಯಾನ್ಸ್ ಕಂಪನಿ ಮಾಲೀಕತ್ವದ ಜಗತ್ಪ್ರಸಿದ್ಧ ಟಿಕ್ ಟಾಕ್ ಆ್ಯಪ್ ಅಮೆರಿಕಾದಲ್ಲೂ ಸಖತ್ ಟ್ರೆಂಡಿಂಗ್ ನಲ್ಲಿದೆ. ಈ ಹಿನ್ನೆಲೆ ಟಿಕ್ ಟಾಕ್ ಆ್ಯಪ್ ನಿರ್ಬಂಧಿಸುವ ಕುರಿತು ಯುಎಸ್ ಜನಪ್ರತಿನಿಧಿಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಶೇ.60ರಷ್ಟು ಬಳಕೆದಾರರು ಅಮೆರಿಕಾದವರೇ!

ಶೇ.60ರಷ್ಟು ಬಳಕೆದಾರರು ಅಮೆರಿಕಾದವರೇ!

ಶಾರ್ಟ್ ವಿಡಿಯೋಗಳನ್ನು ಮಾಡಲು ಬಳಸುವ ಟಿಕ್ ಟಾಕ್ ಆ್ಯಪ್ ನ್ನು ಅಮೆರಿಕಾದ ಯುವಕ-ಯುವತಿಯರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಸ್ವತಃ ಟಿಕ್ ಟಾಕ್ ಕಂಪನಿಯೇ ಈ ಬಗ್ಗೆ ಹೇಳಿಕೆ ನೀಡಿತ್ತು. ಕಳೆದ ವರ್ಷ ಟಿಕ್ ಟಾಕ್ ನ 26.5 ಮಿಲಿಯನ್ ಸಕ್ರಿಯ ಬಳಕೆದಾರರ ಪೈಕಿ ಶೇ.60ರಷ್ಟು ಮಂದಿ ಅಮೆರಿಕಾದ 16 ರಿಂದ 24 ವರ್ಷದ ನಡುವಿನ ಯುವಕ ಯುವತಿಯರೇ ಆಗಿದ್ದಾರೆ ಎಂದು ಕಂಪನಿ ತಿಳಿಸಿತ್ತು.

ಮೊದಲೇ ಸುಳಿವು ನೀಡಿದ್ದ ಪೊಂಪಿಯೋ

ಮೊದಲೇ ಸುಳಿವು ನೀಡಿದ್ದ ಪೊಂಪಿಯೋ

ಅಮೆರಿಕಾದಲ್ಲಿ ಟಿಕ್ ಟಾಕ್ ಸೇರಿದಂತೆ ಚೀನಾದ ಅಪ್ಲಿಕೇಷನ್ ಗಳನ್ನು ರದ್ದುಗೊಳಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಕಾರ್ಯದರ್ಶಿ ಮೈಕ್ ಪೊಂಪಿಯೋ ಸುಳಿವು ನೀಡಿದ್ದರು. ಚೀನೀ ಆ್ಯಪ್ ಗಳು ಸರ್ಕಾರಕ್ಕೆ ಬೇರೆ ದೇಶಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಹಂಚಿಕೊಳ್ಳುತ್ತಿವೆ. ಇದರಿಂದ ಚೀನಾದ ಮೊಬೈಲ್ ಆ್ಯಪ್ ಗಳನ್ನು ನಿರ್ಬಂಧಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಹೇಳಿದ್ದರು. ಚೀನಾದ ಆ್ಯಪ್ ಗಳನ್ನು ರದ್ದುಗೊಳಿಸಿದ ಭಾರತದ ನಡೆಯ ಬಗ್ಗೆ ಪೊಂಪಿಯೋ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಭಾರತದಲ್ಲಿ ಚೀನಾದ 59 ಅಪ್ಲಿಕೇಷನ್ ಗಳಿಗೆ ನಿರ್ಬಂಧ

ಭಾರತದಲ್ಲಿ ಚೀನಾದ 59 ಅಪ್ಲಿಕೇಷನ್ ಗಳಿಗೆ ನಿರ್ಬಂಧ

ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಜೂನ್ 29ರಂದು ಆದೇಶ ಹೊರಡಿಸಿದೆ. ಅಂತೆಯೇ ಈಗಾಗಲೇ ಈ ಆ್ಯಪ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಚೀನಾದ ಸರ್ಕಾರಿ ಮಾಧ್ಯಮ ದಿ ಗ್ಲೋಬಲ್ ಟೈಮ್ಸ್ ಪ್ರಕಟಿಸಿದ ವರದಿ ಪ್ರಕಾರ, ಟಿಕ್‌ಟಾಕ್ ಮತ್ತು ಹೆಲೋ ಅಪ್ಲಿಕೇಶನ್‌ಗಳ ಕಂಪನಿಯಾಗಿರುವ ಬೈಟ್‌ ಡ್ಯಾನ್ಸ್ ಗೆ ಇದರಿಂದ 45 ಸಾವಿರ ಕೋಟಿ ರೂಪಾಯಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

English summary
A U.S. Senate Committee Is Likely To Vote Next Week On A Bill To Ban Federal Employees From Using Social Media App TikTok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X