ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಸೇರಿದ್ದ ಕಳ್ಳ ಮಾಲುಗಳು ಭಾರತಕ್ಕೆ ವಾಪಸ್

|
Google Oneindia Kannada News

ನ್ಯೂಯಾರ್ಕ್, ಏ. 2: ಅಮೆರಿಕದ ಹೊನಲುಲು ವಸ್ತುಸಂಗ್ರಹಾಲಯ ತನ್ನ ಬಳಿ ಇದ್ದ ಅಪರೂಪದ ಪುರಾತನ ವಸ್ತುಗಳನ್ನು ಅಮೆರಿಕದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.

ಅರೇ ಇದರಲ್ಲೇನು ವಿಶೇಷ, ಅದೇ ದೇಶದ ಸಂಸ್ಥೆಯೊಂದು ಅದೇ ದೇಶದ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದೆ ಎಂದು ಸುಮ್ಮನಾಗುವಂತಿಲ್ಲ. ಯಾಕೆಂದರೆ ಇದರ ಅಸಲಿ ಕತೆ ಬೇರೆಯೇ ಇದೆ.[ಬಲೆಗೆ ಬಿದ್ದರು ಪುರಾತನ ವಿಗ್ರಹ ಚೋರರು]

america

ಕಲೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳ ಅಪಹರಣದಲ್ಲಿ ಕುಖ್ಯಾತನಾಗಿರುವ ಸುಭಾಷ್ ಕಪೂರ್ ಭಾರತದಿಂದ ಕದ್ದು ಯುಎಸ್ ಗೆ ಸಾಗಿಸಿದ ವಸ್ತುಗಳನ್ನೇ ಈಗ ಹಸ್ತಾಂತರಿಸಲಾಗಿದೆ. ಹೊನಲುಲು ಮ್ಯೂಸಿಯಂ ತನ್ನ ಬಳಿಯಿದ್ದ 7 ಅಪರೂಪದ ಪ್ರಾಚ್ಯ ವಸ್ತುಗಳನ್ನು ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳಿಗೆ ನೀಡಿದೆ.

ಭಾರತದ ಬುದ್ಧ ದೇವಾಲಯ ಮತ್ತು ಬೌದ್ಧ ಪರಂಪರೆಗೆ ಸೇರಿದ ಜಾಗಗಳಿಂದ ಅಪರೂಪದ ಹರಳುಗಳನ್ನು ಅಪಹರಿಸಲಾಗಿತ್ತು. ಕೆಲವೇ ದಿನದಲ್ಲಿ ಈ ಎಲ್ಲ ವಸ್ತುಗಳನ್ನು ಅಮೆರಿಕ ಭಾರತಕ್ಕೆ ಹಿಂದಿರುಗಿಸಲಿದೆ ಎಂದು ಹೇಳಲಾಗಿದೆ. 1991 ರಿಂದ 2003 ರ ನಡುವಿನ ಅವಧಿಯಲ್ಲಿ ಸಂಗ್ರಹಿಸಿದ್ದ ಅಪರೂಪದ ಹರಳುಗಳನ್ನು ಸೇರಿದಂತೆ ವಿವಧ ವಸ್ತುಗಳನ್ನು ಅಪಹರಣ ಮಾಡಿ ಯುಎಸ್ ಗೆ ಸಾಗಿಸಲಾಗಿತ್ತು.[ಮಲ್ಲು ಸುಂದರಿ ವಿಚಾರಣೆ]

ಈ ಬಗ್ಗೆ ಮಾಹಿತಿ ಕಲೆ ಹಾಕಿದ ಅಮೆರಿಕದ ಪೊಲೀಸರು ಮ್ಯೂಸಿಯಂನಲ್ಲಿ ಪ್ರಾಚೀನ ವಸ್ತುಗಳು ಇರುವುದನ್ನು ಕಳೆದ ವರ್ಷ ಪತ್ತೆ ಹಚ್ಚಿದ್ದರು. ಕಪೂರ್ ಕಡೆಯಿಂದ ವಶಪಡಿಸಿಕೊಂಡ 2 ಸಾವಿರ ವರ್ಷ ಹಳೆಯದಾದ ಸಂಗೀತ ಉಪಕರಣ ಬಾಕಿ ವಸ್ತುಗಳ ಕುರಿತ ಮಾಹಿತಿ ನೀಡಿತ್ತು.

ವಸ್ತುಸಂಗ್ರಾಹಲಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಇನ್ ವೆಸ್ಟಿಗೇಶನ್ಸ್, ಪ್ರತಿಮೆಗಳು, ವಾಸ್ತುಶಿಲ್ಪ ಸಾರುವ ಕೆತ್ತನೆಗಳು ಮತ್ತು ಕಲ್ಲುಗಳು ಇರುವ ಬಗ್ಗೆ ದಾಖಲೆ ಸಂಗ್ರಹಿಸಿತ್ತು. 2011 ರಲ್ಲಿ ಕಪೂರ್ ನನ್ನು ಜರ್ಮನಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ವಸ್ತು ಸಂಗ್ರಹಾಲಯ ಗಳನ್ನು ಲೂಟಿ ಮಾಡುವುದು ದೊಡ್ಡ ಸಮಸ್ಯೆ ಯಾಗಿ ಪರಿಣಮಿಸಿದೆ. ನಿಮಗೆ ಗೊತ್ತಿಲ್ಲದೇ ಈ ರೀತಿ ಕೆಲ ವಸ್ತುಗಳನ್ನು ಅಕ್ರಮವಾಗಿ ಪಡೆದುಕೊಳ್ಳುವ ಸಂಭವವಿರುತ್ತದೆ ಎಂದು ಹೊನಲುಲು ವಸ್ತು ಸಂಗ್ರಹಾಲಯದ ನಿರ್ದೇಶಕ ಸ್ಟೀಫನ್ ಜೊಸ್ಟ್ ಹೇಳಿದ್ದಾರೆ. ಒಟ್ಟಿನಲ್ಲಿ ಭಾರತದಿಂದ ಅಕ್ರಮವಾಗಿ ಸಮುದ್ರದಾಚೆ ಹಾರಿದ್ದ ವಸ್ತುಗಳು ಪುನಃ ತಾಯ್ನಾಡಿಗೆ ಮರಳುತ್ತಿವೆ.

English summary
A Honolulu museum has returned to American authorities seven rare antiquities believed to have been stolen from India and smuggled into the US by notorious art dealer Subhash Kapoor. The Honolulu Museum of Art handed over the seven antiquities to personnel from the US Immigration and Customs Enforcement's (ICE) Homeland Security Investigations (HSI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X