ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಯುಎಸ್ ಸೇನೆ ಹೆಚ್ಚಿಸುವ ಎಚ್ಚರಿಕೆ ನೀಡಿದ ಬೈಡನ್

|
Google Oneindia Kannada News

ಕಾಬೂಲ್, ಆಗಸ್ಟ್ 15: ಅಫ್ಘಾನಿಸ್ತಾನದಿಂದ ಯುಎಸ್ ಸೇನೆಯನ್ನು ವಾಪಸ್ ಕರೆಸಿಕೊಂಡ ತಮ್ಮ ನಿರ್ಧಾರವನ್ನು ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. ತಾಲಿಬಾನ್ ಹಿಡಿತ ಸಾಧಿಸುತ್ತಿರುವ ಅಫ್ಘಾನ್ ಪ್ರದೇಶದಿಂದ ತಮ್ಮ ನಾಗರಿಕರನ್ನು ಕರೆಸಿಕೊಳ್ಳಲು ಯುಎಸ್ ಸೇನೆಯನ್ನು ಕಳುಹಿಸಲಾಗುತ್ತದೆ ಎಂದಿದ್ದಾರೆ. ಈ ಸ್ಥಳಾಂತರ ಪ್ರಕ್ರಿಯೆ ಸಂದರ್ಭದಲ್ಲಿ ಅಡ್ಡಿಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಾಲಿಬಾನ್ ಸಂಘಟನೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಪಡೆ ಜೊತೆಗಿನ ಸಭೆ ನಂತರದಲ್ಲಿ ಅವರು ಮಾತನಾಡಿದ್ದಾರೆ. ಅಫ್ಘಾನಿಸ್ತಾನದ ಜೊತೆಗೆ ಮಾಡಿಕೊಂಡ 20 ವರ್ಷಗಳ ಒಪ್ಪಂದ ಅಂತ್ಯಗೊಂಡ ಹಿನ್ನೆಲೆ ಆ ದೇಶದಲ್ಲಿರುವ ತಮ್ಮವರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. "ಸ್ಥಳಾಂತರ ಪ್ರಕ್ರಿಯೆ ನಡೆಸುವುದಕ್ಕೆ 3,000 ದಿಂದ ಸುಮಾರು 5,000 ಭದ್ರಾತ ಸಿಬ್ಬಂದಿಯನ್ನು ರವಾನಿಸಲಾಗಿದೆ. ಅಲ್ಲಿ ಯುಎಸ್ ಸೇನಾ ಕಾರ್ಯಾಚರಣೆಗೆ ಯಾವುದೇ ರೀತಿಯ ಅಡ್ಡಿ-ಆತಂಕಗಳು ಎದುರಾದಲ್ಲಿ ಯುಎಸ್ ಸೇನಾ ಪಡೆಗಳಿಂದ ಕಠಿಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ, ಎಂದು ತಾಲಿಬಾನ್ ಸಂಘಟನೆಗೆ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

ನಿಮ್ ಸಹವಾಸವೇ ಬೇಡ; ಅಫ್ಘಾನ್ ಮತ್ತು ಭಾರತದ ಭವಿಷ್ಯ ಹೀಗಿರುತ್ತಾ!?ನಿಮ್ ಸಹವಾಸವೇ ಬೇಡ; ಅಫ್ಘಾನ್ ಮತ್ತು ಭಾರತದ ಭವಿಷ್ಯ ಹೀಗಿರುತ್ತಾ!?

ಉತ್ತರದ ಪ್ರಮುಖ ನಗರ ಮಜರ್-ಐ-ಶರೀಫ್ ಅನ್ನು ತಾಲಿಬಾನ್ ಸಂಘಟನೆಯು ಸ್ವಾಧೀನಪಡಿಸಿಕೊಂಡಿದೆ. ಇದರ ಬೆನ್ನಲ್ಲೇ ಕಾಬೂಲ್ ಕಡೆ ತಾಲಿಬಾನ್ ಮುಖ ಮಾಡುತ್ತಿರುವುದರ ಹಿನ್ನೆಲೆ ಯುಎಸ್ ಅಧ್ಯಕ್ಷ ಜೋ ಬೈಡನ್ ಈ ಘೋಷಣೆ ಹೊರಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ವಾಧೀನ ಪ್ರಕ್ರಿಯೆ, ಯುೆಸ್ ಅಧ್ಯಕ್ಷರು ನೀಡಿದ ಎಚ್ಚರಿಕೆ ಸಂದೇಶಗಳ ನಡುವೆ ದೇಶದಲ್ಲಿ ಎಂಥಾ ಸನ್ನಿವೇಶ ನಿರ್ಮಾಣವಾಗಿದೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಹಿಂಸಾಚಾರಕ್ಕೆ ಅವಕಾಶ ನೀಡದಿರಲು ಅಶ್ರಫ್ ಘನಿ ಶಪಥ

ಹಿಂಸಾಚಾರಕ್ಕೆ ಅವಕಾಶ ನೀಡದಿರಲು ಅಶ್ರಫ್ ಘನಿ ಶಪಥ

ಅಫ್ಘಾನಿನ್ತಾನದಲ್ಲಿ ಜನರ ಮೇಲೆ ಯುದ್ಧವನ್ನು ಹೇರುವುದರಿಂದ ಸಾವು-ನೋವು ಮತ್ತು ಹಿಂಸಾಚಾಗಳು ಹೆಚ್ಚಾಗುತ್ತವೆ. ಯುದ್ಧವನ್ನು ಇಲ್ಲಿಗೆ ನಿಲ್ಲಿಸುವುದರ ಬಗ್ಗೆ ಅಧ್ಯಕ್ಷ ಅಶ್ರಫ್ ಘನಿ ಮಾತನಾಡಿದ್ದಾರೆ. ಆದರೆ ಈ ಕುರಿತು ಯಾವುದೇ ರೀತಿ ಮಾಹಿತಿಯನ್ನು ನೀಡಲಿಲ್ಲ. ಬೈಡೆನ್ ಜೊತೆ ಸಮಾಲೋಚನೆ ನಡೆಸಿದ ತಂಡದಲ್ಲಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಶನಿವಾರ ಘಾನಿ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಹಿಂಸಾಚಾರವನ್ನು ತಗ್ಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಮತ್ತು ತುರ್ತು ರಾಜಕೀಯ ಪ್ರಯತ್ನಗಳ ಕುರಿತು ಚರ್ಚಿಸಿದರು" ಎಂದು ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಕಾಬೂಲ್‌ಗೆ ಯುಎಸ್ ಸೇನಾ ಸಿಬ್ಬಂದಿ ರವಾನೆ

ಕಾಬೂಲ್‌ಗೆ ಯುಎಸ್ ಸೇನಾ ಸಿಬ್ಬಂದಿ ರವಾನೆ

ಕಾಬೂಲ್‌ನಲ್ಲಿ ತಾಲಿಬಾನ್‌ನ ಮೆರವಣಿಗೆಯಲ್ಲಿ ಬ್ಲಿಂಕನ್ "ಪ್ರಮುಖ ಪ್ರಾದೇಶಿಕ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವ" ನಿರೀಕ್ಷೆಯಿದೆ ಎಂದು ಬೈಡೆನ್ ಹೇಳಿದ್ದಾರೆ. ಇದಕ್ಕೂ ಮೊದಲು ಯುಎಸ್ ಕೇಂದ್ರ ಸೇನೆಯು, ಅಫ್ಘಾನಿಸ್ತಾನದಲ್ಲಿ ಇರುವ ಅಮೆರಿಕದ ರಾಯಭಾರ ಕಚೇರಿ ಉದ್ಯೋಗಿಗಳು ಮತ್ತು ಯುಎಸ್ ಪಡೆಗಳಿಗಾಗಿ ಕೆಲಸ ಮಾಡುತ್ತಿರುವ ಜನರು ಹಾಗೂ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದಕ್ಕಾಗಿ ಅಮೆರಿಕಾದಿಂದ ಹೆಚ್ಚುವರಿ ಸೇನೆಯನ್ನು ಕಾಬೂಲ್‌ಗೆ ಕಳುಹಿಸಲಾಗುವುದು ಎಂದು ಬೈಡನ್ ಹೇಳಿದ್ದರು.

16 ದಿನಗಳಲ್ಲೇ 30 ಸಾವಿನ ಜನರ ಸ್ಥಳಾಂತರ ಗುರಿ

16 ದಿನಗಳಲ್ಲೇ 30 ಸಾವಿನ ಜನರ ಸ್ಥಳಾಂತರ ಗುರಿ

ಇದೇ ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಿಂದ ಸುಮಾರು 30,000 ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಸುವುದಕ್ಕೆ ಅಧ್ಯಕ್ಷ ಜೋ ಬೈಡನ್ ಗಡುವು ನೀಡಿದ್ದರು ಎಂದು ಪೆಂಟಗಾನ್ ಅಂದಾಜಿಸಿದೆ. ಅಫ್ಘಾನಿಸ್ತಾನದಿಂದ ಸೈನ್ಯವನ್ನು ವಾಪಸ್ ಕರೆಸಿಕೊಂಡ ಬೈಡೆನ್ ನಿರ್ಧಾರವು ದೇಶದ ಸಶಸ್ತ್ರ ಪಡೆಗಳ ಸ್ಫೋಟಕ್ಕೆ ಕಾರಣವಾಗಿದ್ದು, ಹೆಚ್ಚಿನ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಈ ವೇಳೆ ತಮಗೆ ಬೇರೆ ದಾರಿ ಇರಲಿಲ್ಲ ಎಂದು ಬೈಡನ್ ಹೇಳಿದ್ದು, ಕೆಲವು ಆರೋಪಗಳಿಗೆ ಹಿಂದಿನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಣೆ ಎಂದಿದ್ದಾರೆ.

ಎರಡು ಆಯ್ಕೆಗಳ ಎದುರಿಗೆ ನಿಂತ ಜೋ ಬೈಡನ್

ಎರಡು ಆಯ್ಕೆಗಳ ಎದುರಿಗೆ ನಿಂತ ಜೋ ಬೈಡನ್

"ನಾನು ಕಛೇರಿಗೆ ಬಂದಾಗ, ನನ್ನ ಹಿಂದಿನವರಿಂದ ಆಗಿರುವ ಒಪ್ಪಂದವನ್ನು ಕಡಿತಗೊಳಿಸಿದ್ದೇನೆ. ಅದು 2001 ರಿಂದ ತಾಲಿಬಾನ್ ಅನ್ನು ಮಿಲಿಟರಿಯು ಪ್ರಬಲ ಸ್ಥಾನದಲ್ಲಿರಿಸಿತು ಮತ್ತು ಮೇ 1, 2021ರಂದು ಯುಎಸ್ ಪಡೆಗಳ ಮೇಲೆ ಗಡುವು ವಿಧಿಸಿತ್ತು" ಎಂದು ಬಿಡೆನ್ ಹೇಳಿದ್ದಾರೆ. ಈ ಮೊದಲು ನಾನು ಅಧಿಕಾರಕ್ಕೆ ಏರಿದ ಸಂದರ್ಭದಲ್ಲಿ ನನ್ನ ಎದುರಿಗೆ ಎರಡು ಆಯ್ಕೆಗಳಿದ್ದವು. ಒಂದು ನಮ್ಮ ಒಪ್ಪಂದವನ್ನು ಮುಂದುವರಿಸಬೇಕಿತ್ತು. ಮಿತ್ರರಾಷ್ಟ್ರದೊಂದಿಗಿನ ನಮ್ಮ ಸೇನಾ ಪಡೆಯನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವುದು ಅಥವಾ ಅಲ್ಲಿ ನಮ್ಮ ಉಪಸ್ಥಿತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕಾದಿಂದ ಹೆಚ್ಚುವರಿ ಸೇನೆಯನ್ನು ರವಾನಿಸಿ ಬಿಕ್ಕಟ್ಟು ನಿವಾರಣೆಗಾಗಿ ಹೋರಾಟ ನಡೆಸಬೇಕಿತ್ತು," ಎಂದು ಜೋ ಬೈಡನ್ ಹೇಳಿದ್ದಾರೆ.

ನಾನು ಯುದ್ಧವನ್ನು ಪ್ರೇರೇಪಿಸುವುದಿಲ್ಲ ಎಂದ ಬೈಡನ್

ನಾನು ಯುದ್ಧವನ್ನು ಪ್ರೇರೇಪಿಸುವುದಿಲ್ಲ ಎಂದ ಬೈಡನ್

"ನಾನು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೈನ್ಯದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಾಲ್ಕನೇ ಅಧ್ಯಕ್ಷನಾಗಿದ್ದೇನೆ. ಇಬ್ಬರು ರಿಪಬ್ಲಿಕನ್ನರು, ಇಬ್ಬರು ಡೆಮೋಕ್ರಾಟ್‌ಗಳಿದ್ದರು. ಈಗ ನಾನು ಐದನೇ ಹಂತಕ್ಕೆ ಈ ಯುದ್ಧವನ್ನು ಮುಂದುವರಿಸುವುದಕ್ಕೆ ಬಯಸುವುದಿಲ್ಲ," ಎಂದು ಬಿಡೆನ್ ಹೇಳಿದ್ದಾರೆ.

English summary
US President Joe Biden warns to Taliban; Why increased the US Army Deployment in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X