ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಗಡಿಯ ಜೆಸ್ಜೋವ್ ನಗರಕ್ಕೆ ಯುಎಸ್ ಅಧ್ಯಕ್ಷ ಜೋ ಬೈಡನ್ ಭೇಟಿ

|
Google Oneindia Kannada News

ವಾಶಿಂಗ್ಟನ್, ಮಾರ್ಚ್ 25: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳ ಒಗ್ಗಟ್ಟಿನ ಸಂಕಲ್ಪವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಮಧ್ಯೆ ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಪೊಲೆಂಡ್ ರಾಷ್ಟ್ರದ ಪೋಲಿಶ್ ಪಟ್ಟಣಕ್ಕೆ ಶುಕ್ರವಾರ ಜೋ ಬೈಡನ್ ಭೇಟಿ ನೀಡಲಿದ್ದಾರೆ. ಉಕ್ರೇನ್ ಗಡಿಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಜೆಸ್ಜೋವ್‌ನಲ್ಲಿ ಪೋಲಿಷ್ ಅಧ್ಯಕ್ಷ ಆಂಡ್ರೆಜ್ ಡುಡಾ ಯುಎಸ್ ಅಧ್ಯಕ್ಷ ಜೋ ಬೈಡನ್ ರನ್ನು ಸ್ವಾಗತಿಸಲಿದ್ದಾರೆ ಎಂದು ಶ್ವೇತಭವನ ತನ್ನ ಅಧ್ಯಕ್ಷರ ಪ್ರಯಾಣದ ಯೋಜನೆ ಕುರಿತು ಹೇಳಿಕೆಯಲ್ಲಿ ತಿಳಿಸಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ಯೋಜನೆ ಕುರಿತಾಗಿ ಈವರೆಗೂ ಯಾವುದೇ ಮಾಹಿತಿಯನ್ನು ಬಹಿರಂಗವಾಗಿ ತಿಳಿಸಿರಲಿಲ್ಲ. ಬ್ರಸೆಲ್ಸ್‌ನಲ್ಲಿನ ಶೃಂಗಸಭೆ ಹಾಗೂ ನ್ಯಾಟೋ ಸಭೆಯ ಬಳಿಕ ಎರಡನೇ ಬಾರಿ ಅಧ್ಯಕ್ಷರ ಪ್ರವಾಸದ ಬಗ್ಗೆ ಶ್ವೇತಭವನ ಹೇಳಿದೆ.

ನ್ಯಾಟೋ ಸಭೆ ಬೆನ್ನಲ್ಲೇ ಚೀನಾಗೆ ವಾರ್ನಿಂಗ್ ಕೊಟ್ಟ ಬೈಡನ್!ನ್ಯಾಟೋ ಸಭೆ ಬೆನ್ನಲ್ಲೇ ಚೀನಾಗೆ ವಾರ್ನಿಂಗ್ ಕೊಟ್ಟ ಬೈಡನ್!

ನ್ಯಾಟೋ ಪೂರ್ವ ರಾಷ್ಟ್ರಗಳಿಗೆ ಯುಎಸ್ ಬೆಂಬಲ:

ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು NATO ಪೂರ್ವ ದೇಶಗಳಿಗೆ ಅಮೆರಿಕಾದ ಬೆಂಬಲವನ್ನು ಸೂಚಿಸಲು ಮಾರ್ಚ್ 5ರಂದು ಪೋಲೆಂಡ್‌ಗೆ ಭೇಟಿ ನೀಡಿದಾಗ ಜೆಸ್ಜೋವ್‌ನಲ್ಲಿ ಉಳಿದುಕೊಂಡಿದ್ದರು. ಪಶ್ಚಿಮ ಉಕ್ರೇನ್ ದಾಳಿಯ ನಂತರದಲ್ಲಿ ರಷ್ಯಾದ ಮುಂದಿನ ನಡೆ ಏನಾಗಿರಬಹುದು ಎಂಬುದು ಸೋವಿಯತ್ ಪ್ರಭಾವವನ್ನು ಹೊಂದಿರುವ ರಾಷ್ಟ್ರಗಳ ಗೋಳಾಗಿದೆ. ರಷ್ಯಾದ ಶೆಲ್ ದಾಳಿ ಮತ್ತು ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಲಕ್ಷಾಂತರ ಉಕ್ರೇನಿಯನ್ನರು ಪೋಲೆಂಡ್‌ಗೆ ಓಡಿ ಹೋಗಿದ್ದಾರೆ. ಉಕ್ರೇನ್ ನೆಲದಿಂದ ಪೋಲೆಂಡ್‌ಗೆ ಆಗಮಿಸಿದ ಜನರನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದರ ಕುರಿತು ಬೈಡನ್ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

US President Joe Biden To Visit to Ukraine border city Polish town on friday

ಉಕ್ರೇನ್‌ ಬತ್ತಳಿಕೆಗೆ ನ್ಯಾಟೋ ಅಸ್ತ್ರ:

Recommended Video

Sarah ಮತ್ತು Ravindra Jadeja ಖಾಸಗಿ ಸಂದೇಶಗಳು ಜಗಜ್ಜಾಹೀರು!!ಏನಿತ್ತು | Oneindia Kannada

ರಷ್ಯಾದ ಆಕ್ರಮಣಕ್ಕೆ ಪ್ರತ್ಯುತ್ತರವಾಗಿ ಉಕ್ರೇನ್‌ ಪರವಾಗಿ ನ್ಯಾಟೋ ಎಲ್ಲಾ ರಕ್ಷಣಾ ಯೋಜನೆಗಳನ್ನು ಸಕ್ರಿಯಗೊಳಿಸಿದೆ ಎಂದು ನ್ಯಾಟೋ ಹೇಳಿಕೆಯಲ್ಲಿ ತಿಳಿಸಿದೆ. "40,000 ಪಡೆಗಳನ್ನು ಪೂರ್ವದಲ್ಲಿ ನಿಯೋಜನೆ ಮಾಡಲಾಗಿದೆ. ಮಿತ್ರ ರಾಷ್ಟ್ರಗಳೆಲ್ಲವೂ ಸಹಾಯ ಮಾಡಲಿದೆ. ನಾವು ಬಲ್ಗೇರಿಯಾ, ಹಂಗೇರಿ, ರೊಮೇನಿಯಾ ಮತ್ತು ಸ್ಲೋವಾಕಿಯಾದಲ್ಲಿ ನಾಲ್ಕು ಹೆಚ್ಚುವರಿ ಯುದ್ಧ ಪಡೆಯನ್ನು ನಿಯೋಜನೆ ಮಾಡುತ್ತೇವೆ. ಮಿತ್ರರಾಷ್ಟ್ರಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅಣು ಬಾಂಬ್ ಅನ್ನು ಎದುರಿಸಲು ಬೇಕಾದ ರಕ್ಷಣಾತ್ಮಕ ಕ್ರಮವನ್ನು ಕೂಡಾ ಕೈಗೊಳ್ಳಲಾಗುವುದು. ಸೈಬರ್ ದಾಳಿಯ ಸಂದರ್ಭದಲ್ಲಿ ಪರಸ್ಪರ ಬೆಂಬಲ ಒದಗಿಸುತ್ತೇವೆ. ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ನ್ಯಾಟೋ ಹೇಳಿದೆ.

English summary
US President Joe Biden To Visit to Ukraine border city Polish town on friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X