ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧುರಾಷ್ಟ್ರಗಳಿಗೆ ಲಸಿಕೆ ಕಳುಹಿಸಲು ಅಮೆರಿಕಾ ಹೊಸ ಯೋಜನೆ

|
Google Oneindia Kannada News

ನವದೆಹಲಿ, ಜೂನ್ 04: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ನೆರೆಯ ಹಾಗೂ ಪಾಲುದಾರ ರಾಷ್ಟ್ರಗಳಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಡೋ ಬೈಡನ್ ಜಾಗತಿಕ ಲಸಿಕೆ ಹಂಚಿಕೆ ಯೋಜನೆಯನ್ನು ಪ್ರಕಟಿಸಿದ್ದಾರೆ.

ಕೊವಿಡ್-19 ಲಸಿಕೆಗೆ ಸಂಬಂಧಿಸಿದಂತೆ ಯುಎಸ್ಎ ಘೋಷಿಸಿದ ಜಾಗತಿಕ ಹಂಚಿಕೆ ಯೋಜನೆಯಲ್ಲಿ ಭಾರತವೂ ಪಾಲುದಾರ ರಾಷ್ಟ್ರವಾಗಿದೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ಲಸಿಕೆ; ಭಾರತದ ಸಾಮರ್ಥ್ಯದ ಬಗ್ಗೆ ಅಮೆರಿಕ ಮೆಚ್ಚುಗೆ ಮಾತುಕೊರೊನಾ ಲಸಿಕೆ; ಭಾರತದ ಸಾಮರ್ಥ್ಯದ ಬಗ್ಗೆ ಅಮೆರಿಕ ಮೆಚ್ಚುಗೆ ಮಾತು

ಎಎನ್ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಯುಎಸ್ಎ ಇತ್ತೀಚಿಗೆ 8 ಕೋಟಿ ಕೊರೊನಾವೈರಸ್ ಲಸಿಕೆ ಹಂಚಿಕೆ ಘೋಷಣೆಯನ್ನು ಹೊರಡಿಸಿತ್ತು. ಈ ಪೈಕಿ ಮೊದಲ ಹಂತದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ 2.50 ಕೋಟಿ ಡೋಸ್ ಲಸಿಕೆಯನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಸಂಧು ಹೇಳಿದ್ದಾರೆ.

US President Biden Announces Global Allocation Plan of 25 Million Coronavirus Vaccines

ಎರಡು ಹಂತಗಳಲ್ಲಿ ಲಸಿಕೆ ಹಂಚಿಕೆ:

ಜಾಗತಿಕ ಹಂಚಿಕೆ ಯೋಜನೆ ಅಡಿ ಎರಡು ಹಂತಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು, ಎರಡೂ ಹಂತಗಳಲ್ಲೂ ಭಾರತಕ್ಕೆ ಲಸಿಕೆಯು ರವಾನೆಯಾಗಲಿದೆ. ಮೊದಲ ಹಂತದಲ್ಲಿ ಕೊವ್ಯಾಕ್ಸ್ ಮೂಲಕ ಏಷ್ಯಾ ರಾಷ್ಟ್ರಗಳಿಗೆ ಮತ್ತು ಎರಡನೇ ಹಂತದಲ್ಲಿ ನೇರವಾಗಿ ಪಾಲದಾರ ದೇಶಗಳಾದ ಭಾರತ, ಕೊರಿಯಾ, ಕೆನಡಾ ಮತ್ತು ಮೆಕ್ಸಿಕೋಗೆ ಲಸಿಕೆ ಕಳುಹಿಸಲಾಗುತ್ತದೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಸ್ಪಷ್ಟನೆ ನೀಡಿದ್ದಾರೆ.

English summary
US President Biden Announces Global Allocation Plan of 25 Million Coronavirus Vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X