ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಬರಾಕ್ ಒಬಾಮ

By Prithviraj
|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್, 31: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನ ಓವಲ್ ಕಚೇರಿಯಲ್ಲಿ ದೀಪ ಬೆಳಗಿಸಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿ ಸಂಭ್ರಮಪಟ್ಟರು.

ಮುಂದೆ ಬರುವ ಅಧ್ಯಕ್ಷರೂ ಸಹ ಇದೇ ರೀತಿ ದೀಪಾವಳಿಯನ್ನು ಆಚರಿಸುತ್ತಾರೆ ಎಂಬ ಆಶಯ ನನಗೆ ಇದೆ ಎಂದು ಅವರು ಹೇಳಿದರು. ಒಬಾಮ ಅವರು ಪ್ರಥಮ ಬಾರಿಗೆ 2009ರಲ್ಲಿಯೂ ಸಹ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಿದ್ದರು.

ಪ್ರಥಮ ಬಾರಿಗೆ ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿದ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಹೆಮ್ಮೆ ನನಗಿದೆ. ಮುಂಬೈ ಭೇಟಿಯ ವೇಳೆಯ ದೀಪಾವಳಿ ಆಚರಿಸಿದ ಸಂದರ್ಭವನ್ನು ಒಬಾಮಾ ಅವರು ಸ್ಮರಿಸಿದರು. ಭಾರತೀಯರು ಅಂದು ತೋರಿದ ಪ್ರೀತಿ ಮತ್ತು ಆತ್ಮೀಯತೆಯನ್ನು ನೆನೆದು ಸಂತಸ ವ್ಯಕ್ತಪಡಿಸಿದರು.

ಓವಲ್ ಕಚೇರಿಯಲ್ಲಿ ಬೆಳಗಿರುವ ದೀಪ ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಸ್ವಾಗಿತಿಸುತ್ತಿದೆ ಎಂದು ಹೇಳಿದರು. ಅಷ್ಟೇ ಅಲ್ಲದೇ ದೀಪಾವಳಿ ಆಚರಿಸುತ್ತಿರುವ ಚಿತ್ರವೊಂದನ್ನು ಅವರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು, ಅದು ಈಗ ವೈರಲ್ ಆಗಿದೆ.

ಒಂದೇ ದಿನದಲ್ಲಿ 1.5ಲಕ್ಷಕ್ಕೂ ಹೆಚ್ಚು ಮಂದಿ ಚಿತ್ರಕ್ಕೆ ಲೈಕ್ ಕೊಟ್ಟಿದ್ದು, 33 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಒಬಾಮ ಕುಟುಂಬದ ಪರವಾಗಿ ಎಲ್ಲರಿಗೂ ದೀಪಾವಳಿ ಶುಭಾಶಯ ತಿಳಿಸುತ್ತೇನೆ ಎಂದು ಒಬಾಮ ಅವರು ಹೇಳಿದ್ದಾರೆ.

ಇನ್ನುಳಿದಂತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಹಾಗು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರೂ ಸಹ ದೀಪಾವಳಿ ಶುಭಾಶಯ ಕೋರಿದ್ದಾರೆ.

ಪಟಾಕಿ ಸಿಡಿಸಿ ಸಂಭ್ರಮಿಸಿದ ಭಾರತ ಮೂಲದ ಮಹಿಳೆಯರು

ಪಟಾಕಿ ಸಿಡಿಸಿ ಸಂಭ್ರಮಿಸಿದ ಭಾರತ ಮೂಲದ ಮಹಿಳೆಯರು

ಭಾರತ ಮೂಲದ ಮಹಿಳೆಯೊಬ್ಬರು ನ್ಯೂಜೆರ್ಸಿಯಲ್ಲಿ ಭಾನುವಾರ ರಾತ್ರಿ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದರು. ಅಮೆರಿಕದ ರಸ್ತೆಗಳಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲದಿದ್ದರೂ, ಪೊಲೀಸರ ಸುಪರ್ದಿಯಲ್ಲಿ ಶಾಂತಿಯುತವಾಗಿ ದೀಪಾವಳಿ ಆಚರಿಸಲಾಯಿತು.

ಭಾರತೀಯರಿಂದ ಸಂಭ್ರಮದ ದೀಪಾವಳಿ ಆಚರಣೆ

ಭಾರತೀಯರಿಂದ ಸಂಭ್ರಮದ ದೀಪಾವಳಿ ಆಚರಣೆ

ಅಮೆರಿಕದ ನ್ಯೂಜೆರ್ಸೆಯಲ್ಲಿರುವ ಪಟೇಲ್ ಪಾನ್ ಶಾಪ್ ಎದುರಿಗೆ ಭಾರತದ ಪ್ರಜೆಗಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು. ಪೊಲೀಸ್ ಇಲಾಖೆ ದೀಪಾವಳಿ ಆಚರಣೆಗೆ ಅವಕಾಶ ಕಲ್ಪಿಸಿತು

ನ್ಯೂಜೆರ್ಸೆ ರಸ್ತೆಯಲ್ಲಿ ದೀಪಾವಳಿ ಬೆಳಕು

ನ್ಯೂಜೆರ್ಸೆ ರಸ್ತೆಯಲ್ಲಿ ದೀಪಾವಳಿ ಬೆಳಕು

ಅಮೆರಿಕದ ನ್ಯೂಜೆರ್ಸಿಯ ರಸ್ತೆಯೊಂದರಲ್ಲಿ ಭಾರತದ ಪ್ರಜೆಗಳು ಪಟಾಕಿಸಿಡಿಸಿ ರಸ್ತೆ ತುಂಬೆಲ್ಲಾ ಬೆಳಕನ್ನು ಮೂಡಿಸಿ ಸಂಭ್ರಮದಿಂದ ದೀಪಾವಳಿ ಆಚರಿಸಿದರು. ಸ್ಥಳೀಯ ಪ್ರಜೆಗಳಿಗೂ ದೀಪಾವಳಿ ಸಂಭ್ರಮವನ್ನು ಕಂಡು ಸಂತೋಷಪಟ್ಟರು

English summary
US President Barack Obama has celebrated Diwali by lighting the first-ever diya in the Oval Office of the White House and hoped that his successors would continue the tradition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X