ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾ ಅಣ್ವಸ್ತ್ರ ಧಮ್ಕಿ ನಡುವೆ ಜಪಾನ್‌ಗೆ ಬಂದಿಳಿದ ಬೈಡನ್

|
Google Oneindia Kannada News

ಟೋಕಿಯೋ, ಮೇ 22: ಅಮೆರಿಕ ಅಧ್ಯಕ್ಷ ಜೋ ಬೈಡನ್ ದಕ್ಷಿಣ ಕೊರಿಯಾದಿಂದ ಹೊರಟು ಇಂದು ಭಾನುವಾರ ಜಪಾನ್ ದೇಶಕ್ಕೆ ಆಗಮಿಸಿದ್ದಾರೆ. ಜೋ ಬೈಡನ್ ಅವರಿಗೆ ಇದು ಮೊದಲ ಏಷ್ಯನ್ ಪ್ರವಾಸವಾಗಿದೆ. ಮಂಗಳವಾರದವರೆಗೂ ಜಪಾನ್‌ನಲ್ಲಿ ಇರುವ ಅವರಿಗೆ, ಕ್ವಾಡ್ ಸಭೆ, ಉತ್ತರ ಕೊರಿಯಾ ಬೆದರಿಕೆ ವಿಚಾರಗಳೇ ಪ್ರಮುಖ ಅಜೆಂಡಾ ಆಗಿವೆ.

ನಾಳೆ ಸೋಮವಾರ ಅಮೆರಿಕ ಅಧ್ಯಕ್ಷರು ಜಪಾನ್‌ನ ದೊರೆ ನರುಹಿಟೋ ಮತ್ತು ಪ್ರಧಾನಿ ಫೂಮಿಯೋ ಕಿಶಿದಾ ಅವರನ್ನು ಭೇಟಿ ಮಾಡಲಿದ್ದಾರೆ. ಅಮೆರಿಕ ನೇತೃತ್ವದಲ್ಲಿ ರೂಪಿಸಲಾಗಿರುವ ಬಹುಪಕ್ಷೀಯ ವ್ಯಾಪಾರ ಯೋಜನೆಯನ್ನು ಇದೇ ಸಂದರ್ಭದಲ್ಲಿ ಬೈಡನ್ ಅನಾವರಣಗೊಳಿಸಲಿದ್ದಾರೆ.

ಪಾಂಗೋಂಗ್ ತ್ಸೋ ಮೇಲೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಭಾರತಕ್ಕೆ ಎಷ್ಟು ಅಪಾಯಕಾರಿ? ಪಾಂಗೋಂಗ್ ತ್ಸೋ ಮೇಲೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಭಾರತಕ್ಕೆ ಎಷ್ಟು ಅಪಾಯಕಾರಿ?

ಮಂಗಳವಾರದಂದು ಮಹತ್ವದ ಕ್ವಾಡ್ ಕೂಟದ ಶೃಂಗ ಸಭೆ ನಡೆಯಲಿದೆ. ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ದೇಶಗಳ ನಾಯಕರ ಜೊತೆ ಬೈಡನ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಯೂ ಅಮೆರಿಕ ಅಧ್ಯಕ್ಷರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಅಮೇರಿಕ ಅಧ್ಯಕ್ಷ ಬೈಡನ್‌ ಕಚೇರಿಗೆ ಮಾವು ರಫ್ತು: ಯಾವ ರಾಜ್ಯದ ಮಾವಿನ ಹಣ್ಣುಗಳು?ಅಮೇರಿಕ ಅಧ್ಯಕ್ಷ ಬೈಡನ್‌ ಕಚೇರಿಗೆ ಮಾವು ರಫ್ತು: ಯಾವ ರಾಜ್ಯದ ಮಾವಿನ ಹಣ್ಣುಗಳು?

ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಸಾಧಿಸುತ್ತಿರುವ ಪ್ರಾಬಲ್ಯವನ್ನು ಕುಗ್ಗಿಸಲೆಂದು ಅಮೆರಿಕ ನೇತೃತ್ವದಲ್ಲಿ ಕ್ವಾಡ್ ಗುಂಪು ಮಾಡಲಾಗಿದೆ. ಸದ್ಯ ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ಸ್ಥಿತಿ ತೀವ್ರಮಟ್ಟಕ್ಕೆ ಏರುತ್ತಿದ್ದು ಅಲ್ಲಿ ಬಹಳಷ್ಟು ಕಡೆ ಲಾಕ್ ಡೌನ್ ಕ್ರಮ ಮಾಡಲಾಗಿದೆ. ಇದರಿಂದ ಚೀನಾ ಆರ್ಥಿಕ ಪರಿಸ್ಥಿತಿ ಕಳೆಗುಂದುತ್ತಿದೆ. ಇದೇ ಸಂದರ್ಭದಲ್ಲಿ ಕ್ವಾಡ್ ಸಭೆ ನಡೆಯುತ್ತಿದೆ.

ಉ. ಕೊರಿಯಾ ಅಣ್ವಸ್ತ್ರ ಕೀಟಲೆ

ಉ. ಕೊರಿಯಾ ಅಣ್ವಸ್ತ್ರ ಕೀಟಲೆ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮುಜುಗರ ತರುವ ವಿಚಾರ ಎಂದರೆ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ನಡೆಸಲು ಹೊರಟಿರುವುದು. ಪರಮಾಣು ಶಕ್ತ ಕ್ಷಿಪಣಿ ಅಥವಾ ಬಾಂಬ್ ಅನ್ನು ಉತ್ತರ ಕೊರಿಯಾ ಪರೀಕ್ಷಿಸಲು ಹೊರಟಿದೆ. ಬೈಡನ್ ದಕ್ಷಿಣ ಕೊರಿಯಾದಲ್ಲಿ ಇದ್ದಾಗಲೇ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ನಡೆಸಲು ಹೊರಟಿತ್ತು. ಆದರೆ, ಕೋವಿಡ್ ಬಿಕ್ಕಟ್ಟಿನಿಂದಾಗಿ ಬಹುಶಃ ಪರೀಕ್ಷೆ ಮುಂದಕ್ಕೆ ಹಾಕಿರುವ ಸಾಧ್ಯತೆ ಇದೆ.

ಉ.ಕೊರಿಯಾ ಹೆಜ್ಜೆಗೆ ಅಮೆರಿಕ ಪ್ರತಿಹೆಜ್ಜೆ

ಉ.ಕೊರಿಯಾ ಹೆಜ್ಜೆಗೆ ಅಮೆರಿಕ ಪ್ರತಿಹೆಜ್ಜೆ

ಉತ್ತರ ಕೊರಿಯಾದ ಹುಚ್ಚು ದೊರೆ ಎಂದು ಕುಖ್ಯಾತನಾಗಿರುವ ಕಿಮ್ ಜೋಂಗ್-ಉನ್ ಏನು ಬೇಕಾದರೂ ಮಾಡುವ ಹುಚ್ಚು ಧೈರ್ಯ ಹೊಂದಿರುವ ವ್ಯಕ್ತಿ. ಅಮೆರಿಕವೇ ಆಗಲಿ ಯಾವ ದೇಶವೇ ಆಗಲಿ ಏನೇ ಬೆದರಿಕೆ ಹಾಕಿದರೂ, ಏನೇ ದಿಗ್ಬಂಧನ ಹಾಕಿದರೂ ಲೆಕ್ಕಕ್ಕೇ ತೆಗೆದುಕೊಳ್ಳದ ವ್ಯಕ್ತಿ. ಇದು ಅಮೆರಿಕಕ್ಕೂ ಗೊತ್ತು. ಹೀಗಾಗಿ, ಉತ್ತರ ಕೊರಿಯಾ ಏನೇ ಹೆಜ್ಜೆ ಇಟ್ಟರೂ ಅದಕ್ಕೆ ಹೇಗೆ ಪ್ರತಿಕ್ರಿಯೆ ಕೊಡಬೇಕೆಂದು ಅಮೆರಿಕ ಯೋಜಿಸಿ ಕೂತಿದೆ.

"ಉತ್ತರ ಕೊರಿಯಾ ಒಂದಡಿ ಇಟ್ಟರೆ ಪ್ರತಿಕ್ರಿಯೆಗೆ ನಾವು ಸಜ್ಜಾಗಿದ್ದೇವೆ. ಅದು ಮುಂದಡಿ ಇಡದಿದ್ದರೆ ಮಾತುಕತೆಗೆ ಕೂರುವ ಅವಕಾಶವಂತೂ ಉತ್ತರ ಕೊರಿಯಾಗೆ ಇದೆ" ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲೈವಾನ್ ಹೇಳುತ್ತಾರೆ.

ಉತ್ತರ ಕೊರಿಯಾ ಅಣ್ವಸ್ತ್ರ ಸಹವಾಸಕ್ಕೆ ಹೋಗದಿರಲೆಂದು ಮನವೊಲಿಸಲು ಅಮೆರಿಕ ಕೆಲವೊಂದಿಷ್ಟು ಪ್ರಯತ್ನಗಳನ್ನಂತೂ ಮಾಡುತ್ತಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡುವುದಾಗಿ ಹೇಳಿದೆ. ಆದರೆ, ಇದ್ಯಾವುದಕ್ಕೂ ಬಗ್ಗದ ಉತ್ತರ ಕೊರಿಯಾ ಅಮೆರಿಕದ ಜೊತೆ ಮಾತುಕತೆಗೆ ಕೂರಲು ಸುತಾರಾಂ ಒಪ್ಪುತ್ತಿಲ್ಲ. ಇದು ಗೊತ್ತಿದ್ದರೂ ಅಮೆರಿಕ ತಾನು ತೆರೆದ ಮನಸ್ಸಿನಲ್ಲಿ ಇರುವುದಾಗಿ ಹೇಳಿದೆ.

ದಕ್ಷಿಣ ಕೊರಿಯಾದಲ್ಲಿ ಸಮರಾಭ್ಯಾಸ

ದಕ್ಷಿಣ ಕೊರಿಯಾದಲ್ಲಿ ಸಮರಾಭ್ಯಾಸ

ಏಷ್ಯಾದಲ್ಲಿ ಅಮೆರಿಕಕ್ಕೆ ಪ್ರಮುಖ ಮಿತ್ರರಾಷ್ಟ್ರಗಳೆಂದರೆ ಜಪಾನ್ ಮತ್ತು ದಕ್ಷಿಣ ಕೊರಿಯಾ. ಕಮ್ಯೂನಿಸ್ಟ್ ದೇಶಗಳಾದ ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾವನ್ನು ಹಣಿಯುವುದು ಅಮೆರಿಕದ ಪ್ರಮುಖ ಗುರಿ. ಹೀಗಾಗಿ, ಜಪಾನ್ ಮತ್ತು ಉತ್ತರ ಕೊರಿಯಾ ಅಮೆರಿಕಕ್ಕೆ ಮುಖ್ಯ. ಈಗ ಭಾರತವೂ ಈ ಸಾಲಿಗೆ ಸೇರಿಕೊಳ್ಳುತ್ತಿರುವಂತಿದೆ.

ಇದೇ ವೇಳೆ, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿ ಸಮರಾಭ್ಯಾಸ ನಡೆಸಲು ಸಿದ್ಧತೆ ನಡೆಸುತ್ತಿವೆ. ಇದೇ ವಿಚಾರವಾಗಿ ಸೌತ್ ಕೊರಿಯಾದಲ್ಲಿ ಜೋ ಬೈಡನ್ ಸಾಕಷ್ಟು ಚರ್ಚೆ, ಮಾತುಕತೆ ನಡೆಸಿದ್ಧಾರೆ. ಪರಮಾಣು ದಾಳಿ ಪರಿಸ್ಥಿತಿ ಬಂದಾಗ ಅದನ್ನು ಎದುರಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಅಭ್ಯಾಸ ನಡೆಸಲಿವೆ. ಅಮೆರಿಕ ಕೂಡ ಜಂಟಿ ಮಿಲಿಟರಿ ಡ್ರಿಲ್ ವಿಚಾರದಲ್ಲಿ ಗಂಭೀರವಾಗಿದೆ.

ರೊಚ್ಚಿಗೇಳುತ್ತಾ ಉತ್ತರ ಕೊರಿಯಾ?

ರೊಚ್ಚಿಗೇಳುತ್ತಾ ಉತ್ತರ ಕೊರಿಯಾ?

ಉತ್ತರ ಕೊರಿಯಾಗೆ ಅದರ ಸಹೋದರ ದೇಶವಾದ ದಕ್ಷಿಣ ಕೊರಿಯಾ ಸಾಂಪ್ರದಾಯಿಕ ಮತ್ತು ಅತಿದೊಡ್ಡ ಶತ್ರು. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ ನಡೆಸುವುದು ಉತ್ತರ ಕೊರಿಯಾವನ್ನು ಅತಿಯಾಗಿ ಕೆಣಕಿದಂತೆ. ಸಮರಾಭ್ಯಾಸವನ್ನು ಪೂರ್ಣ ಪ್ರಮಾಣದ ಆಕ್ರಮಣ ಎಂದು ಉತ್ತರ ಕೊರಿಯಾ ಭಾವಿಸುವ ಸಾಧ್ಯತೆ ಹೆಚ್ಚು. ಹೀಗಾಗಿ, ಕಿಮ್ ಜೋಂಗ್-ಉನ್ ಭಾವಾವೇಶದಲ್ಲಿ ಏನು ಬೇಕಾದರೂ ಹೆಜ್ಜೆ ಇಡುವ ಸಾಧ್ಯತೆ ಇದೆ.

(ಒನ್ಇಂಡಿಯಾ ಸುದ್ದಿ)

English summary
President Joe Biden arrived Sunday in Japan for the second leg of an Asia trip underlining US commitment to the region but overshadowed by concern that North Korea will test a nuclear weapon after ignoring Washington's attempt at outreach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X