ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ!

By Mahesh
|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 25: ಎಚ್-1ಬಿ ವೀಸಾ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲು ಡೊನಾಲ್ಡ್ ಟ್ರಂಪ್ ಸರ್ಕಾರ ಮುಂದಾಗಿದ್ದು ಉನ್ನತ ಕೌಶಲ ಹೊಂದಿರುವ, ಅಮೆರಿಕದಲ್ಲಿ ನೆಲೆಸಿರುವ ಎಚ್ 1ಬಿ ವೀಸಾ ಹೊಂದಿರುವ ಬಾಳಸಂಗಾತಿಗಳು ಅಮೆರಿಕದಲ್ಲಿ ಕೆಲಸ ಹುಡುಕುವುದು ಕಷ್ಟವಾಗಲಿದೆ.

ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವ ಸ್ಥಳಗಳಲ್ಲಿ ಭಾರತ ಸೇರಿದಂತೆ ವಿದೇಶಗಳ ನಿಪುಣ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕಂಪನಿಗಳಿಗೆ ಹೊಸ ನೀತಿಯಿಂದ ಭಾರಿ ಹೊಡೆತ ಬೀಳಲಿದೆ.

ಈ ಹಿಂದಿನ ಒಬಾಮ ಸರ್ಕಾರವು ವೀಸಾ ನಿಯಮ ಸಡಿಲಿಸಿ ಸುಮಾರು 71,000 ಎಚ್-1ಬಿ ವೀಸಾ ಪಡೆದ ಸಂಗಾತಿಗಳಿಗೆ ನೆರವಾಗಿತ್ತು. ಇವರಲ್ಲಿ ಶೇಕಡ 90ಕ್ಕೂ ಹೆಚ್ಚು ಉದ್ಯೋಗಿಗಳು ಭಾರತೀಯರಾಗಿದ್ದಾರೆ.

ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!

ಎಚ್-1ಬಿ ವೀಸಾ ಪಡೆದ ಉದ್ಯೋಗಿಗಳ ಸಂಗಾತಿಗಳಿಗೂ ಉದ್ಯೋಗ ಮಾಡಲು ಅವಕಾಶ ನೀಡುವ ನಿಟ್ಟಿನಲ್ಲಿ 2015ರಲ್ಲಿ ಎಚ್-4 ವೀಸಾವನ್ನು ಒಬಾಮ ಸರ್ಕಾರ ನೀಡಿತ್ತು. ಇದು ಸ್ಥಳೀಯರ ಉದ್ಯೋಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ . ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಕೂಗಿಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಬೆಲೆ ಕೊಟ್ಟಿದೆ.

ಎಚ್-1ಬಿ ವೀಸಾ ನೂತನ ನಿಯಮ

ಎಚ್-1ಬಿ ವೀಸಾ ನೂತನ ನಿಯಮ

ಟ್ರಂಪ್ ಸರ್ಕಾರದ ಹೊಸ ವೀಸಾ ನೀತಿ, ಉದ್ಯೋಗ ಹಾಗೂ ವಲಸೆ ನೀತಿಯಿಂದ ಎಚ್-1ಬಿ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ನಿರಾಕರಿಸುವ ಸಾಧ್ಯತೆಯಿದೆ. ಎಚ್-4 ವೀಸಾವನ್ನು ಇದೇ ಕಾರಣಕ್ಕೆ ಅಮೆರಿಕ ಆಡಳಿತ ನೀಡುತ್ತಿತ್ತು. ಎಚ್-4 ವೀಸಾವನ್ನು ಸುಮಾರು 1 ಲಕ್ಷ ಜನ ಪಡೆದಿದ್ದಾರೆ. ಇವರಲ್ಲಿ ಶೇ.94 ಮಂದಿ ಭಾರತೀಯರಾಗಿದ್ದಾರೆ.

ಹೊಸ ವೀಸಾ ನಿಯಮದ ಕರಡು ತಯಾರಾಗಿದೆ

ಹೊಸ ವೀಸಾ ನಿಯಮದ ಕರಡು ತಯಾರಾಗಿದೆ

ಹೊಸ ನಿಯಮದ ಕರಡು ತಯಾರಾಗಿದ್ದು, ಇನ್ನೂ ಕಾನೂನು ರೂಪ ಪಡೆಯಬೇಕಿದೆ. ಇದಕ್ಕೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಟ್ರಂಪ್ ಸರ್ಕಾರ ನಿರ್ಧರಿಸಿದೆ. ಆದರೆ, ಪತಿ ಹಾಗೂ ಪತ್ನಿಯು ಪ್ರತ್ಯೇಕವಾಗಿ ಎಚ್-1ಬಿ ವೀಸಾ ಪಡೆಯಲು ಅರ್ಹರಾಗಿದ್ದರೆ ಹಾಗೂ ಇಬ್ಬರು ಕೌಶಲ್ಯ ಆಧಾರದ ಮೇಲೆ ವೀಸಾ ಪಡೆದಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಎಚ್-1 ಬಿ ವೀಸಾ ಅವಲಂಬಿತ ಎಚ್ 4 ವೀಸಾ ಹೊಂದಿದವರಿಗೆ ಮಾತ್ರ ಸದ್ಯಕ್ಕೆ ಸಂಕಷ್ಟ ಎದುರಾಗಿದೆ.

ವೀಸಾ ಪರಿಶೀಲನೆ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿ

ವೀಸಾ ಪರಿಶೀಲನೆ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿ

ಎಚ್-1ಬಿ ವೀಸಾ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿರುವುದು, ಅಕ್ರಮವಾಗಿ ಕೌಶಲ್ಯ ಹೊಂದಿರದ ವ್ಯಕ್ತಿಗಳನ್ನು ಅಮೆರಿಕಕ್ಕೆ ಕಳಿಸುತ್ತಿರುವ ಬಗ್ಗೆ ಅಮೆರಿಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಹೀಗಾಗಿ,ವೀಸಾ ಪರಿಶೀಲನೆ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲು ಅಮೆರಿಕ ನಿರ್ಧರಿಸಿದೆ.ಅಮೆರಿಕದ ಕಂಪನಿಗಳು ಹಾಗೂ ಕೆಲ ಉದ್ಯೋಗಿಗಳು ಅಕ್ರಮದಲ್ಲಿ ಭಾಗಿಯಾದ ಶಂಕೆಯಿದೆ.

ಸ್ಥಳೀಯರಿಗೆ ಆದ್ಯತೆ ನೀಡಲು ನಿರ್ಧಾರ

ಸ್ಥಳೀಯರಿಗೆ ಆದ್ಯತೆ ನೀಡಲು ನಿರ್ಧಾರ

2015ರಿಂದ ಈಚೆಗೆ ಎಚ್ 1ಬಿ ವೀಸಾ ಹೊಂದಿರುವವರ ಬಾಳ ಸಂಗಾತಿ ಅಥವಾ ಉನ್ನತ ಕೌಶಲ ಇರುವವರು, ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ ವೀಸಾ ಇರುವಂಥವರು ಎಚ್ -4 ಅವಲಂಬಿತ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಉದ್ಯೋಗ ಮಾಡಬಹುದಿತ್ತು. ಒಬಾಮ ಆಡಳಿತಾವಧಿಯಲ್ಲಿ ಈ ನಿಯಮ ಪರಿಚಯಿಸಲಾಗಿತ್ತು.

ಆದರೆ, ಕಳೆದ ಅಧ್ಯಕ್ಷೀಯ ಚುನಾವಣೆ ಬಳಿಕ ಅಮೆರಿಕದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ.. ಹೀಗಾಗಿ ಎಚ್-4 ವೀಸಾ ರದ್ದು ಮಾಡುವ ಅನಿವಾರ್ಯತೆ ಎದುರಾಗಿದೆ

English summary
The Donald Trump administration is considering a proposal to stop issuing work permits to the spouses of H1-B visa holders to work in the US legally, a top federal agency source informed its lawmakers, PTI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X