ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿಗೆ ಅಲ್ಲಾ ಹೆಸರಿಡಲು ಹೋರಾಟದಲ್ಲಿ ಗೆದ್ದ ಅಟ್ಲಾಂಟ ದಂಪತಿ

ಅಮೆರಿಕದ ಅಟ್ಲಾಂಟದಲ್ಲಿನ ಈ ದಂಪತಿ ತಮ್ಮ ಮಗುವಿನ ಹೆಸರಿನಲ್ಲಿ ಅಲ್ಲಾ ಪದ ಇಟ್ಟಿದ್ದಾರೆ ಎಂಬ ಕಾರಣಕ್ಕೆ ಜನನ ಪ್ರಮಾಣ ಪತ್ರ ನೀಡಲು ನಿರಾಕರಿಸಲಾಗಿತ್ತು. ಇದೀಗ ಹೋರಾಟದ ನಂತರ ಆ ಹೆಸರು ಇಟ್ಟುಕೊಳ್ಳಲು ಅವಕಾಶ ಸಿಕ್ಕಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ಅಟ್ಲಾಂಟ, ಏಪ್ರಿಲ್ 21: ಈ ಪೋಷಕರು ತಮ್ಮ ಮಗುವನ್ನು ಝಲೈಕಾ ಗ್ರೇಸ್ ಫುಲ್ ಲಾರೈನಾ ಅಲ್ಲಾ ಎಂದು ಕರೆಯಲು ನಿರ್ಧರಿಸಿದರು. ಆದರೆ ಅಮೆರಿಕದಲ್ಲಿರುವ ಅಟ್ಲಾಂಟದ ಈ ದಂಪತಿಗೆ ಈ ಹೆಸರು ನೋಂದಣಿ ಮಾಡುವುದು ಸುಲಭವಾಗಿರಲಿಲ್ಲ. ಅಧಿಕಾರಿಗಳು ಅಲ್ಲಾ ಎಂಬ ಪದಕ್ಕೆ ಆಕ್ಷೇಪ ಮಾಡಿದರು. ಪೋಷಕರ ಹೆಸರಿನ ಭಾಗವಾಗಿಲ್ಲದ ಈ ಪದಕ್ಕೆ ತಕರಾರು ಮಾಡಿದರು.

ಪೋಷಕರು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಜನನ ಪ್ರಮಾಣಪತ್ರ ನೀಡಲು ನಿರಾಕರಿಸಿದರು. ಪೋಷಕರ ಹೆಸರಿನೊಂದಿಗೆ ಅಲ್ಲಾ ಪದ ಹೊಂದುತ್ತಿಲ್ಲ ಎಂಬುದು ಅಧಿಕಾರಿಗಳ ತಗಾದೆಯಾಗಿತ್ತು. ಆದರೆ ಈ ವಿವಾದವನ್ನು ನಾಗರಿಕ ಹಕ್ಕುಗಳ ಗುಂಪು ಕೈಗೆತ್ತಿಕೊಂಡಿತು. ಪೋಷಕರ ಪರವಾಗಿ ಹೋರಾಟ ನಡೆಸಲು ನಿರ್ಧರಿಸಿ, ದ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ಆಫ್ ಜಾರ್ಜಿಯಾ ಕಳೆದ ತಿಂಗಳು ದಾವೆ ಹೂಡಿತು.[ಕೆಲಸದಾಕೆಯನ್ನು ನಾಯಿಗಿಂತ ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ 87 ಲಕ್ಷ ರು ದಂಡ]

US parents win battle to name son Allah

ಈ ಪ್ರಕರಣವನ್ನು ಕೈ ಬಿಡುವುದಾಗಿ ಗುಂಪು ಹೇಳಿದ್ದು, ಜಾರ್ಜಿಯಾದ ಆರೋಗ್ಯ ಇಲಾಖೆಯು ಪೋಷಕರು ಆಯ್ಕೆ ಮಾಡಿಕೊಂಡ ಹೆಸರಿನಲ್ಲೇ ಜನನ ಪ್ರಮಾಣ ಪತ್ರ ನೀಡಿದೆ. ಇದೊಂದು ಪ್ರಮುಖ ವಿಜಯ ಎಂದು ಗುಂಪು ಹೇಳಿದ್ದು, ನಿಮ್ಮ ಮಗುವಿಗೆ ಯಾವ ಹೆಸರು ಇಡಬಾರದು ಎಂದು ಸರಕಾರ ಅಪ್ಪಣೆ ಕೊಡಲು ಸಾಧ್ಯವಿಲ್ಲ ಎಂದಿದೆ.

English summary
The Georgia Department of Health issued a birth certificate with the name that was chosen by the parents. A civil rights group termed this as a major victory and said that no government can dictate what you and cannot name your child. It goes against our values and also the intent of the legislature, the director of group Andrea Young said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X