• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧುಚಂದ್ರ ನಂತರ ಪತಿ ಕೊಂದ ಪತ್ನಿ

By Mahesh
|

ವಾಷಿಂಗ್ಟನ್, ಸೆ.13: 'ತುಂಬಾ ಸುಂದರವಾದ ಜೋಡಿ ನಿಮ್ಮ ಪ್ರಯಾಣ ಶುಭವಾಗಲಿ' ಎಂದು ಹೋಟೆಲ್ ರೂಮ್ ನವರು ಬೆಳಗ್ಗೆ ಇನ್ನೂ ಬೀಳ್ಕೊಟ್ಟಿದ್ದರು. ಮಧ್ಯಾಹ್ನದ ವೇಳೆಗೆ ಪತ್ನಿಯೊಬ್ಬಳೇ ಓಡಿ ಬಂದು ಪತಿ ನಾಪತ್ತೆ ಅಂದಳು. ಶವವಾಗಿ ಪತ್ತೆಯಾದ ಪತಿ ಹತನಾಗಿದ್ದು ಈಕೆ ಕೈಯಲ್ಲೇ ಎಂದು ತಿಳಿದಾಗ ಬೆಚ್ಚಿ ಬೀಳುವ ಸರದಿ ಎಲ್ಲರದ್ದಾಗಿತ್ತು.

22 ವರ್ಷದ ಜೋರ್ಡನ್ ಲಿನ್ ಗ್ರಾಹಮ್ ತನ್ನ 25 ವರ್ಷದ ಪತಿ ಕೊಡಿ ಲೀ ಜಾನ್ಸನ್ ಅವರನ್ನು ಭೀಕರವಾಗಿ ಕೊಂದಿದ್ದಾಳೆ ಎಂದು ಆರೋಪ ಹೊರೆಸಲಾಗಿದೆ. ಇಬ್ಬರು ಮದುವೆಯಾಗಿ ಇನ್ನೂ ಒಂದು ವಾರ ಕಳೆಯುವುದರೊಳಗೆ ಈ ದುರಂತ ನಡೆದಿದೆ. ಮಧುಚಂದ್ರಕ್ಕೆಂದು ಪತ್ನಿ ಜತೆ ಹೋದ ಪತಿ ಶವವಾಗಿ ಹಿಂತಿರುಗಿದ್ದಾನೆ.

ಪತಿ ನಾಪತ್ತೆಯಾಗಿದ್ದಾನೆ ಎಂದು ರೋದಿಸುತ್ತಿದ್ದ ಜೋರ್ಡನ್ ಮಾತನ್ನು ನಂಬಿ ಎಲ್ಲರೂ ಆಕೆಗೆ ಅನುಕಂಪ ತೋರಿಸಿದ್ದಾರೆ. ಆದರೆ, ವರದಿ ಪ್ರಕಾರ ಮೊಂಟಾನಾದ ಫ್ಲಾಥೆಡ್ ಕೌಂಟಿಗೆ ತೆರಳಿದ್ದ ಈ ಜೋಡಿ ಗ್ಲಾಸಿಯರ್ ನ್ಯಾಷನಲ್ ಪಾರ್ಕ್ ನಲ್ಲಿ ಬೆಟ್ಟ ಹತ್ತಲು ತೆರಳಿದ್ದಾರೆ. ಬೆಟ್ಟ ಹತ್ತಿದ ಮೇಲೆ ಕೊಡಿ ಅವರನ್ನು ಲಿನ್ ಮೇಲಿಂದ ತಳ್ಳಿ ಬಿಟ್ಟಿದ್ದಾರೆ.

ಅನುಕಂಪದ ಅಲೆ ಲಾಭ ಪಡೆದ ಲಿನ್ ತನ್ನ ಸುಳ್ಳು ಕಥೆಯನ್ನು ಮುಂದುವರೆಸುತ್ತಾ ಬಂದಿದ್ದಾರೆ. ಆದರೆ. ಪೊಲೀಸರಿಗೆ ತನಿಖೆ ಮೂಲಕ ಸತ್ಯದ ಅರಿವಾಗಿದೆ. ಲಿನ್ ಕೂಡಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದರೆ ಲಿನ್ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಬೆಟ್ಟದ ತುದಿಯಲ್ಲಿ ಲಿನ್ ಜತೆ ರಸಮಯ ಕ್ಷಣ ಕಳೆಯಲು ಕೊಡಿ ಇಚ್ಛಿಸುತ್ತಾರೆ ಆದರೆ, ಲಿನ್ ಆತನ ಜತೆ ಜಗಳವಾಡುತ್ತಾರೆ. ಮಾತಿಗೆ ಮಾತಿಗೆ ಬೆಳೆದು ಲಿನ್ ಹಿಡಿದು ಕೊಡಿ ಎಳೆಯುತ್ತಾರೆ. ಕೋಪಗೊಂಡ ಲಿನ್ ಆತನನ್ನು ತಳ್ಳುತ್ತಾರೆ. ಬೆಟ್ಟದಿಂದ ಬಿದ್ದ ಕೊಡಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೊಡಿ ಶವವನ್ನು ಪತ್ತೆ ಹಚ್ಚಿದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಕೊಡಿ ಜತೆ ಮದುವೆಯಾಗಲು ಲಿನ್ ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಜಗಳವಾಡಿಕೊಂಡು ಆಕೆಯೇ ಕೊಲೆಗೈದಿರಬಹುದು ಎಂದು ಸಂಬಂಧಿಕರು ನೀಡಿದ ಹೇಳಿಕೆ ಪೊಲೀಸರಿಗೆ ನೆರವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a tragic case of marital bliss turned sour, a newlywed wife has been charged for murdering her husband, barely after a week of their marriage in the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more