ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ-ಅಮೆರಿಕ ಸಂಬಂಧ, ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದ ಅಮೆರಿಕ!

|
Google Oneindia Kannada News

ಅದು 2ನೇ ಮಹಾಯುದ್ಧದ ಸಮಯ, ಅಣ್ಣ-ತಮ್ಮಂದಿರ ರೀತಿ ಒಗ್ಗಟ್ಟಾಗಿದ್ದ ಚೀನಾ-ಅಮೆರಿಕ ನಡುವೆ ಈಗ ಯಾವುದೂ ಸರಿ ಇಲ್ಲ. ಅರ್ಧ ಶತಮಾನದಲ್ಲಿ ಎರಡೂ ರಾಷ್ಟ್ರಗಳು ಆಜನ್ಮ ವೈರಿಗಳಂತೆ ಕಿತ್ತಾಡಿಕೊಂಡಿವೆ. ಅದರಲ್ಲೂ ದಕ್ಷಿಣ ಚೀನಾ ಸಮುದ್ರದ ವಿಚಾರಕ್ಕೆ ಎರಡೂ ರಾಷ್ಟ್ರಗಳ ಮಧ್ಯೆ ಕಿರಿಕ್ ಆಗ್ತಾನೆ ಇದೆ. ಈಗಲೂ ಅಷ್ಟೇ ಚೀನಾಗೆ ಚಾಲೆಂಜ್ ಮಾಡಿ ಅಮೆರಿಕ ಪವರ್‌ಫುಲ್ ಯುದ್ಧ ನೌಕೆಯನ್ನ ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸಿದೆ. 'ಯುಎಸ್ಎಸ್ ರೊನಾಲ್ಡ್ ರೇಗನ್' ಹೆಸರಿನ ಬಲಶಾಲಿ ನೌಕೆಯನ್ನ ವಿವಾದಿತ ಜಲಪ್ರದೇಶಕ್ಕೆ ಕಳುಹಿಸಿದೆ ಅಮೆರಿಕ.

ಸುಮಾರು 6 ಸಾವಿರ ಸಿಬ್ಬಂದಿ ಸೇರಿದಂತೆ ನೂರಾರು ಯುದ್ಧ ವಿಮಾನಗಳನ್ನ ಒಂದೇ ಬಾರಿಗೆ ಹೊತ್ತೊಯ್ಯು ಸಾಮರ್ಥ್ಯವನ್ನ ಅಮೆರಿಕದ ಈ 'ಯುಎಸ್ಎಸ್ ರೊನಾಲ್ಡ್ ರೇಗನ್' ಯುದ್ಧ ನೌಕೆ ಹೊಂದಿದೆ. ಅಮೆರಿಕದ ನೌಕಾದಳಕ್ಕೆ 'ರೊನಾಲ್ಡ್ ರೇಗನ್' ಆನೆಬಲ ತಂದುಕೊಟ್ಟಿದೆ. ವೈರಿಗಳಿಗೆ ತನ್ನ ಶಕ್ತಿ ತೋರಿಸಲು ಅಮೆರಿಕ ಆಗಾಗ ಈ ಯುದ್ಧ ನೌಕೆಯನ್ನ ಪ್ರದರ್ಶನ ಮಾಡ್ತಾನೆ ಇರುತ್ತೆ. ಈಗ ನೇರ ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕದ ನೌಕೆ ಎಂಟ್ರಿಯಾಗಿದ್ದು, ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ.

ಅಮೆರಿಕದ ಪಾಲಿಗೆ ‘ಬಲ ಭೀಮ’

ಅಮೆರಿಕದ ಪಾಲಿಗೆ ‘ಬಲ ಭೀಮ’

'ಯುಎಸ್ಎಸ್ ರೊನಾಲ್ಡ್ ರೇಗನ್' ಬರೀ ಯುದ್ಧ ನೌಕೆಯಲ್ಲ, ಬದಲಾಗಿ ಅದನ್ನ ಒಂದು ಊರು ಅಂತಾ ಕರೆಯಬಹುದು. ಏಕೆಂದರೆ ಅದರ ಉದ್ದ, ಅಗಲ ಅಷ್ಟೊಂದು ದೊಡ್ಡದಾಗಿದೆ. ಅದು ಬಿಡಿ, ಯುದ್ಧ ನೌಕೆ ತೂಕ ಹೊರುವ ಸಾಮರ್ಥ್ಯ ಕೂಡ ಅಚ್ಚರಿ ಉಂಟುಮಾಡುತ್ತದೆ. 1,092 ಅಡಿ ಉದ್ದವಿರುವ ಈ 'ರೊನಾಲ್ಡ್ ರೇಗನ್' ಒಂದೇ ಬಾರಿಗೆ 6000 ಸಿಬ್ಬಂದಿಗೆ ಜಾಗ ಕೊಡುತ್ತದೆ. 1 ಲಕ್ಷ ಟನ್ ಭಾರ ಹೊರುವ ಸಾಮರ್ಥ್ಯ ಈ ಯುದ್ಧ ನೌಕೆಗಿದೆ. 'ಯುಎಸ್ಎಸ್ ರೊನಾಲ್ಡ್ ರೇಗನ್'ಗೆ ಹೋಲಿಕೆ ಮಾಡಿಕೊಂಡರೆ ಇತರ ಹಲವು ನೌಕೆಗಳನ್ನ ಠುಸ್ ಪಟಾಕಿ ಎನ್ನಬಹುದು. ವೈರಿಗಳಿಗೆ ತಿರುಗೇಟು ಕೊಡಲು ಆಗಾಗ ಅಮೆರಿಕ ಯುಎಸ್ಎಸ್ ರೊನಾಲ್ಡ್ ರೇಗನ್ ಯುದ್ಧ ನೌಕೆಯನ್ನ ಪ್ರದರ್ಶನ ಮಾಡುತ್ತಲೇ ಬಂದಿದೆ.

5.3 ಟ್ರಿಲಿಯನ್ ಡಾಲರ್ ವಹಿವಾಟು..!

5.3 ಟ್ರಿಲಿಯನ್ ಡಾಲರ್ ವಹಿವಾಟು..!

ಆಶ್ಚರ್ಯವಾದರೂ ಇದು ನಂಬಲೇಬೇಕಾದ ವಿಚಾರ. ದಕ್ಷಿಣ ಚೀನಾ ಸಮುದ್ರ ತೈಲ ಹಾಗೂ ಅದಿರುಗಳನ್ನು ಮಾತ್ರ ಹೊಂದಿಲ್ಲ. ಸಂಪದ್ಭರಿತ ವ್ಯಾಪಾರವನ್ನೂ ನಡೆಸುತ್ತಾ ಬಂದಿದೆ. ಸೌತ್ ಚೀನಾ ಸಮುದ್ರ ಮಾರ್ಗವಾಗಿ ಪ್ರತಿವರ್ಷವೂ ಸುಮಾರು 5.3 ಟ್ರಿಲಿಯನ್ ಮೊತ್ತದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಇದು ಜಗತ್ತಿನಲ್ಲಿ ಜಲ ಮಾರ್ಗದ ಮೂಲಕ ನಡೆಯುವ ವ್ಯಾಪಾರದ 3ನೇ ಒಂದು ಭಾಗವಾಗಿದೆ. ಭಾರತವು ಕೂಡ ಪ್ರತಿವರ್ಷ 200 ಬಿಲಿಯನ್ ಡಾಲರ್ ಮೊತ್ತದ ವಹಿವಾಟನ್ನ ದಕ್ಷಿಣಚೀನಾ ಸಮುದ್ರ ಮಾರ್ಗದ ಮೂಲಕ ನಡೆಸುತ್ತದೆ. ಅಮೆರಿಕ, ಜಪಾನ್, ಚೀನಾ, ಕೊರಿಯಾ, ಆಸ್ಟ್ರೇಲಿಯಾ ಹೀಗೆ ಹತ್ತಾರು ದೇಶಗಳು ಇದೇ ಮಾರ್ಗ ಬಳಸಿ ವ್ಯಾಪಾರ ನಡೆಸುತ್ತಿವೆ. ಇದೇ ಕಾರಣಕ್ಕೆ ದಕ್ಷಿಣ ಚೀನಾ ಸಮುದ್ರ ಸಂಘರ್ಷದ ತಾಣವಾಗಿ ಮಾರ್ಪಟ್ಟಿದೆ.

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?

ಅಮೆರಿಕದ ಸರ್ಕಾರಿ ಸಂಸ್ಥೆ ನೀಡಿರುವ ಮಾಹಿತಿಯಂತೆ ದಕ್ಷಿಣ ಚೀನಾ ಸಮುದ್ರದಲ್ಲಿ 190 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ಅಡಗಿದೆ. ಇಷ್ಟು ಗ್ಯಾಸ್ ಸಿಕ್ಕರೆ ಹತ್ತಾರು ವರ್ಷ ಚೀನಾ ಯಾರ ಬಳಿಯೂ ನ್ಯಾಚ್ಯುರಲ್ ಗ್ಯಾಸ್‌ಗೆ ಕೈಚಾಚುವ ಅವಶ್ಯಕತೆ ಇರೋದಿಲ್ಲ. ಹಾಗೇ 11 ಬಿಲಿಯನ್ ಬ್ಯಾರೆಲ್‌ ಪೆಟ್ರೋಲ್, ಡೀಸೆಲ್ ಸಂಯುಕ್ತ ಇಲ್ಲಿ ಅಡಗಿದೆ. ಇಷ್ಟೇ ಆಗಿದ್ದರೆ ಚೀನಾ ಅಷ್ಟೊಂದು ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತಿತ್ತೇನೋ. ಆದರೆ ಇದೆಲ್ಲವನ್ನೂ ಮೀರಿಸುವ ಖಜಾನೆ ದಕ್ಷಿಣ ಚೀನಾ ಸಮುದ್ರದಲ್ಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೂಲ್ಯ ಅದಿರುಗಳಿವೆ. ಚಿನ್ನ ಸೇರಿದಂತೆ ಟಿನ್, ಕ್ರೋಮೈಟ್, ಮ್ಯಾಗ್ನಟೈಟ್, ಜಿರ್ಕಾನ್ ಮತ್ತಿತರ ಅದಿರುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಇಷ್ಟು ಪ್ರಮಾಣದ ಸಂಪತ್ತನ್ನು ಬಿಟ್ಟುಕೊಡಲು ಚೀನಾ ಬಿಲ್‌ಕುಲ್ ಸಿದ್ಧವಿಲ್ಲ.

ಸಮುದ್ರದಲ್ಲಿ ರಂಧ್ರ ಕೊರೆದರಾ..?

ಸಮುದ್ರದಲ್ಲಿ ರಂಧ್ರ ಕೊರೆದರಾ..?

ಅಂದಹಾಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಊಹೆಗೂ ಸಿಗದಷ್ಟು ನೈಸರ್ಗಿ ಸಂಪನ್ಮೂಲವಿದ್ದು, ಇದೇ ಕಾರಣಕ್ಕೆ ಅನುಮಾನಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪವಿದೆ. 2 ತಿಂಗಳ ಹಿಂದಷ್ಟೇ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸೇನೆ ಬೃಹತ್ ರಂಧ್ರ ಕೊರೆದಿದೆ ಎಂದು ಆರೋಪ ಮಾಡಲಾಗಿತ್ತು. 'ಸೀ ಬುಲ್-II' ಬಳಸಿ ದಕ್ಷಿಣ ಚೀನಾ ಸಮುದ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಗುಮಾನಿ ವ್ಯಕ್ತವಾಗಿತ್ತು. 2,060 ಮೀಟರ್ ಅಂದ್ರೆ 6,760 ಅಡಿ ಆಳದಲ್ಲಿ 231 ಮೀಟರ್ ರಂಧ್ರ ಕೊರೆದಿದ್ದಾರೆ ಎನ್ನಲಾಗಿತ್ತು. ಇಂತಹ ಆರೋಪಗಳ ಹಸಿಹಸಿಯಾಗಿ ಇರುವಾಗಲೇ ಚೀನಾ ಸೇನೆ ನೆರೆ ರಾಷ್ಟ್ರಗಳ ಜಲಗಡಿ ಉಲ್ಲಂಘನೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಮತ್ತೊಂದ್ಕಡೆ ಅಮೆರಿಕ ಯುದ್ಧ ನೌಕೆಯನ್ನ ವಿವಾದಿತ ಜಲಪ್ರದೇಶಕ್ಕೆ ಕಳುಹಿಸುತ್ತಿದೆ.

English summary
American navy deployed ‘USS Ronald Reagan’ warship in disputed South China Sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X