ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ನಲ್ಲಿ ಭಾರತೀಯ ವಿಜ್ಞಾನಿಗೆ ವಿಶಿಷ್ಟ ಗೌರವ

By Mahesh
|
Google Oneindia Kannada News

ವಾಷಿಂಗ್ಟನ್, ಜು.1: ಪ್ರಾಣಿ ಸಂಕುಲದ ಸಮಗ್ರ ಮಾಹಿತಿ ಸಂಶೋಧನೆಯಲ್ಲಿ ಅದ್ವಿತೀಯ ಸಾಧನೆ ಮಾಡಿ, ಜೈವಿಕ ಪ್ರವರ್ತಕರೆನಿಸಿರುವ ಭಾರತೀಯ ಮೂಲದ ವಿಜ್ಞಾನಿ ಅಖೌರಿ ಸಿನ್ಹಾ ಅವರ ಗೌರವಾರ್ಥ ಅಂಟಾರ್ಕ್ಟಿಕಾದಲ್ಲಿರುವ ಸುಂದರ ಪರ್ವತವೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಅಂಟಾರ್ಕ್ಟಿಕಾ ಈ ಪರ್ವತವನ್ನು ಜೈವಿಕ ವಿಜ್ಞಾನಿ ಅಖೌರಿ ಸಿನ್ಹಾ ಅವರ ಹೆಸರಿನಲ್ಲಿ ಕರೆಯಲಾಗುತ್ತದೆ ಎಂದು ಯುಎಸ್ ಸರ್ಕಾರದ ಮೂಲಗಳು ಪ್ರಕಟಿಸಿದೆ. ಮಿನ್ನೆಸೊಟ ವಿಶ್ವವಿದ್ಯಾನಿಲಯದಲ್ಲಿ ಅನುವಂಶಿವಾಹಿ (ತಳಿ), ಜೀವಕಣ-ಜೀವಶಾಸ್ತ್ರ ಮತ್ತು ಅಭಿವೃದ್ಧಿ ವಿಭಾಗದ ಪ್ರೊಫೆಸರ್ ಆಗಿದ್ದ ಸಿನ್ಹಾ ಅವರು 1971-72ರಲ್ಲಿ ಕೈಗೊಂಡ ಸಾಧನೆಯನ್ನು ಅಮೆರಿಕದ ಭೂ ವೈಜ್ಞಾನಿಕ ಸರ್ವೆ ಇಲಾಖೆ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಅಂಟಾಕ್ಟಿಕಾದ ಪರ್ವತಕ್ಕೆ 'ಮೌಂಟೇನ್ ಸಿನ್ಹಾ' ಎಂದು ನಾಮಕರಣ ಮಾಡಲಾಗಿದೆ.

ಸಿನ್ಹಾ ಅವರು 1972-74ರಲ್ಲಿ ಇಲ್ಲಿನ ಬೆಲಿಂಗ್‌ಶೌಸೇನ್(Bellingshausen) ಮತ್ತು ಆಮುಂಡ್‌ಸೇನ್(Amundsen) ಸಾಗರ ಪ್ರದೇಶಗಳಲ್ಲಿ ಸೀಲ್ ಪ್ರಾಣಿ, ತಿಮಿಂಗಿಲಗಳು ಹಾಗೂ ಹಲವು ಬಗೆಯ ಪಕ್ಷಿಗಳ ವಿಭಾಗೀಯ ಗಣತಿ ನಡೆಸಿದ ತಂಡದಲ್ಲಿ ಸಿನ್ಹಾ ಪ್ರಮುಖ ಪಾತ್ರ ವಹಿಸಿದ್ದರು.

US names mountain after an Indian-American scientist,

ಮೌಂಟೈನ್ ಸಿನ್ಹಾ ಎಂಬ ಹೆಸರನ್ನು ಸಲಹಾ ಸಮಿತಿ(Advisory Committee on Antarctic Names (US-ACAN) ) ಶಿಫಾರಸು ಮಾಡಿತ್ತು. 990 ಮೀಟರ್ ಎತ್ತರದ ಈ ಸುಂದರ ಪರ್ವತವು ಮೆಕ್‌ಡೊನಾಲ್ಡ್ ಪರ್ವತಶ್ರೇಣಿಯ ದಕ್ಷಿಣ ಭಾಗದಲ್ಲಿದ್ದು, ಉತ್ತರಕ್ಕೆ ಮೇರೀ ಬೈರ್ಡ್‌ಲ್ಯಾಂಡ್‌ಗೆ ಹೊಂದಿಕೊಂಡಿದೆ.

ಸಿನ್ಹಾ ಪರ್ವತವನ್ನು ಗೂಗಲ್ ಕಾಮ್ ಅಥವಾ ಬಿಂಗ್ ಕಾಂನಲ್ಲಿ ಯಾರಾದರೂ ವೀಕ್ಷಿಸಬಹುದಾಗಿದೆ. ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಕೂಡ ಸಿನ್ಹಾ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಅಮೆರಿಕಕ್ಕೆ ಬರುವ ಮೊದಲು ಭಾರತದ ಜಾರ್ಖಂಡ್ ನ ರಾಂಚಿಯಲ್ಲಿ 1956 ರಿಂದ 1961 ರ ತನಕ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿದ್ದ ಸಿನ್ಹಾ ಅವರು 22 ವಾರಗಳ ಕಾಲ ಅಂಟಾರ್ಕಿಕಾದಲ್ಲಿ ತಮ್ಮ ಸಂಶೋಧನೆ ನಡೆಸಿದರು. ಈಗಲೂ ಭಾರತಕ್ಕೆ ಬಂದಾಗ ತಮ್ಮ ಪೂರ್ವಿಕ ಮನೆ ಇರುವ ಚುರಮ್ ಪುರ್ ಗೆ ಭೇಟಿ ನೀಡುತ್ತೇನೆ ಎಂದು ಸಿನ್ಹಾ ಹೇಳಿದ್ದಾರೆ. [ಪ್ರೊ.ಸಿನ್ಹಾ ಬಗ್ಗೆ ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ]

English summary
The United States has named a mountain in Antarctica in honour of an eminent Indian-American scientist whose pioneering biological research expedition has provided critical data about animal populations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X