ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ವಿಶ್ವಕ್ಕೇ ವೈ-ಫೈ: ಇದು ಅಮೆರಿಕದ ಕನಸು

By Srinath
|
Google Oneindia Kannada News

ವಾಷಿಂಗ್ಟನ್, ಫೆ.26: ಇಡೀ ವಿಶ್ವಕ್ಕೇ ವೈ-ಫೈ! ಇದು ಅಮೆರಿಕದ ಕನಸು. ಸದ್ಯಕ್ಕೆ ನನಸೂ ಆಗಲಿದೆ. ಇದು ಜಾರಿಯಾದರೆ ನಿಜಕ್ಕೂ ಅಮೆರಿಕಕ್ಕೆ ಭಾರಿ ಶ್ರೇಯಸ್ಸು. ವಿಶ್ವ ಅಂತರ್ಜಾಲ ಭೂಪಟದಲ್ಲಿ ಯಶಸ್ಸು. ಆದರೆ ಎಲ್ಲರ ಆಂತರ್ಯಕ್ಕೂ ಕೈಹಾಕುವ ಅಮೆರಿಕದ ಈ ಪ್ರಯತ್ನದ ಹಿಂದೆ ಏನಾದರೂ ಹುನ್ನಾರ ಅಡಗಿದೆಯಾ? ಎಂದೂ ನೋಡಬೇಕಾಗುತ್ತದೆ.

ಅದೇನೇ ಇರಲಿ ಮೊದಲು ಇಡೀ ವಿಶ್ವಕ್ಕೇ ವೈ-ಫೈ ಜಾರಿಗೆ ಬರಲಿ. ಹೌದು ಅಮೆರಿಕದ ಖಾಸಗಿ ಕಂಪನಿಯೊಂದು Outernet ಅಭಿವೃದ್ಧಿಪಡಿಸುತ್ತಿದೆ. ಅದೂ ಉಚಿತವಾಗಿ ಭೂಮಿಯ ಮೇಲೆಲ್ಲಾ ಈ Outernet ಹರಿದಾಡಲು ಬಿಡುತ್ತದಂತೆ. ಇದರ ಕಲ್ಪನೆಯೇ ಅದ್ಭುತ. ಇಂತಹ ಒಂದು ಕನಸಿನ Outernet ನನಸಾದರೆ ನಿಜಕ್ಕೂ ಅದು ದೊಡ್ಡಮಟ್ಟದ ತಂತ್ರಜ್ಞಾನ ಕ್ರಾಂತಿಗೆ ನಾಂದಿ ಹಾಡಲಿದೆ.

America MDIF company to beam free wi-fi to world from space satellites constellation
ವಿಶ್ವದ ಮೂಲೆ ಮೂಲೆಯಲ್ಲೂ ಎಲ್ಲ ಜನರಿಗೂ ಉಚಿತವಾಗಿ, ಯಾವುದೇ ಸೆನ್ಸಾರ್ ಇಲ್ಲದೆಯೇ Internet ದಕ್ಕಬೇಕು ಎಂಬುದು ಕಂಪನಿಯ ಅಭಿಲಾಷೆಯಾಗಿದೆ ಎಂದು Media Development Investment Fund (MDIF) ಹೇಳಿದೆ.

ಆಕಾಶದಲ್ಲಿ ನೂರಾರು ಸಂಖ್ಯೆಯಲ್ಲಿ ಘನಾಕೃತಿಯ ಉಪಗ್ರಹಗಳ ಗುಚ್ಛವನ್ನು (cube satellites constellation) ತೇಲಾಡಿಬಿಡಲಾಗುವುದು. ಅದರ ಮೂಲಕ ಕೆಳಗೆ ಭೂಮಿಯ ಯಾವುದೇ ಮೂಲೆಯಲ್ಲಿದ್ದರೂ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಮೂಲಕ ಅಂತರ್ಜಾಲ ಸಂಪರ್ಕವನ್ನು ಯಾರು ಬೇಕಾದರೂ ಉಚಿತವಾಗಿ ಪಡೆಯಬಹುದಾಗಿದೆ.

ಸದ್ಯಕ್ಕೆ ಕಂಪ್ಯೂಟರ್ ಅಂತರ್ಜಾಲ ದುಬಾರಿ ಸೇವೆಯಾಗಿದೆ. ನೆಲದ ಮೇಲೆ ಅಂತರ್ಜಾಲ ಜಾಲ ಹರಡುವಿಕೆಗೆ ಅನೇಕ ಏಳುಬೀಳುಗಳು ಎದುರಾಗುತ್ತವೆ. ಹಾಗಾಗಿ ನೇರವಾಗಿ ಆಕಾಶಕ್ಕೆ ಲಗ್ಗೆ ಹಾಕಲಾಗಿದೆ ಎಂದು MDIF ಹೇಳಿದೆ.

ಆದರೆ ಇಂತಹ Outernet ವ್ಯವಸ್ಥೆಯನ್ನು ಅಳವಡಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಅಪಾರ ಹಣ ಖರ್ಚಾಗುತ್ತದೆ. ಏನಿಲ್ಲಾ ಅಂದ್ರೂ 3,00,000 ಬಿಲಿಯನ್ ಡಾಲರ್ ಹಣ ಬೇಕಾಗುತ್ತದೆ. ಅಷ್ಟು ಹಣ ದೊರೆಯುತ್ತಿದ್ದಂತೆ ಆಕಾಶಕ್ಕೆ ಉಪಗ್ರಹಗಳ ಗುಚ್ಛವನ್ನು ಹಾರಿಬಿಡುವ ಪ್ರಾಜೆಕ್ಟ್ ಲಾಂಚ್ ಮಾಡುತ್ತೇವೆ. ಮೂಂದಿನ ಬೇಸಿಗೆ ವೇಳೆಗೆ ಇದು ಕೈಗೂಡುವ ಸಾಧ್ಯತೆಯಿದೆ ಎಂದು MDIF ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

English summary
America MDIF company to beam free wi-fi to world from space satellites constellation by next summer. MDIF proposes that hundreds of cube satellites be built and launched to create a constellation of sorts in the sky, allowing anyone with a phone or computer to access Internet data. But building such a network would not be cheap. Such satellites typically run $100,000 to $300,000 to build and launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X