ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಿಂದ ಯಾವುದೇ ಕ್ಷಣದಲ್ಲಿ ಯುದ್ದ ಘೋಷಣೆ: ಚೀನಾ ಎಚ್ಚರಿಕೆ

ತನ್ನ ವಿರೋಧಿ ರಾಷ್ಟ್ರವಾಗಿರುವ ಉತ್ತರ ಕೊರಿಯಾದ ಮೇಲೆ ಅಮೆರಿಕಾ ಯಾವುದೇ ಕ್ಷಣದಲ್ಲಿ ಯುದ್ದ ಘೋಷಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಚೀನಾ ಎಚ್ಚರಿಕೆ ನೀಡಿದೆ. ನಮ್ಮ ತಂಟೆಗೆ ಅಮೆರಿಕಾ ಬಂದರೆ ಸೂಕ್ತ ಉತ್ತರ ನೀಡಲಿದ್ದೇವೆಂದು ಕೊರಿಯಾ ಎಚ್ಚರಿಕೆ

|
Google Oneindia Kannada News

ಬೀಜಿಂಗ್, ಏ 15: ಅಫ್ಘಾನಿಸ್ತಾನ- ಪಾಕಿಸ್ತಾನದ ಗಡಿಭಾಗದಲ್ಲಿರುವ ಉಗ್ರತಾಣಗಳ ಮೇಲೆ ಪರಮಾಣು ರಹಿತ ಜಿಬಿಯು-43 ಬಾಂಬ್ ಪ್ರಯೋಗಿಸಿರುವ ಅಮೆರಿಕಾ, ತನ್ನ ವಿರೋಧಿ ರಾಷ್ಟ್ರವಾಗಿರುವ ಉತ್ತರ ಕೊರಿಯಾದ ಮೇಲೆ ಯಾವುದೇ ಕ್ಷಣದಲ್ಲಿ ಯುದ್ದ ಘೋಷಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಚೀನಾ ಎಚ್ಚರಿಕೆ ನೀಡಿದೆ.

ದಾಳಿಯ ಸಾಧ್ಯತೆ ಅರಿತಿರುವ ಉತ್ತರ ಕೊರಿಯಾ, ನಮ್ಮ ತಂಟೆಗೆ ಅಮೆರಿಕಾ ಬಂದರೆ ಸೂಕ್ತ ಉತ್ತರ ನೀಡಲಿದ್ದೇವೆಂದು ಎಚ್ಚರಿಕೆ ನೀಡಿದೆ. (ಬಾಂಬ್ ಗಳ ಮಹಾತಾಯಿ ಅಂದರೆ ಏನು)

ಈ ನಡುವೆ ವಿಶ್ವದ ಹಲವು ರಾಷ್ಟ್ರಗಳ ಎಚ್ಚರಿಕೆಯ ನಡುವೆಯೂ, ಉತ್ತರ ಕೊರಿಯಾ ಮತ್ತೊಂದು ಸುತ್ತಿನ ಪರಮಾಣು ಪರೀಕ್ಷೆಗೆ ಮುಂದಾಗಿದ್ದು, ಇದರಿಂದಾಗಿ ಅಮೆರಿಕಾ ಮತ್ತು ಉ.ಕೊರಿಯಾ ನಡುವಿನ ಸಂಬಂಧ ತೀರಾ ಹದೆಗೆಟ್ಟಿದೆ.

ಫ್ರಾನ್ಸ್ ವಿದೇಶಾಂಗ ಸಚಿವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಚೀನಾದ ವಿದೇಶಾಂಗ ಸಚಿವ ವಾಂಗ್, ಉದ್ವಿಗ್ನತೆ ಹೆಚ್ಚಿಸುವ ಕೆಲಸಕ್ಕೆ ಎರಡೂ ರಾಷ್ಟ್ರಗಳು ಮುಂದಾಗಬಾರದು. ಮಾತುಕತೆ ಮೂಲಕ ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.

ಅಮೆರಿಕಾ ನೌಕಾಪಡೆಯ ಯುದ್ದ ಹಡಗುಗಳು ಉತ್ತರ ಕೊರಿಯಾದ ದ್ವೀಪಗಳ ಬಳಿ ಸಂಚರಿಸುತ್ತಿದೆ. ಪರಿಸ್ಥಿತಿ ನಿಯಂತ್ರಣ ಮೀರಿ ಹೋಗದಂತೆ ಎಚ್ಚರ ವಹಿಸಿ ಎಂದು ಕೊರಿಯಾ ಮತ್ತು ಅಮೆರಿಕಾಗೆ ಚೀನಾ ಮನವಿ ಮಾಡಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳು, ಮುಂದೆ ಓದಿ..

 ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ, ಕೊರಿಯಾ ಎಚ್ಚರಿಕೆ

ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ, ಕೊರಿಯಾ ಎಚ್ಚರಿಕೆ

ಚೀನಾ ನೀಡಿದ ಎಚ್ಚರಿಕೆಯ ಬೆನ್ನಲ್ಲೇ ಹೇಳಿಕೆ ನೀಡಿರುವ ಉತ್ತರ ಕೊರಿಯಾ, ನಮ್ಮ ಸೇನೆ ಎಲ್ಲದಕ್ಕೂ ಸಜ್ಜಾಗಿದೆ. ಅಮೆರಿಕಾ ಜೊತೆ ಸಂಬಂಧ ಹಾಳು ಮಾಡಿಕೊಳ್ಳಬೇಕೆಂದು ನಮಗೇನೂ ಇಲ್ಲ. ನಮ್ಮ ತಂಟೆಗೆ ಅಮೆರಿಕಾ ಬಂದರೆ ಅದಕ್ಕೆ ಸೂಕ್ತ ಉತ್ತರ ನೀಡುತ್ತೇವೆ. ನಮ್ಮ ಕ್ಷಿಪಣಿಗಳನ್ನು ಸನ್ನದ್ದವಾಗಿ ಇಡಲಾಗಿದೆ ಎಂದು ಕೊರಿಯಾ ಹೇಳಿದೆ. (ಚಿತ್ರ:ಪಿಟಿಐ)

 ಜಪಾನ್ ವಾಯುನೆಲೆಯಲ್ಲಿ ಅಮೆರಿಕ ಯುದ್ದವಿಮಾನ

ಜಪಾನ್ ವಾಯುನೆಲೆಯಲ್ಲಿ ಅಮೆರಿಕ ಯುದ್ದವಿಮಾನ

ಉತ್ತರ ಕೊರಿಯಾ ಮಿಲಿಟರಿಯ ಚಲನವಲನಗಳ ಮೇಲೆ ಕಣ್ಣಿಡಲು, ಅಮೆರಿಕಾ ವಾಯುಪಡೆಯ WC-135 ಯುದ್ದ ವಿಮಾನ ಜಪಾನಿನ ಕದೇನಾ ವಾಯುನೆಲೆಯಲ್ಲಿ ಬಂದಿಳಿದಿರುವುದರಿಂದ ಎರಡು ರಾಷ್ಟ್ರಗಳ ನಡುವೆ ಯುದ್ದ ನಡೆಯುವ ಸಾಧ್ಯತೆ ದಟ್ಟವಾಗಿದೆ.

 ಮತ್ತೊಂದು ಸುತ್ತಿನ ಪರಮಾಣು ಪರೀಕ್ಷೆ ಸಾಧ್ಯತೆ

ಮತ್ತೊಂದು ಸುತ್ತಿನ ಪರಮಾಣು ಪರೀಕ್ಷೆ ಸಾಧ್ಯತೆ

ಪರಮಾಣು ಪರೀಕ್ಷೆ ನಡೆಸಬಾರದು ಎನ್ನುವ ಎಚ್ಚರಿಕೆಯ ನಡುವೆ,' ದಿ ಡೇ ಆಫ್ ದಿ ಸನ್' ಎನ್ನುವ ಆಚರಣೆಯ ಹೆಸರಿನಲ್ಲಿ ಶನಿವಾರ (ಏ 15) ಕೊರಿಯಾ ಮತ್ತೊಂದು ಸುತ್ತಿನ ಪರಮಾಣು ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಐಎಎನ್ಎಸ್ ಸಂಸ್ಥೆ ವರದಿ ಮಾಡಿದೆ. (ಚಿತ್ರ:ಪಿಟಿಐ)

 ಪೆಂಟಗಾನ್ ಹೇಳಿಕೆ

ಪೆಂಟಗಾನ್ ಹೇಳಿಕೆ

ಉತ್ತರ ಕೊರಿಯಾದ ಮೇಲೆ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಸದ್ಯ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಅಮೆರಿಕಾದ ರಕ್ಷಣಾ ಸಚಿವಾಲಯ ಪೆಂಟಗಾನ್ ತಿಳಿಸಿದೆ. (ಚಿತ್ರ:ಪಿಟಿಐ)

 ರಷ್ಯಾ ಎಚ್ಚರಿಕೆ

ರಷ್ಯಾ ಎಚ್ಚರಿಕೆ

ಉತ್ತರ ಕೊರಿಯಾದ ಬೆಳವಣಿಗೆಯ ವಿಚಾರದಲ್ಲಿ ವಿಶ್ವದ ಇತರ ರಾಷ್ಟ್ರಗಳು ಮೂಗು ತೂರಿಸಬಾರದು ಮತ್ತು ಯಾವುದೇ ರಾಷ್ಟ್ರಗಳು ಪ್ರಚೋದನಕಾರಿ ಹೇಳಿಕೆ ನೀಡಬಾರದೆಂದು ರಷ್ಯಾ ಎಚ್ಚರಿಕೆ ನೀಡಿದೆ.

English summary
The US is prepared to launch strike against North Korea if Korea conducted nuclear weapons test again, External Affairs Minsiter of China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X