ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

72ರ ಸ್ವಾತಂತ್ರ್ಯ ಸಂಭ್ರಮ: ಭಾರತವನ್ನು ಕೊಂಡಾಡಿದ ಅಮೆರಿಕ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 16: 72ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸುತ್ತಿರುವ ಭಾರತವು ಪ್ರಜಾಪ್ರಭುತ್ವ ವೈವಿಧ್ಯತೆ ಹಾಗೂ ನ್ಯಾಯಸಮ್ಮತ ಆಡಳಿತಕ್ಕೆ ಹೆಸರಾದ ರಾಷ್ಟ್ರ ಎಂದು ಅಮೆರಿಕ ಬಣ್ಣಿಸಿದೆ.

ಸ್ವಾತಂತ್ರ್ಯೋತ್ಸವ ಅಂಗವಾಗಿ ಭಾರತಕ್ಕೆ ಶುಭಾಶಯ ಕೋರಿರುವ ಅಮೇರಿಕ ಸರ್ಕಾರದ ಕಾರ್ಯದರ್ಶಿ ಮಿಖಾಯಿಲ್‌ ಪೊಂಪಿಯೊ ಈ ಪ್ರಕಟಣೆಯನ್ನು ಹೊರಡಿಸಿದ್ದು, ಅತ್ಯಂತ ಪುರಾತನ ಹಾಗೂ ಸದೃಢ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾದ ಭಾರತ ಮತ್ತು ಅಮೆರಿಕನ್ನರ ಬಾಂಧವ್ಯ ಮತ್ತು ಸ್ನೇಹ ಎಂದಿನಂತೆ ಮುಂದುವರೆಯಲಿದೆ.

ಸ್ವಾತಂತ್ರ್ಯ ದಿನಕ್ಕೆ ಕನ್ನಡದಲ್ಲಿಯೂ ಶುಭ ಕೋರಿದ ಇಸ್ರೇಲ್ ಸ್ವಾತಂತ್ರ್ಯ ದಿನಕ್ಕೆ ಕನ್ನಡದಲ್ಲಿಯೂ ಶುಭ ಕೋರಿದ ಇಸ್ರೇಲ್

ಭಾರತ ಹಾಗೂ ಅಮೆರಿಕದ ನಡುವಣ ದ್ವಿಪಕ್ಷೀಯ ಸ್ನೇಹ ಹಾಗೂ ಹೊಸ ತಲೆಮಾರಿನ ನಡುವೆ ಏರ್ಪಡುತ್ತಿರುವ ಬಾಧವ್ಯವು ಇನ್ನಷ್ಟು ಸದೃಢವಾಗಿ ಮುಂದುವರೆಯಲಿದೆ. ಎರಡೂ ರಾಷ್ಟ್ರಗಳ ನಡುವೆ ವಿನಿಮಯ ಮಾಡಿಕೊಳ್ಳುತ್ತಿರುವ ಜ್ಞಾನ ಹಾಗೂ ಸಂಸ್ಕೃತಿಯ ಪರಂಪರೆ, ಎರಡೂ ರಾಷ್ಟ್ರಗಳ ಜನರಲ್ಲಿರುವ ಮೌಲ್ಯಗಳು ಹಾಗೂ ಆರೋಗ್ಯ, ಇಂಧನ, ಪರಿಸರ, ವಿಜ್ಞಾನ ಹಾಗೂ ಉತ್ತನ ತಂತ್ರಜ್ಞಾನ ಕ್ಷೇತ್ರದಲ್ಲಿನ ಪರಸ್ಪರ ಹೊಂದಾಣಿಕೆ ಎರಡೂ ರಾಷ್ಟ್ರಗಳ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಆಶಿಸಿದ್ದಾರೆ.

US looks towards India for better tomorrow

ಈ ಸ್ವಾತಂತ್ರ್ಯೋತ್ಸವದ ಸುಸಂದರ್ಭದಲ್ಲಿ ನಾಗರಿಕತೆ, ಪ್ರಜಾಪ್ರಭುತ್ವ ಹಾಗೂ ಉತ್ತಮ ಕಾರಣಕ್ಕಾಗಿ ಪರಸ್ಪರ ಬೆಂಬಲಿಸುವಿಕೆ ನಿರಂತರವಾಗಿ ಮುಂದುವರೆಯಲಿದೆ ಎಂದು ಭಾವಿಸುವುದಾಗಿ ಅಮೆರಿಕ ಹೇಳಿದೆ.

English summary
US state secretary Michael Pompeo has said vibrant Indian- American diaspora and growing number of young people strengthening ties between both countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X