ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಾಲಾ ಮೇಲೆ ಗುಂಡು ಹಾರಿಸಿದ್ದ, 130 ಮಕ್ಕಳ ಕೊಂದಿದ್ದ ಉಗ್ರನ ಹತ್ಯೆ

By ವಿಕಾಸ್ ನಂಜಪ್ಪ
|
Google Oneindia Kannada News

ವಾಷಿಂಗ್ಟನ್, ಜೂನ್ 16: ಪೇಶಾವರ ಎಂದೊಡನೆ ಯಾರಿಗಾದರೂ ನೆನಪಾಗುವುದು, ಕ್ಷಣಕಾಲ ಕರುಳು ಕಿವುಚುವುದು ಆ ಘಟನೆ. 2014 ರ ಡಿಸೆಂಬರ್ 16! ವಿದ್ಯೆ ಕಲಿಯುವದಕ್ಕೆ ಶಾಲೆಗೆ ತೆರಳಿದ್ದ ಏನೂ ಅರಿಯದ ಮುಗ್ಧ ಮಕ್ಕಳು ಮನೆಗೆ ಹಿಂದಿರುಗಿದ್ದು ಹೆಣವಾಗಿ!

ಪೇಶಾವರದ ಸೈನಿಕ ಶಾಲೆಯ 132 ಮಕ್ಕಳನ್ನು ನಿಷ್ಕಾರಣವಾಗಿ ಕೊಂದ ಆ ಪಾಪಿ ಉಗ್ರನೇ ಪಾಕಿಸ್ತಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸಫ್ಜಾಯ್ ಮೇಲೆ ಗುಂಡು ಹಾರಸಿದವ! ಮಕ್ಕಳಲ್ಲಿ ದೇವರನ್ನು ಕಾಣುವ ಬದಲು ಮಕ್ಕಳ ರಕ್ತದಲ್ಲೇ, ವಿಕೃತ ಸಂತೋಷ ಕಾಣುತ್ತಿದ್ದ ಈ ಪಾಪಿ ಕೊನೆಗೂ ಸತ್ತಿದ್ದಾನೆ. ಹಾಗಂತ ಅಮೆರಿಕದ ಮಾಧ್ಯಮಗಳು ಖಚಿತ ಪಡಿಸಿವೆ. ಕೆಲ ವರ್ಷದ ಹಿಂದೆಯೇ ಆತ ಸತ್ತಿದ್ದಾನೆಂಬ ಸುದ್ದಿ ಇತ್ತಾದರೂ ಆ ಸುದ್ದಿ ಸುಳ್ಳು ಎಂಬುದು ನಂತರ ತಿಳಿದಿತ್ತು. ಆದರೆ ಇದೀಗ ಡ್ರೋನ್ ದಾಳಿ ನಡೆಸುವ ಮೂಲಕ ಆತನನ್ನು ಅಮೆರಿಕ ಹೊಡೆದು ಹಾಕಿದೆ. ಈ ಮೂಲಕ 132 ಮಕ್ಕಳಾ ಆತ್ಮಕ್ಕೆ ಶಾಂತಿ ಸಿಕ್ಕಂತಾಗದೆ.

US kills Peshwar attack mastermind Mullah Fazlullah

ಪುತ್ರನ ಸಾವಿಗೆ 32 ಗಂಟೆಯಲ್ಲಿ ಪ್ರತೀಕಾರ: ಹುತಾತ್ಮ ಯೋಧನ ತಂದೆಯ ಆಕ್ರೋಶಪುತ್ರನ ಸಾವಿಗೆ 32 ಗಂಟೆಯಲ್ಲಿ ಪ್ರತೀಕಾರ: ಹುತಾತ್ಮ ಯೋಧನ ತಂದೆಯ ಆಕ್ರೋಶ

ತೆಹ್ರಿಕ್ ಇ ತಾಲಿಬಾನ್ ಅಥವಾ ಪಾಕಿಸ್ತಾನ್ ತಾಲಿಬಾನ್ ಎಂಬ ಉಗ್ರ ಸಂಘಟನೆಯ ಮುಖಂಡ ಈತ. 44 ವರ್ಷದ ಈತನ ಮುಖದಲ್ಲೇ ಕ್ರೌರ್ಯ ಎದ್ದು ಕಾಣುತ್ತದೆ. ರೆಡಿಯೋ ಮುಲ್ಲಾ ಎಂದೂ ಕರೆಸಿಕೊಳ್ಳುತ್ತಿದ್ದ ಈತ ಸುಶಿಕ್ಷಿತನೂ ಆಗಿದ್ದ.

ಮತಾಂಧತೆಯ ಅಮಲಿನಲ್ಲಿ ನೂರಾರು ಮಕ್ಕಳನ್ನು ಸಾಯಿಸಿ, ವಿಕೃತ ಆನಂದ ಪಡೆಯುತ್ತಿದ್ದ ಈ ಪಾಪಿಯನ್ನು ಕೊನೆಗೂ ಡ್ರೌನ್ ದಾಳಿಯಲ್ಲಿ ಮುಗಿಸಲಾಗಿದೆ.

English summary
A dangerous terrorist, he is said to be the one who shot Malala Yousafzai and also masterminded the dreaded Peshwar school attack. He headed the Pakistan Taliban also known as the Terhik-e-Taliban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X