ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಾನಾಗೆ ಸಿಕ್ಕು ನಲುಗಿದ ಅಮೆರಿಕಾದಲ್ಲಿ ಹೊರಬಿತ್ತು ಮಹತ್ವದ ಆದೇಶ!

|
Google Oneindia Kannada News

ವಾಶಿಂಗ್ ಟನ್, ಏಪ್ರಿಲ್.29: ಕೊರೊನಾ ವೈರಸ್ ಮಹಾಮಾರಿಗೆ ಸಿಕ್ಕು ನಲುಗಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಚಿತ್ರಣ ಇಂದಿಗೂ ಬದಲಾಗಿದೆ. ದಿನೇ ದಿನೆ ಸೋಂಕಿತರು ಮತ್ತು ಸಾವಿನ ಸಂಖ್ಯೆ ಏರುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಹೊರ ಬಿದ್ದಿದೆ.

Recommended Video

ದಿನಸಿ ತರ್ತೀನಿ ಅಂತ ಹೇಳಿ ಮದುವೆ ಮಾಡಿಕೊಂಡು ಮನೆಗೆ ಬಂದ ಭೂಪ | Oneindia Kannada

ಕೊರನಾ ವೈರಸ್ ಹಾವಳಿಯಿಂದ ಬೆದರಿದ ಯುಎಸ್ ಹೌಸ್ ಆಫ್ ರೆಪ್ರಸೆಂಟೆಟಿವ್ ಸದಸ್ಯರು ಸದ್ಯದ ಮಟ್ಟಿಗೆ ಕೆಲಸಕ್ಕೆ ಮರಳದಿರಲು ತೀರ್ಮಾನಿಸಿದ್ದಾರೆ. ಈ ಮೊದಲು ಮುಂದಿನ ವಾರದಿಂದ ಕಾರ್ಯಾರಂಭ ಮಾಡುವುದಕ್ಕೆ ದಿನಾಂಕ ನಿಗದಿಗೊಳಿಸಲಾಗಿತ್ತು.

ಕೊರೊನಾ ಕಾರಣ: ಆ ದೇಶದಲ್ಲಿ ಮಲೇರಿಯಾ ಸೋಂಕಿತರು ಡಬಲ್! ಕೊರೊನಾ ಕಾರಣ: ಆ ದೇಶದಲ್ಲಿ ಮಲೇರಿಯಾ ಸೋಂಕಿತರು ಡಬಲ್!

ಅಮೆರಿಕಾದಲ್ಲಿ ಬುಧವಾರದ ಅಂಕಿ-ಅಂಶಗಳ ಪ್ರಕಾರ, 10,35,765 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದ್ದು, 59,266 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. 1,42,238 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ 59,19,847 ಜನರನ್ನು ಕೊರೊನಾ ವೈರಸ್ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ದೇಶದ ಪರಿಸ್ಥಿತಿ ಅವಲೋಕನದ ನಂತರ ತೀರ್ಮಾನ

ದೇಶದ ಪರಿಸ್ಥಿತಿ ಅವಲೋಕನದ ನಂತರ ತೀರ್ಮಾನ

ಅಮೆರಿಕಾ ಹೌಸ್ ಮೆಜಾರಿಟಿ ಮುಖ್ಯಸ್ಥ ಸ್ಟೇನಿ ಹೊಯೆರ್ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್ ನಿಂದಾಗಿ ದೇಶದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಬಗ್ಗೆ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಗೂ ಸದಸ್ಯರೊಂದಿಗೆ ಚರ್ಚಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ವಾರದಿಂದ ಕರ್ತವ್ಯಕ್ಕೆ ಮರಳದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಕೊಲಂಬಿಯಾದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆ

ಕೊಲಂಬಿಯಾದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆ

ಅಮೆರಿಕಾದ ಕೊಲಂಬಿಯಾ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರುಮುಖವಾಗಿ ಸಾಗುತ್ತಿದೆ. ಹೌಸ್ ಸದಸ್ಯರಿಗೆ ಇದರಿಂದ ಅಪಾಯ ಎದುರಾಗುವ ಸಾಧ್ಯತೆಗಳಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಲಾಗಿದೆ ಎಂದು ಸ್ಟೇನಿ ಹೊಯೆರ್ ತಿಳಿಸಿದ್ದಾರೆ. ಇನ್ನು, ಕೊಲಂಬಿಯಾ ಜಿಲ್ಲೆಯೊಂದರಲ್ಲೇ ಇದುವರೆಗೂ 3,994 ಜನರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, 190 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 27,590 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಅಮೆರಿಕಾದಲ್ಲಿ ಸೆನೆಟ್ ಕಾರ್ಯಾರಂಭಕ್ಕೆ ಸನ್ನದ್ಧ

ಅಮೆರಿಕಾದಲ್ಲಿ ಸೆನೆಟ್ ಕಾರ್ಯಾರಂಭಕ್ಕೆ ಸನ್ನದ್ಧ

ಅಚ್ಚರಿಯ ವಿಚಾರ ಎಂದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಒಳಗೊಂಡಂತೆ ರಿಪಬ್ಲಿಕನ್ ಸದಸ್ಯರ ಅಮೆರಿಕಾದ ಸೆನೆಟ್ ಪೂರ್ವನಿಗದಿಯಂತೆ ಮುಂದಿನ ವಾರದಿಂದಲೇ ಕಾರ್ಯಾರಂಭ ಮಾಡಲಿದೆ. ಇದರ ಮಧ್ಯೆ ಡೆಮಾಕ್ರಟಿಕ್ ಸದಸ್ಯರನ್ನೊಳಗೊಂಡ ಹೌಸ್ ಸದಸ್ಯರ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಸದಸ್ಯರು ದೇಶದ ಬಗ್ಗೆ ಚಿಂತೆ ಮರೆತು ರಜೆಯನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ. ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಧ್ಯರಾತ್ರಿಯಲ್ಲಿ ಟಿವಿ ನೋಡುತ್ತಾ ಐಸ್ ಕ್ರೀಮ್ ತಿನ್ನುತ್ತಾ ಹಾಯಾಗಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿ ಕಾರಿದ್ದಾರೆ.

ಅಮೆರಿಕಾ ಅಧ್ಯಕ್ಷರ ವಿರುದ್ಧ ನ್ಯಾನ್ಸಿ ಪೆಲೋಸಿ ವಾಗ್ದಾಳಿ

ಅಮೆರಿಕಾ ಅಧ್ಯಕ್ಷರ ವಿರುದ್ಧ ನ್ಯಾನ್ಸಿ ಪೆಲೋಸಿ ವಾಗ್ದಾಳಿ

ಯುಎಸ್ ಹೌಸ್ ಆಫ್ ರೆಪ್ರಸೆಂಟೆಟಿವ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇತ್ತೀಚಿಗೆ MSNBC ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗುಡುಗಿದ್ದರು. ದೇಶ ಇತಿಹಾಸದಲ್ಲೇ ಕಂಡು ಕೇಳರಿಯದಂತಾ ಮಾರಕ ರೋಗಕ್ಕೆ ಸಿಕ್ಕು ನಲುಗಿದೆ. ನಿತ್ಯ ಸಾವಿರಾರು ಜನರು ಸೋಂಕಿತರಾಗುತ್ತಿದ್ದು, ನೂರಾರು ಮಂದಿ ಪ್ರಾಣ ಬಿಡುತ್ತಿದ್ದಾರೆ. ಇದರ ಮಧ್ಯೆ ನಿಷ್ಕಾಳಜಿ ತೋರುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಳಂಬ ಧೋರಣೆ ತೋರುತ್ತಿದ್ದು, ಸತ್ಯವನ್ನು ಒಪ್ಪಿಕೊಳ್ಳದೇ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ನ್ಯಾನ್ಸಿ ಪೆಲೋಸಿ ವಾಗ್ದಾಳಿ ನಡೆಸಿದ್ದರು.

English summary
US House Representatives Decided To Not Returned For Work Due To Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X