ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in : ಸಲಿಂಗ ವಿವಾಹ ರಕ್ಷಿಸುವ ಮಸೂದೆ ಅಂಗೀಕರಿಸಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜುಲೈ 20: ಸಲಿಂಗ ವಿವಾಹದ ಮಾನ್ಯತೆಯನ್ನು ಅಮೆರಿಕ ಸುಪ್ರೀಂಕೋರ್ಟ್ ಹಿಂತೆಗೆದುಕೊಳ್ಳಬಹುದು ಎಂಬ ಭಯದ ನಡುವೆಯೇ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರ (ಸ್ಥಳೀಯ ಸಮಯ) ಸಲಿಂಗ ವಿವಾಹ ಸಮಾನತೆಯನ್ನು ರಕ್ಷಿಸುವ ಮಸೂದೆಯನ್ನು ಅಂಗೀಕರಿಸಿದೆ.

'ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್' ಎಂಬ ಶೀರ್ಷಿಕೆಯ ಶಾಸನವು 267 ರಿಂದ 157 ಮತಗಳಲ್ಲಿ ಅಂಗೀಕರಿಸಲ್ಪಟ್ಟಿದೆ. 47 ರಿಪಬ್ಲಿಕನ್ನರು ಈ ಕ್ರಮವನ್ನು ಬೆಂಬಲಿಸಿದ್ದಾರೆ. ಆದರೆ ಸೆನೆಟ್‌ನಲ್ಲಿ ಅದರ ನಿರೀಕ್ಷೆಗಳು ಅನಿಶ್ಚಿತವಾಗಿವೆ. 100 ಸದಸ್ಯರಿರುವ ಸೆನೆಟ್‌ನಲ್ಲಿ ಡೆಮೋಕ್ರಾಟ್‌ಗಳು 50 ಸ್ಥಾನಗಳನ್ನು ಹೊಂದಿದ್ದಾರೆ. ಮಸೂದೆ ಅಂಗೀಕಾರವಾಗಲೂ 10 ಜನ ರಿಪಬ್ಲಿಕನ್‌ಗಳ ಮತಗಳು ಬೇಕಾಗುತ್ತದೆ.

Breaking: ಯುಎಸ್ ಫುಡ್ ಕೋರ್ಟ್‌ನಲ್ಲಿ ಗುಂಡಿನ ದಾಳಿ, 3 ಮಂದಿ ಸಾವುBreaking: ಯುಎಸ್ ಫುಡ್ ಕೋರ್ಟ್‌ನಲ್ಲಿ ಗುಂಡಿನ ದಾಳಿ, 3 ಮಂದಿ ಸಾವು

'ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್' ಮಸೂದೆಯು ಅಮೆರಿಕಾದ ರಾಜ್ಯಗಳಲ್ಲಿ ಮತ್ತೊಂದು ರಾಜ್ಯದಲ್ಲಿ ನಡೆದ ಮದುವೆಯನ್ನು ಮಾನ್ಯಗೊಳಿಸಲು ಒತ್ತಾಯಿಸುತ್ತದೆ. ಇದು LGBTQ+ ಒಕ್ಕೂಟಗಳಿಗೆ ಮಾತ್ರವಲ್ಲದೆ ಅಂತರ್ಜಾತಿ ವಿವಾಹಗಳಿಗೂ ರಕ್ಷಣೆ ನೀಡುತ್ತದೆ.

US House of Representatives passed Bill To Protect Same-Sex Marriage and interracial Marriages

ಜೊತೆಗೆ ಈ ಮಸೂದೆಯು 1996 ರ ಮದುವೆಯ ರಕ್ಷಣಾ ಕಾಯಿದೆಯನ್ನು ರದ್ದುಗೊಳಿಸುತ್ತದೆ. ಆ ಕಾಯಿದೆಯಲ್ಲಿ ಮದುವೆ ಎನ್ನುವುದು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ನಡುವಿನ ಸಂಬಂಧ ಎಂದು ವ್ಯಾಖ್ಯಾನಿಸುತ್ತದೆ. ಈ ಮಸೂದೆ LGBTQ+ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಪೂರ್ವಭಾವಿ ಹೆಜ್ಜೆಯಾಗಿದೆ ಎಂದು ಸೆನೆಟರ್ ಟಮ್ಮಿ ಬಾಲ್ಡ್ವಿನ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಜೂನ್ 24 ರಂದು ರಾಷ್ಟ್ರವ್ಯಾಪಿ ಗರ್ಭಪಾತದ ಹಕ್ಕುಗಳನ್ನು ಪ್ರತಿಪಾದಿಸುವ 1973 ರ ತೀರ್ಪು ರೋಯ್ ವಿ ವೇಡ್ ಅನ್ನು ರದ್ದುಗೊಳಿಸಿತು. ನ್ಯಾಯಾಲಯದ ಅತ್ಯಂತ ಸಂಪ್ರದಾಯವಾದಿ ನ್ಯಾಯಾಧೀಶರಲ್ಲಿ ಒಬ್ಬರಾದ ಕ್ಲಾರೆನ್ಸ್ ಥಾಮಸ್, ಗರ್ಭಪಾತದ ಹಕ್ಕುಗಳನ್ನು ರದ್ದುಗೊಳಿಸುವಲ್ಲಿ ಸಹಮತ ಹೊಂದಿದ್ದು, ಗರ್ಭನಿರೋಧಕ ಮತ್ತು ಸಲಿಂಗ ವಿವಾಹದ ಬಗ್ಗೆ ನ್ಯಾಯಾಲಯವು ತನ್ನ ತೀರ್ಪುಗಳನ್ನು ಪರಿಶೀಲಿಸಬೇಕು ಎಂದು ವಾದಿಸಿದ್ದಾರೆ.

US House of Representatives passed Bill To Protect Same-Sex Marriage and interracial Marriages

Recommended Video

ಮದುವೆ ಸಮಾರಂಭಕ್ಕೆ ಅಪ್ಪಳಿಸಿದ ದೈತ್ಯ ಅಲೆಗಳು: ಅಲ್ಲಿದ್ದವರ ಕಥೆ ಏನಾಯ್ತು ಅಂತ ನೋಡಿ.. *viral |OneIndia Kannada

ಆದರೂ ಮೇ ತಿಂಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಶೇಕಡಾ 71 ರಷ್ಟು ಅಮೆರಿಕನ್ನರು ಸಲಿಂಗಿಗಳ ಸಂಬಂಧಗಳನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಗರ್ಭನಿರೋಧಕ ಹಕ್ಕು ಕಾಯಿದೆಯ ಮೇಲೆ ಈ ವಾರದ ನಂತರ ಮತ ಚಲಾಯಿಸಲು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಯೋಜಿಸಿದೆ.

English summary
The US House of Representatives passed a bill that would provide federal protection for same-sex marriage. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X